May 3, 2024

Bhavana Tv

Its Your Channel

ಮಾರಾಟವಾಗದೆ ರಸ್ತೆ ಪಾಲಾಗುತ್ತಿದ್ದ ಟೊಮ್ಯಾಟೊ ಫಸಲಿಗೆ ಬಂಪರ್ ಬೆಲೆ

ಬಾಗೇಪಲ್ಲಿ:- ಪ್ರತಿ ಬಾರಿಯೂ ಬೆಲೆ ಕುಸಿತ ಹಾಗೂ ಕರೋನ ದಿಂದ ನಷ್ಟ ಮಾಡಿಕೊಳ್ಳುತ್ತಿದ್ದ ಟೊಮೆಟೋ ಬೆಳೆಗಾರರಿಗೀಗ ಶುಕ್ರದೆಸೆ. ವಾರದ ಹಿಂದೆ ಕೇವಲ ೫ ರಿಂದ ೧೦ ಕ್ಕೆ ಮಾರಾಟ ವಾಗುತ್ತಿದ್ದ ಪ್ರತಿ ಕೆ.ಜಿ.ಟೊಮೆಟೋ ಈಗ ೩೦ ರೂ ಗೆ ಮಾರಾಟ ಮಾಡುತ್ತಿದ್ದರೆ

ಕೆಲ ತಿಂಗಳ ಹಿಂದಷ್ಟೇ ರೈತರು ಬೆಳೆದ ಕಾಸೂ ಗಿಟ್ಟುತ್ತಿಲ್ಲ ಎಂದು ಆರೋಪಿಸಿ ಟೊಮೆಟೋವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದ ರೈತರು ೧೫ ಕೆ.ಜಿ ಬಾಕ್ಸ್ ಗೆ ೨೫೦ ರಿಂದ ೩೫೦ ರ ವರಿಗೆ ಟೊಮ್ಯಾಟೊ ಖರೀದಿಯಾಗುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ಕೊರೋನಾ ಸೋಂಕು ತಡೆಯುವುದಕ್ಕಾಗಿ ಹೇರಲಾದ ಲಾಕ್‌ಡೌನ್ ಪರಿಣಾಮದಿಂದಾಗಿ ಸೂಕ್ತ ಮಾರುಕಟ್ಟೆ ಜೊತೆಗೆ ನ್ಯಾಯಯುತ ಬೆಲೆ ಸಿಗದೇ ಆರ್ಥಿಕವಾಗಿ ತೀವ್ರ ಕಂಗಾಲಾಗಿದ್ದ ರೈತರಿಗೆ ಈಗ ಟೊಮ್ಯಾಟೋ ಕೈ ಹಿಡಿದಿದ್ದು, ಬರೋಬ್ಬರಿ ೧೫ ಕೆ.ಜಿ.ಯ ಟೊಮ್ಯಾಟೋ ಬಾಕ್ಸ್ ಈಗ ಬಾಗೇಪಲ್ಲಿ ಪಟ್ಟಣದ ಕೃಷಿ ಉನ್ನತ ಮಾರುಕಟ್ಟೆ ಯಲ್ಲಿ ೨೫೦ ರಿಂದ ೩೫೦ ರ ವರಿಗೆ ಮಾರಾಟವಾಗುತ್ತಿದೆ.

ಕೊರೋನಾ ಸಂಕಷ್ಟದಿAದ ಜಿಲ್ಲೆಯ ರೈತರು ಯಾವುದೇ ಬೆಳೆ ಇಟ್ಟರೂ ಮಾರುಕಟ್ಟೆ ಇಲ್ಲದೇ ಕೈಗೆ ಬಂದ ಬೆಲೆಗೆ ಮಾರಾಟ ಮಾಡಿ ಸಾಕಷ್ಟು ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಟೊಮ್ಯಾಟೋಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಬಹುತೇಕ ಲಾಕ್ಡೌನ್ ಹೇರಿದ್ದನಂತರ ರೈತರ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಲಾಕ್‌ಡೌನ್ ಆರಂಭದಲ್ಲಿ ಸೂಕ್ತ ಬೆಲೆ ಸಿಗದೆ ರೈತರು ತಮ್ಮ ಬೆಳೆಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಟೊಮ್ಯೋಟಾ ಸಹ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರನೆ ಹೆಚ್ಚಾಗಿದ್ದರಿಂದ ರೈತರಿಗೆ ನೆಮ್ಮದಿ ತಂದಿದೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ ಚಿಕ್ಕಬಳ್ಲಾಪುರ

.

error: