June 20, 2024

Bhavana Tv

Its Your Channel

ಕಡಪಟ್ಟಿ ಗ್ರಾಮ ಪಂಚಾಯಿತಿ ಪ್ರಾಯೋಗಿಕ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಜಮಖಂಡಿ ; ದಿನಾಂಕ 05-03-2020 ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿಯ ಬಿ.ಎಲ್.ಡಿ.ಇ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ್ತ್ರ ಮತ್ತು ಬಿ.ಎ ಪದವಿ ವಿದ್ಯಾರ್ಥಿಗಳಿಂದ ಸಮೀಪದ ಕಡಪಟ್ಟಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ರಾಜ್ಯಶಾಸ್ತ್ರದಲ್ಲಿ ರಾಜಕೀಯ ಮತ್ತು ಆಡಳಿತ ಕುರಿತು ವ್ಯವಸ್ಥಿತ ಅಧ್ಯಯನ ಅನಿವಾರ್ಯವಾಗಿದೆ. ಆದ್ದರಿಂದ ಈ ರೀತಿಯಾದ ಪ್ರಾಯೋಗಿಕ ಅಧ್ಯಯನಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಕಡಪಟ್ಟಿ ಗ್ರಾಮ ಪಂಚಾಯಿತಿ ಪಿ.ಡಿ.ಓ ಅಧಿಕಾರಿಯಾದ ಬಿ.ಎನ್.ನಾಟಿಕಾರ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜ ಇಟ್ಟಿ ಅವರ ಜೊತೆ ಚರ್ಚಿಸಲಾಯಿತು. ಈ ಚರ್ಚೆಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಶಿವಾನಂದ ಜಾಮಗೌಡ, ಮಂಜು ಹೊ‌ಸಮನಿ, ಭಾಗ್ಯಶ್ರೀ ಕಮಲದಿನ್ನಿ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಮಯದಲ್ಲಿ ಪ್ರಾಧ್ಯಾಪಕರಾದ ಎಲ್.ಎಂ.ಮರಕಪನಳ್ಳಿ ಸ್ವಾಗತಿಸಿದರು, ಡಾ.ಎಸ್.ಎಂ.ಬಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಬಿ.ಮಿಶನವರ ವಂದಿಸಿದರು. ಪ್ರಾಧ್ಯಾಪಕರಾದ ಪ್ರಭು ಆಪ್ಪನವರ, ಎಸ್.ಆಯ್.ಬಿರಾದಾರ, ಎಂ.ಜಿ.ಮಠಪತಿ ಮೇಡಂ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಯಮನೂರ ಇಟ್ಟಿ ಉಪಸ್ಥಿತರಿದ್ದರು.

ವರದಿ: ರಮೇಶ ಇಟಗೋಣಿ
ರಬಕವಿ-ಬನಹಟ್ಟಿ

error: