April 13, 2024

Bhavana Tv

Its Your Channel

ಶಿರಾಲಿಯ ಸೋನಾರಕೇರಿ ಅಂಗನವಾಡಿ ಕೇಂದ್ರ ದಲ್ಲಿ ಹುಟ್ಟುಹಬ್ಬದ ಆಚರಣಾ ಸಂಭ್ರಮ..

ಶಿರಾಲಿ : ಚಂದ್ರಯ್ಯ ಆಚಾರ್ಯ ಹಾಗೂ ಕುಸುಮಕ್ಕನ ಮೊಮ್ಮಗ, ಚೈತ್ರ‌ ನಾಗರಾಜರ ಮಗನಾದ ಅಗಸ್ತ್ಯ ನ. 4 ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಶಿಷ್ಟವಾಗಿ ಅವನ ಸಹಪಾಠಿಗಳೊಂದಿಗೆ ಶಿರಾಲಿ ಸೋನಾರಕೇರಿ ಅಂಗನವಾಡಿ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಶ್ರೀ ರಾಜೇಂದ್ರ ಬೇಕಲ್, ತಾಲೂಕಿನ ಸಿಡಿಪಿಓ ಶ್ರೀಮತಿ ಸುಶೀಲಾ, ಬೇಂಗ್ರೆ ವಲಯ ಮೇಲ್ವಿಚಾರಕಿ ಶ್ರೀಮತಿ ಶ್ವೇತಾ ಪಾಲ್ಗೊಂಡು ಇಲಾಖೆಯ ವಿವಿಧ ಕಾರ್ಯಕ್ರಮ ಗಳು, ಅಂಗನವಾಡಿಗಳ ಮೂಲಕ ಅವುಗಳ ಅನುಷ್ಠಾನದ ಬಗ್ಗೆ ನೆರೆದ ಸಭಿಕರಿಗೆ ಸವಿವರವಾಗಿ ವಿವರಿಸಿದರು. ಅಂಗನವಾಡಿ ಯ ಪೋಷಣಾ ಅಭಿಯಾನ ಕಾರ್ಯಕ್ರಮ ದಡಿ ಮಗುವಿನ 1000 (ಸಾವಿರ) ದಿನಗಳ ಮಹತ್ವ, ಗರ್ಭಿಣಿ ಸೀಮಂತ, ಶಿಶು ಅನ್ನ ಪ್ರಾಶನ, ಮಕ್ಕಳ ಹುಟ್ಟುಹಬ್ಬ, ಮಕ್ಕಳ ಅಕ್ಷರಾಭ್ಯಾಸ, ನವ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಚರಿಸಲಾಗುತ್ತದೆ ಎಂದು ವಲಯ ಮೇಲ್ವಿಚಾರಕಿ ಕಾರ್ಯಕ್ರಮದ ಪ್ರಾಸ್ತಾವಿಕದಲ್ಲಿ ವಿವರಿಸಿದರು. ತದನಂತರದಲ್ಲಿ ಅಗಸ್ತ್ಯ ನ ಹುಟ್ಟುಹಬ್ಬವನ್ನು ದೀಪ ಬೆಳಗುವುದರ ಮೂಲಕ ಪ್ರಾರಂಭವಾಯಿತು. ಅಗಸ್ತ್ಯ ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿ, ತನ್ನ ಸಹಪಾಠಿಗಳಿಗೆ ಕೇಕ್ ತಿನ್ನಿಸಿ ಸಂತೋಷ ದಿಂದ ನಲಿದನು.
ಕಾರ್ಯಕ್ರಮದಲ್ಲಿ ಮಕ್ಕಳ ತಾಯಂದಿರು, ಗ್ರಾಮಸ್ಥರು, ಆರೋಗ್ಯ ಇಲಾಖೆಯ ಎಎನ್ಎಂ, ಆಶಾ ಕಾರ್ಯಕರ್ತೆ ಹಾಜರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಮಾದೇವಿ ನಾಯ್ಕ ಸ್ವಾಗತಿಸಿದರು, ಕೊನೆಯಲ್ಲಿ ಅಂಗನವಾಡಿ ಸಹಾಯಕಿ ಆಶಾ ಶೇಟ್ ಎಲ್ಲರನ್ನು ವಂದಿಸಿದರು.

error: