May 17, 2024

Bhavana Tv

Its Your Channel

ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಂಜೀವಿನಿ ಯೋಜನೆ ಸಹಕಾರಿ:-ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಮಹಿಳೆಯರ ಆರ್ಥಿಕ ಬಲವರ್ಧನೆಗೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಜಾರಿಗೊಳಿಸಿದೆ. ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗಬೇಕು. ಈ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹೇಳಿದರು.

ಅವರು ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ವ್ಯಾಪ್ತಿಯ ಸಂಜೀವಿನಿ ಯೋಜನೆಯಡಿಯಲ್ಲಿ ಪಾತಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಮುನಾ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ೧೬ ಲಕ್ಷ ೫೦ ಸಾವಿರ ಸಾಲದ ಚೆಕ್ ಅನ್ನು ೬೫ ಸ್ವ ಸಹಾಯ ಮಹಿಳಾ ಗುಂಪುಗಳಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ೭ ಮಹಿಳೆಯರಿಗೆ ಒಬ್ಬರಿಗೆ ೧ಲಕ್ಷ ೨೫ ಸಾವಿರ ಹಾಗೂ ೧೦ ಸಾಮಾನ್ಯ ಮಹಿಳೆಯರಿಗೆ ೭೫ ಸಾವಿರ ಸಾಲದ ಚೆಕ್ ವಿತರಣೆ ಮಾಡಿ
ಆರ್ಥಿಕ ಬಲವರ್ಧನೆಗೆ ಸಹಾಯವಾಗಲಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಇಓ ಮಂಜುನಾಥ ಸ್ವಾಮಿ, ತಾಲ್ಲೂಕು ಸಾಕ್ಷರತಾ ಸಂಯೋಜಕರಾದ ಶಿವಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೂರುಗಮಡುಗು ಲಕ್ಷ್ಮೀನರಸಿಂಹಪ್ಪ,,ಗ್ರಾಮ ಪಂಚಾಯತಿ ಅದ್ಯಕ್ಷೆ ಕೃಷ್ಣಮ್ಮ, ಉಪಾಧ್ಯಕ್ಷೆ ರಾಧಮ್ಮ ವೆಂಕಟರೆಡ್ಡಿ, ಯಮುನಾ ಸಂಜೀವಿನಿ ಒಕ್ಕೂಟದ ಅದ್ಯಕ್ಷೆ ರಾಮಲಕ್ಷಮ್ಮ ಸುರೇಶ್, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾರ್ಯದರ್ಶಿ ದೇವಿ, ಖಜಾಂಚಿ ಪಾರ್ವತಮ್ಮ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: