April 26, 2024

Bhavana Tv

Its Your Channel

ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಭರ್ತಿ

ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಪರಗೋಡುವಿನ ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಪಟ್ಟಣದ ಜನತೆ ಸಂಭ್ರಮ ಸಡಗರದಿಂದ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರಾವತಿ ನದಿಯು, ಚಿಕ್ಕಬಳ್ಳಾಪುರ ಜಿಲ್ಲೆಯ ಉತ್ತರ ಪಿನಾಕಿನಿ ನದಿಯ ಉಪನದಿ. ನಂದಿಬೆಟ್ಟದ ಉತ್ತರಕ್ಕೆ ೧೪ ಕಿ.ಮೀ ದೂರದಲ್ಲಿರುವ ಕರಗಾನಪಾಳ್ಯದ ಬೆಟ್ಟದ ಬಳಿ ಬಿದ್ದ ಮಳೆ ನೀರು ಈಶಾನ್ಯಾಭಿಮುಖವಾಗಿ ವರ್ಲಕೊಂಡ ಬೆಟ್ಟದ ಪಕ್ಕದಲ್ಲಿ ಸಾಗಿ, ಈ ದಾರಿಯಲ್ಲಿ ಮತ್ತಷ್ಷು ನೀರಿನ ಸೆಲೆಗಳನ್ನು ಬರಸೆಳೆದುಕೊಂಡು ಜಿಲ್ಲೆಯಲ್ಲಿ ೭೦ ಕಿ.ಮೀ ದೂರ ಪಯಣಿಸಿ, ಪಟ್ಟಣದ ಪಶ್ಚಿಮ ಭಾಗದಲ್ಲಿ ಹರಿದು ಆಂಧ್ರಪ್ರದೇಶದ ಬುಕ್ಕಪಟ್ಟಣಂ ಕೆರೆಯನ್ನು ಸೇರುವ ನದಿ.

ಕುಡಿಯಲು ನೀರು ಕೊಟ್ಟು, ಬೆಳೆಗಳಿಗೆ ನೀರುಣಿಸಿ, ಸಸ್ಯ ಹಾಗು ಪ್ರಾಣಿ ಸಂಕುಲಗಳನ್ನು ಸಲಹುತ್ತಿರುವ ಈ ಚಿತ್ರಾವತಿಯೊಂದಿಗೆ ಭಾವನಾತ್ಮಕವಾದ ಸಂಭAದವನ್ನು ಇಲ್ಲಿನ ಪೂರ್ವಿಕರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನದಿಯನ್ನು ದೇವತೆಯೆಂದೇ ಪೂಜಿಸುತ್ತಿದ್ದರಲ್ಲದೆ ದೇವಲೋಕದ ಅಪ್ಸರೆಯ ಹೆಸರನ್ನೇ ಚಿತ್ರೆ ಎಂದೆ ಆಕೆಗೆ ಕೊಟ್ಟಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ನದಿಗೆ ಪಟ್ಟಣದ ಹೊರವಲಯದ ಪರಗೋಡುವಿನ ಬಳಿ ಅಣೆಕಟ್ಟನ್ನು ನಿರ್ಮಾಣ ಮಾಡಿ ಈ ಭಾಗದ ಜನತೆಗೆ ಕುಡಿಯುವ ನೀರನ್ನು ಕೊಡುವ ಉದ್ದೇಶದಿಂದ ಈ ಅಣೆಕಟ್ಟನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದಾಗ, ಆಂಧ್ರ-ಕರ್ನಾಟಕ ನಡುವೆ ವಾದವಿವಾದಗಳು ನಡೆದವು, ಕೊನೆಗೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಎನ್. ಸಂಪAಗಿಯವರು ಈ ಕ್ಷೇತ್ರದ ಶಾಸಕರಾಗಿದ್ದಾಗ ಅಣೆಕಟ್ಟು ನಿರ್ಮಾಣ ಮಾಡಲು ಹಸಿರು ನಿಶಾನೆ ತೋರಿ, ಏಪ್ರಿಲ್ ೧೬, ೨೦೦೩ ರಂದು ಬುಧವಾರ ಶಂಖುಸ್ಥಾಪನೆ ಮಾಡಿದರು. ಆನಂತರ ಅಣೆಕಟ್ಟು ಸಂಪೂರ್ಣವಾಗಿ ಎಚ್.ಡಿ. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಹಾಗೂ ಜಿ.ವಿ.ಶ್ರೀರಾಮರೆಡ್ಡಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾಗ ೨೦೦೬ ರಂದು ಅಣೆಕಟ್ಟು ಉದ್ಘಾಟನೆ ಮಾಡಲಾಯಿತು.

ಅಣೆಕಟ್ಟು ನಿರ್ಮಾಣವಾದಗಿನಿಂದಲೇ ಬಹು ಅಪರೂಪವಾಗಿ ತುಂಬಿ ಹರಿಯುತ್ತಿರುವ ಈ ಚಿತ್ರಾವತಿ ಅಣೆಕಟ್ಟು ಇದುವರೆವಿಗೂ ಸುಮಾರು ಐದಾರು ಬಾರಿ ತುಂಬಿಹರಿದಿರಬಹುದು. ಒಟ್ಟಾರೆ ಈ ಚಿತ್ರಾವತಿ ಅಣೆಕಟ್ಟಿನಿಂದ ಬಾಗೇಪಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬಿದ್ದ ಬಾರಿ ಮಳೆಯಿಂದ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಜನರಲ್ಲಿ ಸಂತಸ ತಂದಿದೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: