April 29, 2024

Bhavana Tv

Its Your Channel

ಗೂಳೂರು ಆರೋಗ್ಯ ಕೇಂದ್ರದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ಬಾಗೇಪಲ್ಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಕಿನೋಸ್ ಆರೋಗ್ಯ ತಂತ್ರಜ್ಞಾನ ವೇದಿಕೆ ಮುಖಾಂತರ ಕ್ಯಾನ್ಸರ್, ಮಧುಮೇಹ ಹಾಗೂ ಉಸಿರಾಟ ಸಂಬAಧಿತ ಖಾಯಿಲೆಗಳಿಗೆ ನೀಡುತ್ತಿರುವ ಉಚಿತ ಆರೋಗ್ಯ ಸೇವೆಗಳನ್ನು ಮಹಿಳೆಯರು ಸದ್ಭಳಿಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕ ಆರೋಗ್ಯ ತಂತ್ರಜ್ಞಾನಗಳ ಟ್ರಸ್ಟ್ ಸಿಇಓ ಪ್ರಶಾಂತ್ ಆರೂಕ್ಯ ತಿಳಿಸಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ಆರೋಗ್ಯ ತಂತ್ರಜ್ಞಾನಗಳ ಟ್ರಸ್ಟ್, ಕಾರ್ಕಿನೋಸ್, ಹೆಲ್ತ್ ಕ್ಯೂಬ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ನುರಿತ ವೈಧ್ಯರ ತಂಡದಿAದ ಅಯೋಜಿಸಿರುವ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯವನ್ನು ಸುಧಾರಿಸುವ ಉದ್ದೇಶಕ್ಕಾಗಿ ವಿವಿಧ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಮಹಿಳೆಯರಿಗೆ ವಿಶೇಷವಾದ ವೈಧ್ಯಕೀಯ ಶಿಭಿರಗಳನ್ನು ಅಯೋಜಿಸಲಾಗುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡದ ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯನಾಳದ ಖಾಯಿಲೆಗಳು, ಮಧುಮೇಹ, ದೀರ್ಘಕಾಲದ ಉಸಿರಾಟದ ತೊಂದರೆ ಹಾಗೂ ಕ್ಯಾನ್ಸರ್ ಖಾಯಿಲೆಗಳಿಗೆ ಆರೋಗ್ಯ ಶಿಬಿರದಲ್ಲಿ ಆಧುನಿಕ ತಂತ್ರಜ್ಞಾನದೊAದಿಗೆ ಉಚಿತ ತಪಾಸಣೆ ಮಾಡಲಿದ್ದೇವೆ. ೩೦ ವರ್ಷದಿಂದ ೬೫ ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನ ಮಹಿಳೆಯರು ಕ್ಯಾನ್ಸರ್‌ಗೆ ಸಂಬAಧಿಸಿದ ರೋಗಗಳ ಬಗ್ಗೆ ತಪಾಸಣೆ ಮಾಡಿಸಿಕೊಂಡರೆ ರೋಗವನ್ನು ಪ್ರಾರಂಭದ ಹಂತದಲ್ಲೆ ನಿಯಂತ್ರಿಸಲು ಅನುಕೂಲವಾಗುತ್ತದೆ. ಸ್ಥನ, ಗರ್ಭಕಂಠ, ಬಾಯಿ ಮತ್ತು ಮಲ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಕ್ಯಾನ್ಸರ್ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ರೋಗಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರದ ಪ್ರಯೋಜನಗಳನ್ನು ಮಹಿಳೆಯರು ಸದ್ಭಳಿಕೆ ಮಾಡಿಕೊಂಡು ಕ್ಯಾನ್ಸರ್ ರೋಗಗವನ್ನ ತಡೆಗಟ್ಟಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಹೆಲ್ತ್ ಕ್ಯೂಬ್ ಮುಖ್ಯಸ್ಥ ಡಿ.ಕಾರ್ವೇಕ್, ಕಾರ್ಕಿನೋಸ್ ಸಂಸ್ಥೆ ಮುಖ್ಯಸ್ಥ ಡಾ.ಸಾಯಿಮುರಳಿ, ಡಾ.ಗಿರಿಧರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: