April 29, 2024

Bhavana Tv

Its Your Channel

ಜಡಮಡುಗು ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದೆ :-

ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೆನ್ನೆ ರಾತ್ರಿ ಗುಡುಗು ಸಹಿತ ಬಿದ್ದ ಬಾರಿ ಮಳೆಯಿಂದ ಪಾತಪಾಳ್ಯ ಹೋಬಳಿಯ ಗುಜ್ಜೇಪಲ್ಲಿ ಬಳಿ ಇರುವ ಜಡಮಡುಗು ಜಲಪಾತ ದುಮ್ಮಿಕ್ಕಿ ಹರಿಯುತ್ತಿದ್ದು ಈ ಭಾಗದ ಜನರನ್ನು ರೈತರನ್ನು ಪುಳಕಿತರನ್ನಾಗಿ ಮಾಡಿದೆ.

ಬಾಗೇಪಲ್ಲಿ ತಾಲ್ಲೂಕು ಎಂದಾಕ್ಷಣ ನೆನಪಿಗೆ ಬರುವುದು ಹನಿಹನಿ ನೀರಿಗೂ ಪರದಾಡುವ ಪ್ರದೇಶ. ಪೈಪಾಳ್ಯ ಕೆರೆ ತುಂಬಿದರೆ ಈ ಜಡಮಡುಗು ಜಲಪಾತ ಹರಿಯುತ್ತದೆ. ನೆನ್ನೆ ಬಿದ್ದ ಮಳೆಯಿಂದ ಬೆಟ್ಟಗುಡ್ಡಗಳ ನಡುವೆ ಹರಿದು, ಮತ್ತಷ್ಟು ನೀರಿನ ಸೆಳೆಗಳನ್ನು ಬರಸೆಳೆದುಕೊಂಡು, ಬೋರ್ಗರೆಸುತ್ತಾ, ಸುಂದರವಾದ ಬೆಟ್ಟಗುಡ್ಡಗಳ ನಡುವೆ ರಮಣಿಯ ಪ್ರಕೃತಿಯ ನಡುವೆ ಪ್ರಯಣಿಸಿ ಸಾಗಿಬರುವ ನದಿಯ ನೀರು ಜಡಮಡುಗುವಿನ ಬಳಿ ಜಲಪಾತವಾಗುವ, ಈ ಬಾಗದ ಜನರಿಗೆ ಜಡಮಡುಗು ಜಲಪಾತ ಶರಾವತಿಯ ಜೋಗ ಜಲಪಾತವಿದ್ದಂತೆ, ಕಡಲ ಕಿನಾರೆಯಿದ್ದಂತೆ, ಆದ್ದರಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಜಲಪಾತವಾಗಿದೆ.
ಸದಾ ಬಿಸಿಲಿನ ಬೇಗೆಯಿಂದ, ನೀರಿನ ಕೊರತೆಯಿಂದ ಬಣಗುಡುವ ಬರದ ನಾಡಿಗೆ ಮಳೆಯೆಂದರೆ, ನೀರೆಂದರೆ ಪಂಚಪ್ರಾಣ, ನೀರೆಂದರೆ ಸಂತೋಷ, ನೀರೆಂದರೆ ಬದುಕು ಎಲ್ಲವೂ ಹೌದು. ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಜೀವದ್ರವ್ಯ. ಭೂಮಿಯು ಸೇರಿದಂತೆ ಪ್ರಕೃತಿಯಲ್ಲಿನ ಸಕಲ ಚರಾಚರ ವಸ್ತು, ಪ್ರಾಣಿಗಳು ಸಂಭ್ರಮಿಸುತ್ತವೆ. ಅದೆಷ್ಷೋ ವರ್ಷಗಳಿಂದ ಸದಾ ಬಿಸಿಲಿನ ಶಾಖದಿಂದ ಕಾದು ಕಾವಲಿಯಾಗುವ ಇಲ್ಲಿನ ಭೂಮಿಗೆ ಮಳೆಯೆಂದರೆ ತನ್ನ ಪ್ರಿಯಕರ ಬಂದಷ್ಷೇ ಸಂತೋಷ ಎಂದು ಭಾಸವಾಗುತ್ತದೆ. ನೆನ್ನ ಬಿದ್ದ ಮಳೆಯಿಂದ ಈ ಭಾಗ ತಂಪಾಗಿದೆ.
ಈ ತಣ್ಣನೆಯ ವಾತಾವರಣದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ರೈತರಿಗೆ ಆಕರ್ಷಣಿಯ ಕೇಂದ್ರವಾಗಿದೆ. ಸುಂದರ ಪ್ರವಾಸಿ ತಾಣವಾಗಿದೆ.
ವರದಿ: ಗೋಪಾಲ ರೆಡ್ಡಿ ಬಾಗೆಪಲ್ಲಿ

error: