April 25, 2024

Bhavana Tv

Its Your Channel

ಸೇವಾ ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ, ಮಂದ್ರಾಸ್ ರೆಜಿಮೆಂಟ್ ನಲ್ಲಿ 17 ವರ್ಷ ಅಖಂಡ ಸೇವೆ.

ಚಡಚಣ ತಾಲೂಕಿನ ನಿವರಗಿ ಗ್ರಾಮದ ಅಳಿಯನಾದ ಮೌನೇಶ ನಿಜಗುಣ ಬಡಿಗೇರರವರು ಮೂಲತಃ ಹುಲ್ಯಾಳ ಗ್ರಾಮದವರಾದ ಇವರು. ಭಾರತೀಯ ಸೇನೆಯಲ್ಲಿ 17 ವರ್ಷ ಅಖಂಡ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಷೋಷಿಸಿಕೊಂಡು ಧರ್ಮಪತ್ನಿ ಅಶ್ವಿನಿಯವರ ತವರೂರಾದ ನಿವರಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆರತಿ ಬೆಳಗಿ, ಹೂವಿನ ಮಾಲೆಯನ್ನು ಹಾಕಿ ಅದ್ಧೂರಿಯಾಗಿ ಗ್ರಾಮಸ್ಥರು ಬರಮಾಡಿಕೊಂಡರು. ವಾದ್ಯ-ಮೇಳದವರೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚಾರವನ್ನು ಮಾಡಿ ಮಾವನವರಾದ ವಿಠ್ಠಲ ಬಡಿಗೇರರವರ ಮನೆಯ ಮುಂಭಾಗ ಏರ್ಪಡಿಸಿದ ವೇದಿಕೆಯವರಗೆ ಸಾಗಲಾಯಿತು.

ಈ ವೇದಿಕೆಗೆ ಚಡಚಣ ಪೊಲೀಸ್ ಠಾಣೆಯ PSI ಮಹಾದೇವ ಯಲಿಗಾರರವರು ಆಗಮಿಸಿ ಮಾತನಾಡುತ್ತ.ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಹೇಳಿದರು. ಹಿರಿಯರಿಗೆ ಗೌರವ ಕೊಡುವಂತವರಾಗಿರಬೇಕು. ಯುವಕರು ಒಳ್ಳೆಯ. ಸುಂದರ ಬದುಕನ್ನು ಕಟ್ಟಿಕೊಳ್ಳುವವರಾಗಬೇಕು. ಅತಿ ಶ್ರೇಷ್ಠವಾದ ವೃತ್ತಿ ಸೈನಿಕ ವೃತ್ತಿ. ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು

ಮೌನೇಶ ಬಡಿಗೇರರವರು 28 ಏಪ್ರೀಲ್ 2003 ರಿಂದ 29 ಫೆಬ್ರುವರಿ 2020 ರವರಗೆ 17 ವರ್ಷ ಸೇವೆಯನ್ನು ಸಲ್ಲಿಸಿದರು.
ವೆಲ್ಲಿಂಗ್ ಟನ್(2003-05), ರಾಜಸ್ಥಾನ (2005-06), ಜಮ್ಮು-ಕಾಶ್ಮೀರ
(2006-12), ಆಸ್ಸಾಂ (2012-15), ಕೇರಳ (2015-18), ಜಮ್ಮು-ಕಾಶ್ಮೀರದ ಲೇ (2018-20) ರಾಜ್ಯಗಳಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದರು

ವರದಿ: ಸಿದ್ರಾಮ ಮಾಳಿ

error: