April 26, 2024

Bhavana Tv

Its Your Channel

ಕೆಟ್ಟ ನಿಂತ ಜೆ.ಸಿ.ಬಿ ಮತ್ತು ಟ್ರಾಕ್ಟರ್ ಬಾಗೇಪಲ್ಲಿ ಪುರಸಭೆಯಲ್ಲಿ ಗುಜರಿ ಗಾಡಿಗಳದ್ದೇ ದರ್ಬಾರ್.!?

ಬಾಗೇಪಲ್ಲಿ:-ಪಟ್ಟಣದ ೨೩ ವಾರ್ಡಗಳಲ್ಲಿ ಸ್ವಚ್ಚತೆ ಮತ್ತು ಪರಿಸರ ಸ್ವಚ್ಛ ಗೊಳಿಸುವ ಸದುದ್ದೇಶದಿಂದ ಬಾಗೇಪಲ್ಲಿ ಪಟ್ಟಣದ ಪುರಸಭೆ ಆಡಳಿತ ಕೋಟ್ಯಾಂತರ ಹಣ ಖರ್ಚು ಮಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆಂದು ಖರೀದಿಸಿದ ಟ್ರಾಕ್ಟರ್ ಮತ್ತು ಜೆ ಸಿ ಬಿ ಯಂತ್ರಗಳು ತುಕ್ಕು ಹಿಡಿದು ತ್ಯಾಜ್ಯ ಸಂಗ್ರಹಿಸುವ ಟ್ರಾಕ್ಟರ್ ವಾಹನಗಳೀಗ ಗುಜರಿ ಅಂಗಡಿ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಆವರಣದಲ್ಲಿ ಸುಮಾರು ಎರಡು ವರ್ಷಗಳಿಂದ ಜೆ ಸಿ ಬಿ ಯಂತ್ರ ಮತ್ತು ಟ್ರಾಕ್ಟರ್ ಕೆಟ್ಟ ನಿಂತು ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ,ಬಾಗೇಪಲ್ಲಿ ಪಟ್ಟಣದ ಲಕ್ಷಾಂತರ ರೂಪಾಯಿಗಳು ತೆರಿಗೆ ರೂಪದಲ್ಲಿ ಸಂಗ್ರಹಿಸಿ, ಸಾರ್ವಜನಿಕರ ದುಡ್ಡಿನಿಂದ ಯಂತ್ರಗಳು ಖರೀದಿಸಿ ಆದರೆ ಅವುಗಳ ನಿರ್ವಹಣೆ ಮಾಡದೆ ತುಕ್ಕು ಹಿಡಿದು ಗುಜರಿ ಅಂಗಡಿಗಳಿಗೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಇನ್ನಾದರೂ ಪುರಸಭೆ ಆಡಳಿತ ಹೆಚ್ಚುತ್ತುಕೊಳ್ಳುತ್ತಾ ಎಂದು ಕಾದು ನೋಡಬೇಕು.

error: