June 20, 2024

Bhavana Tv

Its Your Channel

ಭಟ್ಕಳ ಮಾರಿಕಾಂಬಾ ದೇವಿಯ ಪುನರ್ ಪ್ರತಿಪ್ಠಾ ಮಹೋತ್ಸವ ಹಾಗೂ ವರ್ಧಂತ್ಯೋತ್ಸವ ಸಂಪನ್ನ

ಭಟ್ಕಳ:ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಮಾರ್ಚ ೩ ಮತ್ತು ೪ ರ ಎರಡು ದಿನದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ವರ್ಧಂತ್ಯೋತ್ಸವ ಬುದುವಾರದಂದು ವಿಜೃಂಭಣೆಯಿಂದ ಮುಕ್ತಾಯ ವಾಯಿತು.

ಮಾರ್ಚ ೩ ರಿಂದ ಪ್ರಾರಂಬವಾದ ಮಾರಿಕಾಂಬ ದೇವಿಯ ಪುನರ್ ಪ್ರತಿಪ್ಠಾ ಮಹೋತ್ಸವ ಹಾಗೂ ವರ್ಧಂತ್ಯೋತ್ಸವ ನಿಮಿತ್ತ ಮಾರ್ಚ3 ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಬ್ರಹ್ಮಕೂರ್ಚ, ಹೋಮ,ನಿರ್ವಿಘ್ನತಾ ಗಣಪತಿ ಹೋಮ,ದೇವತಾ ಪ್ರಾರ್ಥನೆ, ದೇವಣಾಂದಿ,ಅಂಕುರಾರ್ಪಣಾ,ಕೌತುಕ ಬಂಧನ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ‌.ಸಂಜೆ 4 ಗಂಟೆಗೆ ಮಾರಿಕಾಂಬಾ ದೇವಿಯನ್ನು ಮತ್ತು ಸ್ವರ್ಣ ಲೇಪಿತ ಶಿಖರ ಕಲಶವನ್ನು ಮೆರವಣಿಗೆ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಕರೆ ತರಲಾಯಿತು ಹಾಗು .5 ಗಂಟೆಗೆ ಗಣಪತಿ ಪೂಜೆ ಪುಣ್ಯಾಹ, ಋತ್ವಿಸ್ವರ್ಣನೆ, ಮಧುಪರ್ಕ ಸಪ್ತಶುದ್ದಿ, ಮಂಡಲದರ್ಶನ, ಕಲಶಸ್ಥಾಪನೆ, ಮಂಡಲನದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಯಿತು

ಮಾರ್ಚ 4 ರಂದು ಬೆಳಗ್ಗೆ 7:45ಕ್ಕೆ ದೇವಿಯ ಪುನರ್ ಪ್ರತಿಪ್ಠೆ ಕಾರ್ಯಕ್ರಮದ ನಂತರ 9 ಘಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, 1 ಘಂಟೆಗೆ ಮಹಾಅನ್ನಸಂತರ್ಪಣೆ,ಸಂಜೆ ರಂಗಪೂಜೆ, ಅಷ್ಷಾವಧಾನ ಸೇವೆ ಮಹಾಪೂಜೆ ,ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು

ಈ ಸಂದರ್ಬದಲ್ಲಿ ದೇವಸ್ಥಾನ ಕಮೀಟಿಯ ನರೇಂದ್ರ ನಾಯಕ್‌ ಮಾತನಾಡಿ ನಮ್ಮ ದೇವಸ್ಥಾನ ೧೯೭೬ ರಂದು ಸ್ಥಾಪಿಸಲಾಯಿತು ಇಲ್ಲಿಯವರೆಗೂ ಈ ಶಕ್ತಿ ಸ್ಥಳದ ದೇವಿಯು ತನ್ನ ಭಕ್ತಾದಿಗಳನ್ನು ರಕ್ಷಿಸಿಕೊಂಡು ಬಂದಿದ್ದಾಳೆ ನಾವು ಈ ತಿಂಗಳು ಮಾರ್ಚ ೩ರಿಂದ ಇಂದು ನಾಲ್ಕನೆ ತಾರಿಖಿನವರೆಗೆ ಪುನರ್ ಪ್ರತಿಪ್ಠಾ ಮಹೋತ್ಸವ ಹಾಗೂ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೆವೆ ಭಕ್ತಾದಿಗಳು ಶ್ರೀದೇವಿಯ ಕ್ರಪೆಗೆ ಪಾತ್ರರಾಗಿದ್ದಾರೆ ಕೊನೆಯ ದಿನವಾದ ಇಂದು ಸತ್ಯನಾರಾಯಣ ವೃತ ಹಾಗು ವಿಷೇಶವಾಗಿ ಸಾರ್ವಜನಿಕ ಅನ್ನಸಂತರ್ಪಣೆಯನ್ನು ನಡೆಸಿರುತ್ತೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್‌.ಡಿ.ಖಾರ್ವಿ,ಶಂಕರ ಶೆಟ್ಟಿ, ನರೇಂದ್ರ ನಾಯಕ್,ಶ್ರೀಧರ ನಾಯ್ಕ ಆಸರಕೇರಿ,ಬಾವಣ್ಣ,ಶ್ರೀಪಾದ ಕಂಚುಗಾರ,ಸುರೇಶ ಆಚಾರ್ಯ,ವಾಮನ ರಾಮನಾಥ ಬಳೆಗಾರ ಹಾಗು ಸಮಸ್ತ ಭಕ್ತ ವೃಂದದವರು ಉಪಸ್ಥಿತರಿದ್ದರು.

error: