December 4, 2024

Bhavana Tv

Its Your Channel

ಭಟ್ಕಳ ತಾಲೂಕಿನ ಕರಿಕಲ್ ಧ್ಯಾನ ಮಂದಿರದಲ್ಲಿ ಪ್ರತಿಷ್ಠಾಪನಾ ವರ್ಧತ್ಯುತ್ಸವ ಕಾರ್ಯಕ್ರಮ

ಭಟ್ಕಳ: ತಾಲೂಕ ಕರಿಕಲ್ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಬುದುವಾರ ಪ್ರತಿಷ್ಠಾಪನಾ ವರ್ಧತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಬ್ರಹ್ಮಾನಂದ ಸ್ವಾಮಿಜಿ ನೇತ್ರತ್ವದಲ್ಲಿ ನಡೆಯಿತು.

ಬುದುವಾರ ಸ್ವಾಮಿಜಿಯವರ ನೇತ್ರತ್ವದಲ್ಲಿ ನಡೆದ ಪ್ರತಿಷ್ಠಾಪನಾ ವರ್ದಂತ್ಯೋತ್ಸವದ ಹಿನ್ನಲೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಲೋಕಕಲ್ಯಾಣಾರ್ಥವಾಗಿ ವೇದ ಮೂರ್ತಿ ಗೋಪಾಲಾಚಾರ್ಯ ಬೆಂಗಳೂರು ಇವರ ನೇತ್ರತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವವು ನಡೆಸಲಾಯಿತು.. ಮಧ್ಯಾಹ್ನ ೧ ಗಂಟೆಯಿಂದ ಮಹಾ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು

ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಆಶೀರ್ವಚನವನ್ನು ನೀಡಿ ಇಂದು ನಾವು ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವವನ್ನು ನಡೆಸಿದ್ದೇವೆ. ಮೊದಲಿನಿಂದಲು ನಮ್ಮ ಧರ್ಮ ಸರ್ವೇಜನೋ ಸುಖಿನೋಭವಂತು ಎಂಬ ಮಂತ್ರವನ್ನು ಪಟಿಸುತ್ತಲೆ ಬಂದಿದೆ. ನಮ್ಮ ಧರ್ಮದ ತಳಹದಿ ಆಗಿದೆ. ಧರ್ಮದಿಂದ ಒಳ್ಳೆಯ ಕಾರ್ರಗಳನ್ನು ಮಾಡುವುದರಿಂದ ಭಗವಂತನು ನಮ್ಮನ್ನು ಕಾಯುತ್ತಾನೆ. ಆದ್ದರಿಂದ ಧರ್ಮದಿಂದ ಬದುಕುವುದು ಪ್ರತಿಯೊಬ್ಬನ ಉದ್ದೇಶವಾಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ತಿರುಮಲ ವೆಂಕಟರಮಣ ದೇವಸ್ಥಾನ ನಿಚ್ಚಲಮಕ್ಕಿ ಗುರುಮಠ ಇದರ ಅಧ್ಯಕ್ಷರು ಹಾಗೂ ಸದಸ್ಯರು, ಗುರುದೇವ ಮಠ ಟ್ರಸ್ಟ ದೇವರ ಗುಡ್ಡೆ ಇದರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಸಂಖ್ಯ ಭಕ್ತ ಸಮೂಹದವರು ಉಪಸ್ಥಿತರಿದ್ದರು.

error: