May 17, 2024

Bhavana Tv

Its Your Channel

ಕೆಂಪು ನೆಲದಲ್ಲಿ ಮತ್ತೆ ಮೊಳಗಲಿ ರೈತರ ಕಹಳೆ:ಮಾರಕ ಕಾಯ್ದೆ ಹಿಂಪಡೆಯಲು ಆಗ್ರಹ : ಎಡಪಂಥೀಯ ಚಿಂತಕ ಡಾ.ಅನಿಲ್ ಕುಮಾರ್ ಅವುಲಪ್ಪ

ಬಾಗೇಪಲ್ಲಿ:- ಅಂದು ರೈತರ ಹೋರಾಟಕ್ಕೆ ನಾಂದಿ ಹಾಡಿ ಹುತಾತ್ಮರಾದ ಅಚೇಪಲ್ಲಿ ದದ್ದಿಮಪ್ಪ ಹಾಗೂ ಮದ್ದಲಖಾನೆ ಆದಿನಾರಾಯಣ ರೆಡ್ಡಿ ವೀರ ಮರಣ ಹೊಂದಿ ಹುತಾತ್ಮರಾದರು ಆದರೆ ಈ ಕೆಂಪು ನೆಲದಲ್ಲಿ ರೈತರ ಮತ್ತೆ ಕಹಳೆ ಮೊಳಗಲಿದ್ದು, ಅಂದು ಬೆಟರ್ ಮೆಂಟ್ ಲೇವಿ ಕಾರಣವಾಗಿದ್ದರೆ ಇಂದು ಮಾರಕ ಕೃಷಿ ಕಾನೂನುಗಳು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿವೆ ಆದ್ದರಿಂದ ಮತ್ತೆ ಈ ಕೆಂಪು ನೆಲ ಹೋರಾಟದ ಕೆಂಬಾವುಟದ ಅಡಿಯಲ್ಲಿ ಮತ್ತೆ ರೈತರ ಕಹಳೆ ಮೊಳಗಲಿದೆ ಎಂದು ಹೇಳಿದರು.
ಬಾಗೇಪಲ್ಲಿ ಪಟ್ಟಣದ ಪ್ರವಾಸ ಮಂದಿರ ಬಳಿ ಹುತಾತ್ಮ ಸ್ತೂಪದ ಮುಂದೆ ಹುತಾತ್ಮರ ಸ್ತೂಪಕ್ಕೆ ಪುಷ್ಪಗಳನ್ನು ಹಾಕುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿ
ಬಾಗೇಪಲ್ಲಿ ಪಟ್ಟಣದಲ್ಲಿ ೧೯೮೦ ಆಗಸ್ಟ್ ೭ರಂದು ರೈತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಹಾರಿಸಿದ ಗುಂಡೇಟಿಗೆ ಇಬ್ಬರು ರೈತರು ಹುತಾತ್ಮರಾದರು ಅಂದಿನ ರಾಜ್ಯದ ಮುಖ್ಯಮಂತ್ರಿ ಗುಂಡೂರಾವ್ ಸರಕಾರದ ಆಡಳಿತ ಕಾಲದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನವಲಗುಂದ, ನರಗುಂದಗಳಲ್ಲಿ ರೈತರು ಹೋರಾಟಕ್ಕೆ ಇಳಿದಾಗ ಪೊಲೀಸರು ಹಾರಿಸಿದ ಗುಂಡಿಗೆ ರೈತರು ಬಲಿಯಾಗಿದ್ದರು. ಇದನ್ನು ಪ್ರತಿಭಟಿಸಿ ಮಾಜಿ ಶಾಸಕ ಎ.ವಿ.ಅಪ್ಪಸ್ವಾಮಿರೆಡ್ಡಿ ನೇತೃತ್ವದಲ್ಲಿ
ಸಾವಿರಾರರು ಜನರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಪೊಲೀಸರು ವಿನಾಕಾರಣ ಲಾಠಿ ಪ್ರಹಾರ ಮಾಡಿ ಕೊನೆಗೆ ಗೋಲಿಬಾರ್ ಮಾಡಿದಾಗ ತಾಲೂಕಿನ ಆಚೇಪಲ್ಲಿ ಗ್ರಾಮದ ದದ್ದಿಮಪ್ಪ,ಮದ್ದಲಖಾನ ಗ್ರಾಮದ ಆದಿನಾರಾಯಣರೆಡ್ಡಿ ಎಂಬ ರೈತರು ಹುತಾತ್ಮರಾದರು. ಅನೇಕ ರೈತರು ಗಾಯಗೊಂಡರು ಎಂದು ಹೇಳಿದರು.
ಕೇಂದ್ರದ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿ ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ಯಾವ ಸಮಸ್ಯೆಗೂ ಪರಿಹಾರ ನೀಡದೆ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಜನಾಂದೋಲನ ನಡೆಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಂತೀಯ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥ ರೆಡ್ಡಿ ಮಾತನಾಡಿ
ಈ ಭಾಗದಲ್ಲಿ ಕಳೆದ ೪೦ ವರ್ಷಗಳಿಂದ ಸಿಪಿಐಎಂ ಪಕ್ಷ ಚಾರಿತ್ರಿಕ ಹೋರಾಟ ನಡೆಯುತ್ತಿದೆ. ಅಲ್ಲದೆ, ೭ ತಿಂಗಳಿAದ ದೆಹಲಿಯಲ್ಲಿ ರೈತ ವಿರೋಧಿ ೩ ಕಾನೂನುಗಳನ್ನು ಹಿಂಪಡೆಯಬೇಕೆAದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ
ಇದು ರೈತ ವಿರೋಧಿಯಾಗಿದೆ. ಇದಲ್ಲದೆ ರೈತ ವಿರೋಧಿ, ಕಾರ್ಮಿಕ ವಿರೋಧಿ ಬಡವರ ವಿರೋಧಿ ಬೀದಿ ಬದಿ ವ್ಯಾಪಾರಿಗಳ ವಿರೋಧಿ, ರೈತ ವಿರೋಧಿ ಕಾನೂನುಗಳ ಆದ ಭೂ ಸುಧಾರಣಾ ಕಾಯ್ದೆ ಎಪಿಎಂಸಿ ಕಾಯಿದೆ ಕಾರ್ಮಿಕ ವಿರೋಧಿ ಕಾಯ್ದೆ ಅಂತಹ ಜನವಿರೋಧಿ ಕಾಯ್ದೆಗಳ ಮುಖಾಂತರ ಮತ್ತು ದೇಶದ ಸಂಪತ್ತುಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಿಎಸ್ಸೆನ್ನೆಲ್ ನಿಗಮ ಹಾಗೂ ಈಗ ಮಂಡಿಸಲು ಹೊರಟಿರುವ ಕೆಇಬಿ ಕಾಯ್ದೆಯಂತಹ ಸಾರ್ವಜನಿಕ ವಿರೋಧಿ ಕಾನೂನುಗಳನ್ನು ತಂದು ಈ ದೇಶದ ಜನರ ವಾಕ್ ಸ್ವಾತಂತ್ರ ಕಸಿದು ಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಮತ್ತು ಕೂಲಿ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ, ಮಹಿಳಾ ಜನವಾದಿ ರಾಜ್ಯ ಉಪಾಧ್ಯಕ್ಷೆ ಸಾವಿತ್ರಮ್ಮ, ವಾಲ್ಮೀಕಿ ನಗರದ ಅಶ್ವಥ್ಥಪ್ಪ, ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚAದ್ರ,ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಶ್ರೀರಾಮ ನಾಯಕ್ ಶ್ರೀರಾಮಪ್ಪ, ಪುರಸಭೆ ಮಾಜಿ ಸದಸ್ಯರಾದ ಮಹಮದ್ ಮದ್ದಲಖಾನೆ ರಘ ರಾಮಿರೆಡ್ಡಿ ಹಾಗೂ ಮತ್ತಿತರರು ಹಾಜರಿದ್ದರು.

ವರದಿ:- ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು.

error: