April 29, 2024

Bhavana Tv

Its Your Channel

ಪುರಸಭೆ ಪ್ರಭಾರ ಅಧ್ಯಕ್ಷ ಎ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ

ಬಾಗೇಪಲ್ಲಿ: ಕರ್ನಾಟಕ ಸರ್ಕಾರ ನಗರಾಭಿವೃದ್ದಿ ಇಲಾಖೆ ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಬಾಗೇಪಲ್ಲಿಯ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದೆರ್ಜೆಗೇರಿಸಿ ಪುರಸಭೆಯ ನಾಲ್ಕು ದಿಕ್ಕುಗಳಿಗೆ ಗಡಿರೇಖೆ ಗುರುತಿಸಿ ೨೦೦೬ ನೇ ಇಸ್ವಿಯಲ್ಲಿ ಹೊರಡಿಸಿರುವ ಆದೇಶದಂತೆ ಮನೆ ಮತ್ತು ನಿವೇಶನಗಳಿಗೆ ನೀಡಿರುವ ಪಿಐಡಿ ಸಂಖ್ಯೆ ಮತ್ತು ಖಾತೆಗಳನ್ನು ರದ್ದು ಮಾಡಿ ನಾಗರೀಕರನ್ನು ಕೋರ್ಟ್ ಮೆಟ್ಟಿಲೇರಿಸುವ ಕಾಯ್ದೆ ಯಾವ ಕಾನೂನುನಲ್ಲಿದೆ ಎಂದು ಪುರಸಭೆ ಸದಸ್ಯ ಎಸ್‌ಟಿಡಿ ಮೂರ್ತಿ ಪುರಸಭೆ ಸಾಮನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮಧುಕರ್ ವಿರುದ್ದ ಕಿಡಿಕಾರಿದರು.

ಬಾಗೇಪಲ್ಲಿಯ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಅಯೋಜಿಸಲಾಗಿದ್ದು, ಕುಡಿಯುವ ನೀರು, ನಿವೇಶನ ಮತ್ತು ಮನೆಗಳ ಖಾತೆ, ಕಂದಾಯ ವಸೂಲಿ, ಯರ್ರಕಾಲುವೆ ಒತ್ತುವರಿ ಸರ್ವೇ ಕಾರ್ಯ, ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ ವಿಚಾರ ಹಾಗೂ ಸ್ವಚ್ಚತೆಗೆ ಸಂಬAಧಿಸಿದ ಹಲವು ವಿಷಯಗಳ ಬಗ್ಗೆ ವಿವಿಧ ವಾರ್ಡಗಳ ಸದಸ್ಯರು ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕೆAದು ಒತ್ತಾಯಿಸಿದರು.
ಪುರಸಭೆ ಸದಸ್ಯ ಎಸ್‌ಟಿಡಿ ಮೂರ್ತಿ ಮಾತನಾಡಿ, ದಿನೇ ದಿನೇ ಬೆಳೆಯುತ್ತಿರುವ ಪುರಸಭೆಯ ಅಭಿವೃದ್ದಿ ದೃಷ್ಠಿಯಿಂದ ನಗರಾಭಿವೃದ್ದಿ ಇಲಾಖೆ ಪಟ್ಟಣದ ಪೂರ್ವಕ್ಕೆ ನ್ಯಾಷನಲ್ ಕಾಲೇಜು, ಸಾಯಿಬಾಬಾ ದೇವಾಲಯ, ಪಶ್ಚಿಮಕ್ಕೆ ಚಿತ್ರಾವತಿ ನದಿ, ದಕ್ಷಿಣಕ್ಕೆ ಒಡ್ಡುಕೆರೆ, ಚಿತ್ರಾವತಿ ನದಿ, ಉತ್ತರಕ್ಕೆ ಕೊರ್ಲಕುಂಟೆ, ರೆಡ್ಡಿಕೆರೆಯ ಗಡಿಯನ್ನು ಗುರುತಿಸಿ, ಗಡಿ ರೇಖೆ ವ್ಯಾಪ್ತಿಯೊಳಗಿರುವ ಮನೆ ಮತ್ತು ನಿವೇಶನಗಳನ್ನು ಪುರಸಭೆಗೆ ಸೇರಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅದೇಶ ಮಾಡಿದೆ, ನಗರಾಭಿವೃದ್ದಿ ಇಲಾಖೆ ಆದೇಶದಂತೆ ಪುರಸಭೆ ಗಡಿ ರೇಖೆಯೊಳಗೆ ಮನೆ ಮತ್ತು ನಿವೇಶನಗಳನ್ನು ಹೊಂದಿರುವವರ ಪುರಸಭೆ ಖಾತೆಗಳನ್ನು ರದ್ದು ಮಾಡುವಂತೆ ಆದೇಶಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದೀರಾ, ನಗರಾಭಿವೃದ್ದಿ ಇಲಾಖೆ ಆಧೇಶವನ್ನು ಉಲ್ಲಂಘನೆ ಮಾಡಿ ಪಟ್ಟಣದ ನಾಗರೀಕರಿಗೆ ತೊಂದರೆ ನೀಡುವ ಆಗತ್ಯ ಏನಿದೆ, ಪುರಸಭೆ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನಕ್ಕೆ ವಿರುದ್ದವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸರ್ಕಾರ ಆದೇಶ ಮಾಡಿದ್ದರೇ ಸಾಮನ್ಯ ಸಭೆಯಲ್ಲಿ ತಿಳಿಸಿ, ಹಲವು ವರ್ಷಗಳಿಂದ ನೀರು, ರಸ್ತೆ, ಬೀದಿ ದೀಪಗಳು ಸೇರಿದಂತೆ ವಿವಿಧ ತೆರಿಗೆಗಳನ್ನು ಪುರಸಭೆಗೆ ಪಾವತಿಸುತ್ತಿರುವ ಪಟ್ಟಣದ ನಾಗರೀಕರಿಗೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸುವುದು ಪುರಸಭೆಯ ಪ್ರಥಮ ಕರ್ತವ್ಯ, ಅಧಿಕಾರ ದುರ್ಬಳಿಕೆ ಮಾಡಿ ನಾಗರೀಕರ ಹಕ್ಕುಗಳನ್ನು ಕಸಿದುಕೊಳ್ಳುವುದು ಪುರಸಭೆಯ ಕರ್ತವ್ಯವಲ್ಲ ಎಂದು ಪುರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಅಶೋಕರೆಡ್ಡಿ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯ ಎರ್ರಕಾಲುವೆ ಒತ್ತುವರಿ ಸರ್ವೇ ಕಾರ್ಯ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ವೇ ನ್ಯಾಯ ಸಮ್ಮತವಾಗಿ ಮಾಡಿಲ್ಲ. ಎರ್ರಕಾಲುವೆಯ ಪ್ರಾರಂಭದಿAದ ಮುಕ್ತಾಯವಾಗುವ ಸಂಪೂರ್ಣ ಪ್ರದೇಶವನ್ನು ನ್ಯಾಯ ಸಮ್ಮತವಾಗಿ ಸರ್ವೇ ಮಾಡಿ ನಂತರ ನೋಟಿಸ್ ನೀಡಿ, ಕಾಲುವೆಯ ಎರಡು ಬದಿ ಬಿಟ್ಟು ಮಧ್ಯಬಾಗದ ಒಂದು ಪ್ರದೇಶದದಲ್ಲಿ ಮಾತ್ರ ಸರ್ವೇ ಮಾಡಿ ಒತ್ತುವರಿ ಮಾಡಿಕೊಳ್ಳದ ನಾಗರೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ಕೊಟ್ಟು ವಿನಾಕಾರಣ ಜಿಲ್ಲಾಧಿಕಾರಿಗಳ ಕೋರ್ಟಗೆ ಅಲೆಯವಂತೆ ಮಾಡಿದ್ದಾರೆ ಎಂದು ಗುಡುಗಿದರು.
ಪುರಸಭೆ ಸದಸ್ಯ ಪಿ.ವಿ.ಮಧುಸೂದನರೆಡ್ಡಿ ಮಾತನಾಡಿ, ಪುರಸಭೆ ಕಾನೂನು ಸಲಹೆಗಾರರು ಮಾಡುತ್ತಿರುವ ಪಿತೂರಿಗಳಿಂದ ಪುರಸಭೆ ಹರಾಜುನಲ್ಲಿ ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡವರಿಗೆ ಅನ್ಯಾಯವಾಗುತ್ತಿದೆ, ಅಂಗಡಿ ಮಳಿಗೆಗಳ ಬಾಡಿಗೆ ಪಾವತಿಸುವ ವಿಚಾರದ ಪ್ರಕರಣ ೬ ವರ್ಷಗಳಾದರೂ ಇತ್ಯರ್ಥಗೊಂಡಿಲ್ಲ, ಕಾರಣ ನ್ಯಾಯಾಲಯದಲ್ಲಿ ಪುರಸಭೆ ಪರ ವಾಧ ಮಂಡನೆ ಮಾಡಬೇಕಾಗಿರುವ ವಕೀಲರು ಪ್ರತಿವಾಧಿಗಳ ಅಮಿಷಗಳಿಗೆ ಅಸೆಪಟ್ಟು ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಳಂಭ ಮಾಡುತ್ತಿದ್ದಾರೆ, ಪುರಸಭೆ ಆಧಾಯಕ್ಕೆ ನಷ್ಠ ಉಂಟು ಮಾಡುತ್ತಿರುವ ವಕೀಲರಿಗೆ ಪುರಸಭೆಯಿಂದ ಸಾವಿರಾರು ರೂ ಬಿಲ್ ಮಾಡಿಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಪುರಸಭೆ ಪ್ರಭಾರ ಅಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುAಡ, ಮುಖ್ಯಾಧಿಕಾರಿ ಮಧುಕರ್, ಸದಸ್ಯರಾದ ಗಡ್ಡಂ ರಮೇಶ್, ಶ್ರೀನಿನಾಥ, ವನಿತಾದೇವಿ, ಜಭಿವುಲ್ಲಾ ಮತ್ತಿತರರು ಇದ್ದರು.

ವರದಿ: ಗೋಪಾಲರೆಡ್ಡಿ ಬಾಗೇಪಲ್ಲಿ

error: