May 19, 2024

Bhavana Tv

Its Your Channel

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ

ಬಾಗೇಪಲ್ಲಿ:- ತಾಲ್ಲೂಕಿನ ಪಾತಪಾಳ್ಯ ಗ್ರಾಮದ ವಿಶ್ವ ಪರಿಸರ ಮಾಸಾಚರಣೆ ಪ್ರಯುಕ್ತ ಪಾತಪಾಳ್ಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ಪರಿಸರ ಮಾಸಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಡಾ.ಪ್ರಿಯಾಂಕಾ ಅವರು ಚಾಲನೆ ನೀಡಿದರು.

ತದನಂತರ ಮಾತನಾಡಿ ಪರಿಸರ ಸಮತೋಲನ ಕಾಪಾಡಲು ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡುವ ಅಗತ್ಯ ತುಂಬಾ ಇದೆ. ಅರಣ್ಯ ನಾಶದಿಂದ ಮನುಕುಲವೇ ನಾಶವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಪರಿಸರ ಅಸಮತೋಲನದ ಪರಿಣಾಮಗಳಾಗಿವೆ. ಭೂಮಿಯ ತಾಪಮಾನ ಏರಿಕೆ, ಅತೀವೃಷ್ಟಿ, ಅನಾವೃಷ್ಟಿ, ಸುನಾಮಿ, ಸಾಂಕ್ರಮಿಕ ರೋಗಗಳು, ನೆರೆ ಪ್ರವಾಹಗಳು, ಭೂಕಂಪಗಳು ಮಾನವ ಅತಿಯಾಸೆಯಿಂದ ಪರಿಸರವನ್ನು ನಾಶಗೊಳಿಸುವದರಿಂದ ಸಂಭವಿಸುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಗಿಡ, ಮರ, ಬಳ್ಳಿಗಳನ್ನು ಬೆಳೆಸಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೆ ಸರಿ ಪಡಿಸಬೇಕು. ಇಲ್ಲದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಡಾಕ್ಟರ್ ಪಿ.ಎಸ್.ಪ್ರೀಯಾಂಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಧನಂಜಯ ಮೂರ್ತಿ ಮೇಲ್ವಿಚಾರಕರಾದ ಸೀಮಾ,ಮಂಜುಳ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: