May 17, 2024

Bhavana Tv

Its Your Channel

ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಬಾಗೇಪಲ್ಲಿ ತಾಲ್ಲೂಕು ಸೇವಾ ಕೇಂದ್ರದಲ್ಲಿ ರಾಖಿ ಹಬ್ಬದ ಸಂಭ್ರಮ

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

ಬಾಗೇಪಲ್ಲಿ:-ಪಟ್ಟಣದ ಪುರಸಭೆ ಹಿಂಭಾಗದಲ್ಲಿ ಇರುವ
ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಬಾಗೇಪಲ್ಲಿ ತಾಲ್ಲೂಕು ಸೇವಾ ಕೇಂದ್ರದ ಮೀರಾ ಅಕ್ಕರವರು – ಸಹೋದರ, ಸಹೋದರಿಯರಿಗೆ ಆತ್ಮೀಯವಾಗಿ ರಾಖಿ ಕಟ್ಟಿ ಶುಭ ಸಂದೇಶ ನೀಡುವ ಮೂಲಕ ರಾಖಿ ಹಬ್ಬವನ್ನು ಸರಳವಾಗಿ ಆಚರಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ,
ಸಹೋದರ, ಸಹೋದರಿಯರ ಭಾವೈಕ್ಯತೆ ಸಾರುವ ವಿಶೇಷ ದಿನ, ಅದುವೇ ರಕ್ಷಾ ಬಂಧನ. ರಕ್ಷಾಬಂಧನ ಹಬ್ಬವು ಕೇವಲ ಸಹೋದರ-ಸಹೋದರಿಯರಿಗೆಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬ ಸ್ತ್ರೀ-ಪುರುಷರ ನಡುವೆ ಇರುವ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ, ಕರ್ತವ್ಯದ ಮತ್ತು ಆತ್ಮೀಯ ಸಂಬAಧದ ಪ್ರತೀಕವಾಗಿದೆ.
ಸನಾತನ ಧರ್ಮದ ಪ್ರಕಾರ, ರಕ್ಷಾಬಂಧನದ ದಿನದಂದು ಅಣ್ಣ ಮತ್ತು ಅಕ್ಕ ತಂಗಿ ಯಿರಿಗೆ ರಾಖಿ ಕಟ್ಟಿದರೆ, ಅವರು ವರ್ಷಪೂರ್ತಿ ಸಂತೋಷ ಮತ್ತು ಗೌರವವನ್ನು ರಕ್ಷಿಸುತ್ತಾರೆ. ಆದರೆ ರಕ್ಷಾಬಂಧನ ಪರಮಾತ್ಮನ ಶ್ರೀರಕ್ಷೆಯಾಗಿದೆ, ಈಗಿನ ಸಮಯದ ಅನುಸಾರವಾಗಿ ನೋಡಿದರೆ ಪ್ರಪಂಚದಲ್ಲಿ ರಕ್ಷಣೆ ಅನ್ನುವುದು ಕಡಿಮೆಯಾಗಿದೆ, ಈ ಕಾರಣದಿಂದ ಈ ಸೃಷ್ಟಿಯ ಎಲ್ಲರನ್ನು ರಕ್ಷಣೆ ಮಾಡಲು ಪರಮಾತ್ಮ ಬಂದಿದ್ದಾರೆ. ಈಗ ಜೀವನದಲ್ಲಿ ಬರುವ ತೊಂದರೆಗಳನ್ನು ಮತ್ತು ಕಷ್ಟಗಳನ್ನು ಸಹ ನಿವಾರಿಸಲು ಪರಮಾತ್ಮ ಬಂದಿದ್ದಾರೆ ಎಂದು ಹೇಳಿದರು.

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಂಸ್ಥೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಂಸ್ಥೆ ತೊಡಗಿಸಿಕೊಂಡಿದೆ. ಮನಸ್ಸು ಹೇಗೆ ಯೋಚಿಸುತ್ತದೋ ಹಾಗೆ ಇರುತ್ತೇವೆ. ನಾವು ಸ್ವಸ್ಥನಾಗಿದ್ದೇವೆ ಎಂದು ಭಾವಿಸಬೇಕು, ಆಗ ನಮ್ಮ ಕಷ್ಟಗಳು ದೂರವಾಗಿ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ. ನಮ್ಮ ವಿದ್ಯಾಲಯದ ವತಿಯಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಜ್ಯೋತಿ ಗೋವರ್ಧನ ಚಾರಿ, ಲಕ್ಷ್ಮೀದೇವಮ್ಮ,ಗೀತಮ್ಮ, ವೆಂಕಟಲಕ್ಷಮ್ಮ,ಶೋಭಕ್ಕ ,ಅನಸೂಯಾಮ್ಮ, ಪಾತಪಾಳ್ಯ ಮಂಜುಳಾ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

error: