May 17, 2024

Bhavana Tv

Its Your Channel

ಪುರಸಭೆ ಕಂದಾಯ ವಸೂಲಿ ಆಂದೋಲನ

ಬಾಗೇಪಲ್ಲಿ:-ಪುರಸಭೆಯಿoದ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಆರ್ಥಿಕ ಮೂಲವಾದ ಕಂದಾಯ ವಸೂಲು ಆಂದೋಲನದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆ, ನೀರಿನ ಕಂದಾಯ ಪಾವತಿ ಮತ್ತು ವಾಣಿಜ್ಯ ಪರವಾನಗಿಗಳನ್ನು ನವೀಕರಿಸುವ ಮೂಲಕ ಪಾಲ್ಗೊಳ್ಳಬೇಕೆಂದು ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ಮಧುಕರ್.ಕೆ ಕರೆ ನೀಡಿದರು.
ಇಂದು ಬಾಗೇಪಲ್ಲಿ ಪಟ್ಟಣದ ಎಸ್.ಎಸ್ ವೈ.ಜ್ಞಾನ ಮಂದಿರ ಆರ್ಚ ಹತ್ತಿರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ವಸೂಲು ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆ.೨೩/೮/೨೦೨೧ ರಿಂದ ೨೧/೯/೨೦೨೧ರವರೆಗೆ ಈ ಆಂದೋಲನವು ನಡೆಯಲಿದ್ದು ರಸ್ತೆ, ಬೀದಿದೀಪ ನಿರ್ವಹಣೆ, ಸ್ವಚ್ಛತೆ, ಕುಡಿಯುವ ನೀರು, ಸಿಬ್ಬಂದಿಯ ಸಂಬಳ ಮುಂತಾದ ವೆಚ್ಚಗಳು ಮತ್ತು ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆ ಕಂದಾಯದ ಮೇಲೆ ಅವಲಂಬಿಸಿದೆ. ಸಾರ್ವಜನಿಕರು ಸ್ಥಳದಲ್ಲೇ ಹಣ ಪಾವತಿಸಿ ನೀರಿನ ರಶೀದಿ ಪಡೆಯಬಹುದು.

ಈ ಬಾರಿ ಇನ್ನೂ ಹೆಚ್ಚಿನ ಗುರಿ ಸಾಧಿಸುವ ನಿರೀಕ್ಷೆ ಇದ್ದು ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಆದೇಶದಂತೆ ೨/೮/೨೦೨೧ ರಿಂದ೩೧/೮/೨೦೨೧ ವರಿಗೆ ಕಂದಾಯ ಪಾವತಿಸುವವರಿಗೆ ಶೇ ೫ ರಿಯಾಯಿತಿ ನೀಡಲಾಗುವುದು, ನೀರಿನ ಕರ ವಸೂಲಿಗಾಗಿ ಮತ್ತು ವಾಣಿಜ್ಯ ಪರವಾನಗಿ ನವೀಕರಣಗಳನ್ನು ಬಾಕಿ ಸಹಿತ ವಸೂಲು ಮಾಡಲಾಗುವುದು. ಹೆಚ್ಚಿನ ಕಂದಾಯ ಉಳಿಸಿಕೊಂಡಿರುವವರ ಮನೆಯ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಎಚ್ಚರಿಸಿದರು.

ಆಂದೋಲನದಲ್ಲಿ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆಸ್ತಿ ತೆರಿಗೆ ಪಾವತಿ ಪುರಸಭೆ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಲು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆವ್ಯವಸ್ಥಾಪಕರಾದ ಶಿವಶಂಕರ್, ಅತಾವುಲ್ಲಾ, ಗಿರೀಶ್, ಇನಾಯಿತ್ತುಲ್ಲಾ,ರಮೇಶ್,ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಪತ್ರಕರ್ತರು ಬಾಗೇಪಲ್ಲಿ ತಾಲ್ಲೂಕು

error: