April 29, 2024

Bhavana Tv

Its Your Channel

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ರೈಟ್ ಟು ಲೀವ್ ಫೌಂಡೇಶನ ಸದಾ ಸಿದ್ಧ- ರೈಟ್ ಟು ಲಿವ್ ಫೌಂಡೇಶನ ನಿರ್ದೇಶಕ ಶ್ರೀಧರ್.

ಬಾಗೇಪಲ್ಲಿ:- ಸಮಾಜಮುಖಿ ಕೆಲಸ ಮಾಡಲು ಗೆಳೆಯರೆಲ್ಲರೂ ಸೇರಿ ಸರ್ಕಾರೇತರ ರೈಟ್ ಟು ಲಿವ್ ಫೌಂಡೇಶನ್ ಎಂಬ ಸಂಸ್ಥೆ ಯನ್ನು ಹುಟ್ಟು ಹಾಕಿದ್ದೇವೆ ಇದು ಹೆಚ್ಚು ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ನಮ್ಮ ಸಂಸ್ಥೆ ವತಿಯಿಂದ ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ ಒಂದು ಶಿಕ್ಷಣ, ಆರೋಗ್ಯ,ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಉದ್ದೇಶ ಹೊಂದಿದೆ ಎಂದು ಹೇಳಿದರು.

ಅವರು ಬಾಗೇಪಲ್ಲಿ ತಾಲ್ಲೂಕು ಎಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ರೈಟ್ ಟು ಲಿವ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ ಬಾಗೇಪಲ್ಲಿ ತಾಲ್ಲೂಕಿನ ೧೪ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಟಿವಿ ವಿತರಣೆ ಮಾಡಿದ್ದು ಸಾಂಕೇತಿಕವಾಗಿ ಉದ್ಘಾಟನೆ ಮಾಡಿ ಮಾತನಾಡಿದರು ನಮ್ಮ ಸಂಸ್ಥೆ
ಕರ್ನಾಟಕ ರಾಜ್ಯಾದ್ಯಂತ ಸುಮಾರು ೫೦ ಸ್ಮಾರ್ಟ್ ಕ್ಲಾಸ್ ಟಿವಿ ಯನ್ನು ಕೊಡುಗೆಯಾಗಿ ನೀಡಿದ್ದು ಇದು ಬಾಗೇಪಲ್ಲಿ ತಾಲ್ಲೂಕು ಗ್ರಾಮೀಣ ಪ್ರದೇಶದಲ್ಲಿ ಮೊದಲಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ೧೪ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಶಾಲೆಗಳಿಗೆ ವಿತರಿಸಿದ್ದೆವೆ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಂಡು ಸ್ಮಾರ್ಟ್ ಕ್ಲಾಸ್ ಉಪಯೋಗ ,ಪಡೆದುಕೊಂಡು ಉತ್ತಮ ರೀತಿಯ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ನಿಮ್ಮ ಶಾಲೆಯ ಋಣ ತೀರಿಸಬೇಕು ಎಂದು ರೈಟ್ ಟು ಲಿವ್ ಫೌಂಡೇಶನ ನಿರ್ದೇಶಕ ಶ್ರೀಧರ್ ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಬಿಇಓ ಕಛೇರಿಯ ಸಂಪನ್ಮೂಲ ಅಧಿಕಾರಿ ವೆಂಕಟರಾಮ್ ಪ್ರಾಸ್ತಾವಿಕ ಭಾಷಣ
ಮಾತನಾಡುತ್ತ ರೈಟ್ ಟು ಲಿವ್ ಫೌಂಡೇಶನ್ ವತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಅಗಲೇಂದೇ ಸ್ಮಾರ್ಟ್ ಕ್ಲಾಸ್ ಮಾಡಲು ಟಿವಿ ಕೊಡಗೆ ನೀಡಿದ್ದು ಸಂಸ್ಥೆಯ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳು ಇದರ ಸರಿಯಾಗಿ ಸದೋಪಯೋಗ ಪಡಿಸಿಕೊಳ್ಳಬೇಕು. ಸ್ಮಾರ್ಟ ಕ್ಲಾಸ್ ಗಳ ಮೂಲಕ ವಿದ್ಯಾರ್ಥಿಗಳ ಕಲಿಕೆ ದ್ವಿಗುಣವಾಗುವುದಲ್ಲದೆ ಹೆಚ್ಚಿನ ಜ್ಞಾನಾಭಿವೃದ್ಧಿಗೆ ಪೂರಕವಾಗುತ್ತದೆ ಹಾಗೂ ಉತ್ತಮ ರೀತಿಯ ಅಂಕಗಳನ್ನು ಗೊಳಿಸಲು ಅನುಕೂಲ ಮಾಡಿಕೊಳ್ಳಲು ಹೇಳಿದರು.
ಈ ಸಂದರ್ಭದಲ್ಲಿ ಬಿಇಓ ಎಸ್ ಸಿದ್ದಪ್ಪ, ರೈಟ್ ಟು ಲಿವ್ ಫೌಂಡೇಶನ್ ವ್ಯವಸ್ಥಾಪಕರಾದ ವಿರೇಶ್, ನರಸಿಂಹ ಮೂರ್ತಿ, ನಾಗಭೂಷಣ, ಘಂಟAವಾರಿಪಲ್ಲಿ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ರಾಮಸುಬ್ಬಮ್ಮ ಜಿ, ಪಾಳ್ಯಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ವಿ.ಆದಿನಾರಾಯಣ, ಶಿಕ್ಷಕ ನಿವಾಸ್ ಶಾಂತಮ್ಮ,ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: