
ಗುಡ್ ಕಾಗಾಲ್: “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಶ್ರೀ ರಾಮನಾಥ ಹೈಸ್ಕೂಲ್ ಗುಡ್ ಕಾಗಾಲ್ ನಲ್ಲಿ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತಲ್ಲಣಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಹದಿಹರೆಯ ಅವಧಿಯಲ್ಲಿ ಮಕ್ಕಳಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ, ಮಾನಸಿಕ ಬದಲಾವಣೆ ಉಂಟಾಗುವುದರ ಜೊತೆಗೆ ಕೋಪ, ನಿರಾಶೆ, ಆಧುನಿಕತೆಗಳ ತುಮುಲ, ಕಲಿಕೆಯಲ್ಲಿ ಉಂಟಾಗುವ ತೊಂದರೆಗಳು, ಬೇಸರ, ಪ್ರೀತಿಯ ಕೊರತೆ, ದುಖಃ, ಮೇಲರಿಮೆ, ಕೀಳರಿಮೆ, ಕಂಪ್ಯೂಟರ್ ಗೀಳು, ನೈತಿಕ ದ್ವಂದ್ವಗಳು, ನಕಾರಾತ್ಮಕ ಧೋರಣೆ, ಅನಗತ್ಯ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಹದಿಹರೆಯದ ಲಕ್ಷಣ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಆಡಳಿತ ಮಂಡಳಿಯ ಕೋಶಾಧಿಕಾರಿಯಾದಂತಹ ಶ್ರೀ ಬೀರಣ್ಣ ನಾಯಕರವರು ಉಪನ್ಯಾಸ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಬೆಳವಣಿಗೆಯ ಹಂತ & ಲಭಿಸುವ ಸೇವೆಗಳ ಕುರಿತು "ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕರಾದ ಶ್ರೀ ಶ್ರೀಧರ್ ಎಲ್. ನಾಯ್ಕ ರವರು ಹದಿಹರೆಯದ ಮಾಹಿತಿಯ ಕುರಿತು ತುಂಬಾ ಸುಂದರವಾಗಿ ಶ್ರೀ ಬೀರಣ್ಣ ನಾಯಕರವರು ವಿವರಿಸಿದ್ದಾರೆ ಎಂದು ವ್ಯಕ್ತಪಡಿಸಿದರು.
ಶ್ರೀ ರಾಮನಾಥ ಹೈಸ್ಕೂಲ್ ಗುಡ್ ಕಾಗಾಲ್‌ನ ಶಿಕ್ಷಕರಾದಂತಹ ಕೆ. ನಾರಾಯಣಸ್ವಾಮಿಯವರು ಸ್ವಾಗತಿಸಿ ವಂದಿಸಿದರು.
ಶ್ರೀ ರಾಮನಾಥ ಹೈಸ್ಕೂಲ್ ಗುಡ್ ಕಾಗಾಲ್‌ನ ಶಿಕ್ಷಕರಾದ ಯಶೋಧಾ ಬಿ. ನಾಯ್ಕ ಮತ್ತು ವೀಣಾ ನಾಯ್ಕ ಉಪಸ್ಥಿತರಿದ್ದರು.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ