September 15, 2024

Bhavana Tv

Its Your Channel

ಭಾರತೀಯ ಸಂವಿಧಾನದ ಅನನ್ಯತೆ ಹಾಗೂ ಶೀತಲ ಸಮರದ ನಂತರ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಕಾರ್ಯಾಗಾರ

ಕುಮಟಾ:ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಭಾರತೀಯ ಸಂವಿಧಾನದ ಅನನ್ಯತೆ ಹಾಗೂ ಶೀತಲ ಸಮರದ ನಂತರ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಕಾರ್ಯಾಗಾರ ಜರುಗಿತು.

ಪ್ರಾಚಾರ್ಯೆ ಪ್ರೊ. ಗೀತಾ ಎಸ್. ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯೇ ಇರುತ್ತದೆ ಹಾಗೆಯೇ ಬೋಧನೆಯೂ ಕಾರ್ಯಾಗಾರಗಳ ಮೂಲಕ ವಿಷಯದ ಸ್ಥೂಲ ಪರಿಚಯ ಸಾಧ್ಯವಾಗುತ್ತದೆ, ಮುಂದಿನ ಜೀವನ ರೂಪಿಸುವಲ್ಲಿ ಇಂಥ ಕಾರ್ಯಾಗಾರಗಳು ನಿಮಗೆ ಪ್ರಯೋಜನಕಾರಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಡಾ. ಬಾಳಿಗಾ ಕಾಲೇಜು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಶಂಕರ ಭಟ್ ಉದ್ಘಾಟಿಸಿ, ಭಾರತೀಯ ಸಂವಿಧಾನದ ಅನನ್ಯತೆ ಹಾಗೂ ಶೀತಲ ಸಮರದ ನಂತರ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತನಾಡಿದರು.

ಕಾರ್ಯಾಗಾರ ಸಂಯೋಜಕ ಕೃಷ್ಣ ನಾಯಕ ಪ್ರಾಸ್ತಾವಿಕ ಮಾತನಾಡಿ, ಕಲಿಕೆಯ ಗುಣಮಟ್ಟ ಹೆಚ್ಚಿಸಿಕೊಳ್ಳುವಲ್ಲಿ ಇಂಥ ಕಾರ್ಯಾಗಾರಗಳು ಪೂರಕ. ಉನ್ನತ ಶಿಕ್ಷಣವನ್ನು ಮನೆಬಾಗಿಲಿಗೆ ಒಯ್ಯುವ ಧ್ಯೇಯದೊಂದಿಗೆ ಸರ್ಕಾರಗಳು ಕಾರ್ಯಪ್ರವೃತ್ತವಾಗಿದೆ. ಆಂತರಿಕ ಗುಣಮಟ್ಟ ಅಭಿವೃದ್ಧಿ ಕೋಶದ ಮೂಲಕ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಇಂಥ ಕಾರ್ಯಾಗಾರಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಪ್ರಾಧ್ಯಾಪಕ ಪ್ರಮೋದ ಹೆಗಡೆ ಇದ್ದರು. ಕಾವ್ಯ ಸಂಗಡಿಗರು ಪ್ರಾರ್ಥಿಸಿದರು. ಮಹೇಂದ್ರ ಹೆಗಡೆ ಸ್ವಾಗತಿಸಿದರು. ಮಂಜುಶ್ರೀ ಪಟಗಾರ ನಿರೂಪಿಸಿದರು.

error: