September 27, 2021

Bhavana Tv

Its Your Channel

ಅಧಿಕಾರಿಗಳ ನಿರ್ಲಕ್ಷ, ಕಾಮಗಾರಿ ಪೂರ್ಣಗೊಳಿಸದೆ ಗಟಾರದಲ್ಲಿ ಕೊಳಚೆ, ಸಾಂಕ್ರಾಮಿಕ ರೋಗ ಹರಡುವ ಬೀತಿ,

ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ.

ಬಾಗೇಪಲ್ಲಿ ; ಎನ್ ಹೆಚ್ ೭ ರಸ್ತೆಯಿಂದ ಬಾಗೇಪಲ್ಲಿ ಗೆ ಹಾದು ಹೋಗುವ ಟಿ ಬಿ ಕ್ರಾಸ್ ನಿಂದ ಪ್ರವಾಸ ಮಂದಿರ ದವರೆಗೂ ಚರಂಡಿ ಕಾಮಗಾರಿ ನಡೆಸದೆ ಚರಂಡಿಗೆ ಹಾಕಲಾದ ಬಂಡೆಗಳು ಕಿತ್ತು ಹಾಕಿಸಿರುವ ಅಧಿಕಾರಿಗಳು ಚರಂಡಿ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಚರಂಡಿಯಲ್ಲಿ ನೀರು ನಿಂತಿವೆ. ಈ ನೀರು ಹೋಟೆಲ್ ಗಳಿಂದ ಬರುವ ನೀರು ಬಹಳ ದುರ್ವಾಸನೆ ಬರುತ್ತಿರುವ ಕಾರಣದಿಂದ ಸಾರ್ವಜನಿಕರಿಗೆ ರೋಗ-ರುಜೀನಗಳು ಬರುವ ಸಾಧ್ಯತೆ ಇರುವುದರಿಂದ ಸಂಬAಧಿಸಿದ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕೆಂದು ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಎನ್ ನಾರಾಯಣ ಸ್ವಾಮಿ ರವರು ಆಗ್ರಹಿಸಿದರು. ಈ ಕಾಮಗಾರಿ ಬೇಗ ಪೂರ್ಣಗೊಳಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

error: