April 29, 2024

Bhavana Tv

Its Your Channel

ತ್ಯಾಜ್ಯಾ ವಸ್ತುಗಳಿಗೆ ಸಿಕ್ಕಿತ್ತು ಮರುಜೀವ: ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ನೂರಾರು ಕಲಾಕೃತಿಗಳನ್ನ ತಯಾರಿಸಿದ ಶಾಲಾ ಮಕ್ಕಳು

ಬಾಗೇಪಲ್ಲಿ:-ತಾಲ್ಲೂಕಿನ ಅದೊಂದು ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆ, ಆ ಶಾಲೆಯಲ್ಲಿ ಯಾವುದೂ ವೇಸ್ಟ್ ಅಲ್ಲ. ನಾವು, ನೀವು ಬಿಸಾಡೋ ಬಳಕೆಗೆ ಯೋಗ್ಯವಲ್ಲದ ವಸ್ತುಗಳೇ ಅವರಿಗೆ ಆಧಾರ. ಅವುಗಳನ್ನೇ ಬಳಸಿಕೊಂಡ ವಿದ್ಯಾರ್ಥಿಗಳು ಅಂದ ಚೆಂದದ ಆಕೃತಿಗಳನ್ನು ರೆಡಿ ಮಾಡ್ತಾರೆ. ಬಿಸಾಡಿದ ವಸ್ತುಗಳಿಂದಲೇ ರೆಡಿ ಮಾಡಿದ ಆ ಆಕೃತಿಗಳನ್ನು ನೋಡಿದ್ರೆ ಒಂದ್ ಕ್ಷಣ ಆಶ್ಚರ್ಯ ಪಡೋದು ಗ್ಯಾರಂಟಿ. ಆ ಶಾಲಾ ಮಕ್ಕಳ ವೇಸ್ಟೇಜ್ ವಸ್ತುಗಳಿಂದ ಸೃಷ್ಠಿಸಿರುವ ಕಲಾಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ರಂಗುರAಗಾಗಿ ಕಲಾಕೃತಿಗಳು ಹೊರಹೊಮ್ಮಿದೆ. ಈ ಶಾಲೆಯಲ್ಲಿ ಸುಮಾರು ೧೯೪ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಶಿಕ್ಷಕಿ ರಸೀದಾ ಮಾತನಾಡಿ ಸ್ವಲ್ಪ ಕ್ರಿಯೆಟಿವಿ ಮತ್ತು ತಾಳ್ಮೆಯಿದ್ದರೆ ಇವುಗಳಲ್ಲಿ ಬಹುತೇಕ ತ್ಯಾಜ್ಯ ವಸ್ತುಗಳಿಗೆ ಹೊಸ ರೂಪ ನೀಡಲು ಸಾಧ್ಯವಿದೆ. ಇವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಡಿಸಿ ಶಾಲೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.

ಶಾಲಾಮಕ್ಕಳಿಂದ ಕಲಾ ಜಗತ್ತನ್ನೇ ಅನಾವರಣ :ವೇಸ್ಟ್ ಆಗಿ ಕಸದ ತೊಟ್ಟಿ ಸೇರಿದ ಪ್ಲ್ಯಾಸ್ಟಿಕ್, ತೆಂಗಿನ ಚಿಪ್ಪು, ಪೇಪರ್, ತಂತಿ, ಬಟ್ಟೆಗಳ ಕವರ್, ಸೀಸು ಪೆನ್ಸಿಲ್ ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಅವುಗಳಿಗೆ ಹೊಸ ವಿನ್ಯಾಸ ನೀಡುವ ಮೂಲಕ ಕಲಾ ಜಗತ್ತನ್ನೇ ಅನಾವರಣಗೊಳಿಸಿದ್ದಾರೆ. ಪ್ರಮುಖವಾಗಿ ಫ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಂದ ಹೂವುಗಳ ನಿರ್ಮಾಣ. ಹಾಲಿನ ಪ್ಯಾಕೇಟ್ ಗಳನ್ನು ಕತ್ತರಿಸಿ ಚೆಂದದ ಹೂವಿನ ಮಾಲೆ ಮಾಡಿರುವುದು ಹಾಗೂ ಬಾಟಲಿ, ತೆಂಗಿನ ಚಿಪ್ಪು, ಕಪ್ಪೆ ಚಿಪ್ಪು, ಪ್ಲಾಸ್ಟಿಕ್ ಸಾಮಗ್ರಿ, ಹಾಳೆ, ಥರ್ಮೋಕೊಲ್, ಗೋಣಿಚೀಲ, ಬೆಂಕಿ ಪೊಟ್ಟಣ, ಪಿವಿಸಿ ಪೈಪ್, ಗಾಜು, ಪ್ಲಾಸ್ಟಿಕ್ ವೈರ್, ದಾರ, ಡಬ್ಬಿ, ಬಂಬೂ, ಹುಲ್ಲು, ಮರಳು, ಪ್ಲಾಸ್ಟರ್ ಆಫ್ ಪ್ಯಾರಿಸ್, ಪೊರಕೆ ಕಡ್ಡಿ ಸೇರಿದಂತೆ ಮುಂತಾದ ವಸ್ತುಗಳಿಂದ ಅವರು ತಯಾರಿಸಿರುವ ಕಲಾಕೃತಿಗಳು ಚಿತ್ತಾಕರ್ಷಕವಾಗಿವೆ.
ಕರ್ನಾಟಕ ರಾಜ್ಯಾದ್ಯಂತ ಮೈಸೂರು, ದಾವಣಗೆರೆ ಮಂಡ್ಯ, ಶಿವಮೊಗ್ಗ ಜಿಲ್ಲೆ ಹಾಗೂ ಇತರೆ ಜಿಲ್ಲೆಯಲ್ಲಿ ಮಕ್ಕಳಿಂದ ಅರಳಿರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಶಿಕ್ಷಕಿ ರಸೀದಾ ಹೇಳುತ್ತಾರೆ.
ಕಲಾಕೃತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕಿ ಅವರೆ ಕಾರಣ ಅವರಿಂದಲೇ ನಾವು ಇಂತಹ ಕಲೆ ಕಲಿತಿದ್ದೇವೆ ಎಂದು ಮಕ್ಕಳು ಹೇಳಿದರು.

ಒಟ್ಟಿನಲ್ಲಿ ಕಸದ ತೊಟ್ಟಿ ಸೇರಿದ್ದ ವಸ್ತುಗಳಿಗೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸ ರೂಪ ನೀಡಿದ್ದು. ಅವರು ಹೊಸ ರೂಪ ಕೊಟ್ಟ ವೆಸ್ಟ್ ವಸ್ತುಗಳಿಗೆ ಮರು ಜೀವ ತುಂಬಿ ಶಾಲಾ ಕೊಠಡಿಯಲ್ಲಿ ಪ್ರದರ್ಶನಕ್ಕೆ ಇಟ್ಟು ಸೈ ಅನಿಸಿಕೊಂಡಿದ್ದಾರೆ. ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಚಿತ್ರಕಲಾ ಆಸಕ್ತಿ ಮೆಚ್ಚುವಂತದ್ದು. ವಿದ್ಯಾರ್ಥಿಗಳ ಗ್ರಾಮವನ್ನು ಕಲಾಗ್ರಾಮವಾಗಿ ಮಾರ್ಪಡಿಸುವ ಕನಸು ನನಸಾಗಲಿ ಅನ್ನೋದೆ ಎಲ್ಲರ ಆಶಯ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: