May 17, 2024

Bhavana Tv

Its Your Channel

ಬಾಗೇಪಲ್ಲಿ ಗೋಲಿಬಾರ್‌ಗೆ ೪೧ ವರ್ಷ: ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ

ಬಾಗೇಪಲ್ಲಿ:- ಗೋಲಿಬಾರ್‌ಗೆ ೪೧ ವರ್ಷವಾಗಿದ್ದು, ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ
೧೯೮೦ ಆಗಸ್ಟ್ ೭ ರಂದು ನವಲಗುಂದ ಮತ್ತು ನರಗುಂದ ಹೋರಾಟದ ಸ್ಪೂರ್ತಿಯೊಂದಿಗೆ ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು. ಗೋಲಿಬಾರ್‌ನಲ್ಲಿ ಅಚೇಪಲ್ಲಿ ದದ್ದಿಮಪ್ಪ ಮತ್ತು ಮದ್ದಲಖಾನೆ ಆದಿನಾರಾಯಣರೆಡ್ಡಿಯವರು ಬಲಿಯಾಗಿದ್ದರು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿ ಕೃಷಿ ಕೂಲಿ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದ್ದು ರೈತರನ್ನು ದಿವಾಳಿತನ ಮಾಡಿದೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸಲ್ ಅಡಿಗೆ ಅನಿಲ ರಸಗೊಬ್ಬರ ಹಾಗೂ ಬಿತ್ತನೆಬೀಜಗಳ ಏರಿಕೆ ಯಿಂದ ಜನಸಾಮಾನ್ಯರ ತೊಂದರೆ ಆಗಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದು ಅವರಿಗೆ ಕೃಷಿ ಭೂಮಿ ಮಾರಾಟ ಮಾಡುತ್ತಿರುವುದರಿಂದ ರೈತರು ಭೂಮಿ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ್. ಎಸ್. ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಜಿ.ಎಂ.ರಾಮಕೃಷ್ಣಪ್ಪ, ಚಂದ್ರಶೇಖರ ರೆಡ್ಡಿ, ಎಲ್.ವೆಂಕಟೇಶ್, ಟಿ.ಎಲ್. ವೆಂಕಟೇಶ್,ಗೋಪಾಲ ಕೃಷ್ಣ, ನರಸಿಂಹಪ್ಪ, ನಾರಾಯಣ ಸ್ವಾಮಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: