April 29, 2024

Bhavana Tv

Its Your Channel

ಪರ್ಸೆಂಟೇಜ್ ರಾಜಕಾರಣಿಗಳನ್ನು ದೂರ ಇಡದಿದ್ದರೆ,ಈ ಕ್ಷೇತ್ರಕ್ಕೆ ಮೋಕ್ಷ ಇಲ್ಲ-ಮಂಜುನಾಥರೆಡ್ಡಿ

ಬಾಗೇಪಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಸರ್ಕಾರ ಬಿಡುಗಡೆ ಮಾಡುವ ಅನುಧಾನವನ್ನು ವ್ಯಾಪಾರದ ಪಣಕ್ಕಿಟ್ಟು ಲಾಭಗಳಿಸಿದ ಹಣದಲ್ಲಿ ಅಸ್ತಿ ಮಾಡಿಕೊಳ್ಳುತ್ತಿರುವ ರಾಜಕಾರಣಿಗಳನ್ನು ಮುಂದಿನ ಚುನಾವಣೆಯಲ್ಲಿ ದೂರ ಇಡದಿದ್ದರೆ ಬಾಗೇಪಲ್ಲಿ ಕ್ಷೇತ್ರದ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜೆಸಿಬಿ ಮಂಜುನಾಥರೆಡ್ಡಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದವತಿಯಿಂದ ಅಯೋಜಿಸಿದ್ದ ೫ ನೇ ಸಮ್ಮೇಳನದ ಬಹಿರಂಗ ಸಭೆ ಹಾಗೂ ಕಾರ್ಯಕರ್ತರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಜನರು ತಮ್ಮನ್ನು ಅಯ್ಕೆ ಮಾಡಿಕೊಂಡಿರುವುದು ಸಾರ್ವಜನಿಕರ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಡುವ ಉದ್ಧೇಶಕ್ಕಾಗಿ ಆದರೇ ಬಾಗೇಪಲ್ಲಿ ಕ್ಷೇತ್ರದ ಶಾಸಕರು ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ವ್ಯಾಪಾರದ ಮೂಲಕ ಕಮೀಷನ್‌ಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಬಾಗೇಪಲ್ಲಿ ಕ್ಷೇತ್ರದಲ್ಲಿರುವ ಸ್ಥಳೀಯ ಚುನಾವಣೆಗಳಿಂದ ಎಲ್ಲಾ ರೀತಿಯ ಸ್ಥಾನಗಳು ಈ ಭಾಗದ ಶಾಸಕರಿಗೆ ಬೇಕು, ಆದರೇ ಈ ಕ್ಷೇತ್ರದ ಜನರಿಗೆ ಮೂಲಭೂತ ಸೌಲಭ್ಯಗಳಾದ ಮನೆ, ನಿವೇಶನ, ರಸ್ತೆ, ಕುಡಿಯುವ ನೀರು ಸೌಲಭ್ಯಗಳು ಕಲ್ಪಿಸುವ ಯೋಗ್ಯತೆ ಇಲ್ಲದಿದ್ದರೆ ಏತಕ್ಕೆ ಅಧಿಕಾರಿದಲ್ಲಿರಬೇಕು ? ಕ್ಷೇತ್ರದ ಜನರು ಎಲ್ಲ ಸೌಲಭ್ಯಗಳನ್ನು ಹೋರಾಟಗಳ ಮೂಲಕ ಪಡೆದುಕೊಳ್ಳಬೇಕೆ ? ಎಂದು ಪ್ರಶ್ನಿಸಿ ನಿಮ್ಮ ಅಧಿಕಾರವನ್ನು ನಿಮ್ಮ ಸ್ವಂತ ವ್ಯಾಪಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಿ, ಅಧಿಕಾರದ ಆಹಂಕಾರದಿAದ ಸರ್ಕಾರಿ ಆಡಳಿತ ಯಂತ್ರಾAಗವನ್ನು ದರ್ಬಳಿಕೆ ಮಾಡಿಕೊಂಡು ಕ್ಷೇತ್ರದ ಜನಸಾಮನ್ಯರಿಗೆ ಕಿರಕುಳ ನೀಡುವ ಚಾಳಿಯನ್ನು ಬಿಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಿಪಿಎಂ ಪಕ್ಷ ನಿಮ್ಮನ್ನು ಬೀಧಿಗೆಳೆಯುವುದು ಖಚಿತ ಎಂದು ಎಚ್ಚರಿಸಿದರು.
ಕ್ಷೇತ್ರದ ಸಂಸದರು, ಶಾಸಕರು ನೀಡಿರುವ ಆಸೆ ಅಮಿಷಗಳಿಗೆ ಬಲಿಯಾಗಿ ಮತ ಹಾಕಿ ೮ ವರ್ಷಗಳ ಅಭಿವೃದ್ದಿಯನ್ನು ಕಳೆದುಕೊಂಡಿದ್ದೀರಾ. ಕ್ಷೇತ್ರದ ಕೃಷಿಕರ, ಕೂಲಿ ಕಾರ್ಮಿಕರ ಜಲ್ವಂತ ಸಮಸ್ಯೆಗಳ ಬಗ್ಗೆ ಅಧಿವೇಶನಗಳಲ್ಲಿ ಧ್ವನಿಎತ್ತುವ ತಾಕತ್ತು ಈ ಭಾಗದ ಸಂಸದರಿಗೆ ಮತ್ತು ಶಾಸಕರಿಗೆ ಇಲ್ಲ. ವ್ಯಾಪಾರ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳನ್ನು ತಿರಸ್ಕರಿಸಿ ಮುಂಬರುವ ಚುನಾವಣೆಯಲ್ಲಿ ಸಮರ್ಥ ನಾಯಕನನ್ನು ಅಯ್ಕೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಕ್ಷೇತ್ರದ ಜನರಿಗೆ ಉಳಿಗಾಲವಿಲ್ಲ ಎಂದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಮಹ್ಮದ್ ಅಕ್ರಂ ಮಾತನಾಡಿ, ಕೃಷಿಕರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರು ಎದುರುಸುತ್ತಿರುವ ಸುದೀರ್ಘ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸದಾ ಹೋರಾಟ ಮಾಡುವ ಸಿಪಿಎಂ ಪಕ್ಷವನ್ನು ಬೆಂಬಲಿಸಿ ಪಕ್ಷ ಸಂಘಟನೆಗೆ ಕೈ ಜೋಡಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಸಿಐಟಿಯು ತಾಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಹೇಮಚಂದ್ರ, ಕಸಭಾ ಸಮಿತಿ ಕಾರ್ಯದರ್ಶಿ ಶ್ರೀರಾಮನಾಯಕ್, ಸದಸ್ಯರಾದ ಶೋಭರಾಣಿ, ಜಿ.ಮುಸ್ತಫಾ, ಓಬಳರಾಜು, ವಾಲ್ಮೀಕಿ ಅಶ್ವತ್ಥಪ್ಪ, ಶ್ರೀನಿವಾಸ್ , ಎಂ.ವಿ.ಸುಬ್ಬಿರೆಡ್ಡಿ, ಚೊಕ್ಕಂಪಲ್ಲಿ ಮಂಜುನಾಥ, ಬೂರಮಡುಗು ನರಸಿಂಹಪ್ಪ ಮತ್ತಿತರರು ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: