May 20, 2024

Bhavana Tv

Its Your Channel

ದೆಹಲಿ ರೈತರ ಹೋರಾಟ ಬೆಂಬಲಿಸಿ ವಿವಿಧ ಸಂಘಟನೆಗಳಿoದ ಪ್ರತಿಭಟನೆ:-

ಬಾಗೇಪಲ್ಲಿ ; ತಾಲ್ಲೂಕು ಸಿಪಿಐಎಂ ಸಿಐಟಿಯು ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಸಹಯೋಗದಲ್ಲಿ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ನೂತನ ಕೃಷಿ ನೀತಿಗಳ ವಿರುದ್ಧ ಹಾಗೂ ಇನ್ನಿತರ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಪಿ.ಮಂಜುನಾಥ ರೆಡ್ಡಿ ಮಾತನಾಡಿ ಇಡಿ ಭಾರತದ ದೇಶದ ಚರಿತ್ರೆಯಲ್ಲಿ ೨೦೦ ದಿನಗಳ ಮೇಲ್ಪಟ್ಟು ನಿರಂತರವಾಗಿ ಒಂದು ವಿಚಾರಕ್ಕಾಗಿ ರೈತರು ಲಕ್ಷಾಂತರ ಜನ ಹೋರಾಟ ಮಾಡುತ್ತಿರುವ ನಿದರ್ಶನಗಳು ಇಲ್ಲ ಅದರೆ ೨೦೦ ದಿನಗಳು ಕಳೆದರೂ ಸಹ ಹೋರಾಟ ಮಾಡುತ್ತಿದ್ದಿರೂ ಕೇಂದ್ರ ಸರ್ಕಾರ ಮಾಡಿರುವ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಮೊಂಡುತನ ತೋರುತ್ತಿದ್ದಾರೆ. ಇಡೀ ದೇಶದಲ್ಲಿ ಲಕ್ಷಾಂತರ ಜನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿದರು ಸಹ ಅ ಹೋರಾಟಕ್ಕೆ ಕಿಂಚಿತ್ತೂ ಬೆಲೆಯನ್ನು ಕೋಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಕೇಂದ್ರ ಸರ್ಕಾರ,೧೯೭೫ ಜೂನ್ ೨೫ ತಾರೀಖು ಅವತ್ತಿನ ಇಂದಿರಾ ಗಾಂಧಿ ಸರ್ಕಾರ ಈ ದೇಶಕ್ಕೆ ತುರ್ತು ಪರಿಸ್ಥಿತಿ ಏರಿದ ದಿನ ಇವತ್ತಿಗೆ ೪೫ ವರ್ಷಗಳು ಕಳೆದಿದೆ, ಅವತ್ತು ಘೋಷಿತ ತುರ್ತು ಪರಿಸ್ಥಿತಿಯಾಗಿತ್ತು ಅದರೆ ಇವತ್ತು ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ ೪೫ವರ್ಷಗಳ ಹಿಂದೆ ಇದ್ದ ತುರ್ತು ಪರಿಸ್ಥಿತಿ ಈಗ ವಕ್ಕರಿಸಿದೆ ಎಂದು ಈ ದಿನವನ್ನು ಕರಾಳ ದಿನವೆಂದು ಹೋರಾಟ ಮಾಡುತ್ತಿದ್ದಿವೇ,ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಬೇಕು ,
ರೈತರ ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು, ವಿದ್ಯುತ್ ಖಾಸಗಿಕಾರಣವನ್ನು ವಾಪಸ್ ಪಡೆಯಬೇಕು, ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಕೆಪಿಆರ್ ಎಸ್ ತಾಲ್ಲೂಕು ಕಾರ್ಯದರ್ಶಿ ಶ್ರೀರಾಮಪ್ಪ ಡಿವೈಎಪ್ ಮುಖಂಡ ಹೇಮಚಂದ್ರ, ಮಹಮದ್ ಅಕ್ರಮ್,ಸಿಐಟಿಯು ಮುಖಂಡ ಆಂಜನೇಯ ರೆಡ್ಡಿ ಮುಸ್ತಫಾ,ಅಶ್ವಥಪ್ಪ, ಇನ್ನೂ ಮುಂತಾದವರು ಹಾಜರಿದ್ದರು

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: