April 29, 2024

Bhavana Tv

Its Your Channel

ಮಾಡಿರುವ ಸಾಲ ತೀರಿಸಲಾಗದೆ, ವಂಚನೆ ಮಾಡಲು ಹೋಗಿ ಪೊಲೀಸರ ಅತಿಥಿಗಳಾದ ಭೂಪರು.

ಬಾಗೇಪಲ್ಲಿ: ಪೈನಾನ್ಸ್ ಕಂಪನಿಯಲ್ಲಿ ಮಾಡಿರುವ ಸಾಲ ತೀರಿಸಲು ಸಾಧ್ಯವಾಗದೆ ಪೈನಾನ್ಸ್ ಹಣ ವಂಚನೆಗೆ ಸಂಚು ಮಾಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವ ಲಾರಿ ಮಾಲೀಕ ಹಾಗೂ ಚಾಲಕ ಇಬ್ಬರು ಜೈಲಿಗೆ ಸೇರಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಡೋನ್ ನಗರದ ನಿವಾಸಿ ಹಾಗೂ ಜೈ ಮಾರುತಿ ಟ್ರಾನ್ಸ್ ಪೋರ್ಟ್ ಮಾಲೀಕ ಉಬ್ಬು ಗಿಡ್ಡಯ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಜಂಬಿಗೇಮರದಹಳ್ಳಿ ನಿವಾಸಿ ಪ್ರದೀಪ್ ಬಂಧಿತ ಆರೋಪಿಗಳಾಗಿದ್ದಾರೆ.
ಲಾರಿ ಮಾಲೀಕ ಉಬ್ಬು ಗಿಡ್ಡಯ್ಯ ಖಾಸಗಿ ಪೈನಾನ್ಸ್ ಕಂಪನಿಯೊAದರಲ್ಲಿ ಸಾಲ ಮಾಡಿ ಲಾರಿಗಳನ್ನು ಖರೀದಿಸಿದ್ದು ಪೈನಾನ್ಸ್ ಕಂಪನಿಯ ಸಾಲ ತೀರಿಸಲು ಸಾಧ್ಯವಾಗದೆ ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ೧೨ ಲಕ್ಷ ಬೆಲೆ ಬಾಳುವ ಅಕ್ಕಿ ಮತ್ತು ೧೮ ಲಕ್ಷ ರೂ ಬೆಲೆ ಬಾಳುವ ಲಾರಿ ಕಳ್ಳತನದ ನಾಟಕ ನಡೆಸಿ ಪೋಲೀಸರು ನಡೆಸಿದ ವಿಚಾರಣೆಯಲ್ಲಿ ಪೈನಾನ್ಸ್ ಕಂಪನಿಯ ಸಾಲ ವಂಚನೆ ಮಾಡಲು ಸಂಚು ರೂಪಿಸಿರುವುದಾಗಿ ಆರೋಪಿಗಳಿಬ್ಬರು ತಮ್ಮ ತಪ್ಪು ಒಪ್ಪಿಕೊಂಡಿರುತ್ತಾನೆ. ಕಾರ್ಯಾಚರಣೆಯಲ್ಲಿ ೩೦ ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಇಬ್ಬರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
ರಾಜ್ಯದ ರಾಯಚೂರು ನಗರದ ಸೀತರಾಮ ರೈಸ್ ಮಿಲ್ ಮಾಲೀಕ ಕೆ.ಆಧಿನಾರಾಯಣಗೆ ಸೇರಿರುವ ೧೨೧೬ ಅಕ್ಕಿ ಮೂಟೆಗಳನ್ನು ರಾಯಚೂರು ನಗರದಿಂದ ಬೆಂಗಳೂರು ಮಾರುಕಟ್ಟೆಗೆ ಸಾಗಿಸುವವಂತೆ ಲಾರಿ ಮಾಲೀಕ ಉಬ್ಬು ಗಿಡ್ಡಯ್ಯಗೆ ಬಾಡಿಗೆ ನೀಡುತ್ತಾರೆ. ಅಕ್ಕಿ ಮೂಟೆ ತುಂಬಿಸಿಕೊAಡ ಲಾರಿ ಚಾಲಕ ಪ್ರದೀಪ್ ರೈಸ್ ಮಿಲ್‌ನಿಂದ ಹೊರ ಬಂದು ಮಾರ್ಗ ಮಧ್ಯೆ ಕರ್ನೂಲ್ ಬಳಿ ನಿಲ್ಲಿಸಿ ಲಾರಿ ಮಾಲೀಕ ಹಾಗೂ ಚಾಲಕ ಇಬ್ಬರು ಪ್ಲಾನ್ ಮಾಡಿ ಅಕ್ಕಿ ಮೂಟೆಗಳನ್ನು ಬಾಡಿಗೆ ಮನೆಯೊಂದರಲ್ಲಿ ದಾಸ್ತಾನು ಮಾಡಿ, ಕರ್ನೂಲ್ ಬೆಂಗಳೂರು ಮಾರ್ಗದ ರಸ್ತೆಯಲ್ಲಿರುವ ಟೋಲ್ ಪ್ಲಾಜ್‌ಗಳ ಮೂಲಕ ಖಾಲಿ ಲಾರಿಯನ್ನು ಚಲಾಯಿಸಿಕೊಂಡು ಬೆಂಗಳೂರು ಕಡೆ ಬರುತ್ತಾರೆ. ಅಲ್ಲಿಂದ ತಮಿಳುನಾಡಿನ ಸೇಲಂನಲ್ಲಿ ಲಾರಿಯನ್ನು ಗುಜರಿ ವ್ಯಾಪಾರಿಗೆ ಮಾರಾಟ ಮಾಡಿ, ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿ ಲಾರಿ ನಿಲ್ಲಿಸಿ ಲಾರಿಯಲ್ಲಿ ಮಲಗಿದ್ದ ವೇಳೆಯಲ್ಲಿ ನನ್ನನ್ನು ರಸ್ತೆ ಬದಿಯ ಗಿಡಗಳ ಮಧ್ಯದಲ್ಲಿ ಮಲಗಿಸಿ ನಿಲ್ಲಿಸಿದ್ದ ಲಾರಿ ಮತ್ತು ಅಕ್ಕಿ ಮೂಟೆಗಳನ್ನು ಕಳುವು ಮಾಡಿದ್ದಾರೆಂದು ಚಾಲಕ ಪ್ರದೀಪ್ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ನೀಡಿ ನಾಟಕಕ್ಕೆ ತೆರೆ ಎಳೆಯುತ್ತಾನೆ.
ಲಾರಿ ಚಾಲಕನಿಂದ ದೂರು ಸ್ವೀಕರಿಸಿದ ಬಾಗೇಪಲ್ಲಿ ಪೊಲೀಸರು ಅನುಮಾನಗೊಂಡು ಲಾರಿ ಮಾಲೀಕ ಮತ್ತು ಚಾಲಕನನ್ನು ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದು, ಬಾಗೇಪಲ್ಲಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಸೇಲಂನ ಗುಜುರಿ ವ್ಯಾಪಾರಿ ಬಳಿ ಇದ್ದ ಲಾರಿ ಮತ್ತು ಕರ್ನೂಲ್ ಬಳಿಯ ಬಾಡಿಗೆ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಬೇಧಿಸಿರುವ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನಗದು ಬಹುಮಾನ ಘೋಷಿಸಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ನಡೆಸಿರುವ ಕಾರ್ಯಚರಣೆಯಲ್ಲಿ ಡಿವೈಎಸ್ಪಿ ವಿ.ಕೆ.ವಾಸುದೇವ್, ಸರ್ಕಲ್ ಇನ್ಪೆಕ್ಟರ್ ಡಿ.ಆರ್.ನಾಗರಾಜು, ಸಬ್ ಇನ್ಪೆಕ್ಟರ್ ಆರ್.ಗೋಪಾಲರೆಡ್ಡಿ, ಪೇದೆಗಳಾದ ಅರುಣ್, ಧನಂಜಯ, ಅಶೋಕ, ಶಬ್ಬೀರ್, ವಿನಾಯಕ, ರಮೇಶ್,ರಾಜಪ್ಪ ಮತ್ತಿತರರು ಇದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: