July 12, 2024

Bhavana Tv

Its Your Channel

ಎಗ್ಗಿಲ್ಲದೇ ಅಕ್ರಮ ಮರಳು ಸಾಗುತ್ತಿದೆ. ಮರಳು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೆ.

ಶರಾವತಿ ನದಿ ತೀರದ ಅತಿ ಅಮೂಲ್ಯವಾದ ಸಂಪತ್ತು ಮರಳು ಗಣಿ. ಇದನ್ನು ಕಳೆದ ಹಲವು ವರ್ಷಗಳಿಂದ ಪರವಾನಗಿ ಪಡೆದು ಹಲವು ಸಮಯ ಪರವಾನಗಿ ಇಲ್ಲದೇ ಅಕ್ರಮ ಸಾಗಾಟ ಮಾಡುವ ಮೂಲಕ ಸರ್ಕಾರದ ಆದಾಯ ತಪ್ಪಿಸುತ್ತಿದ್ದರು. ಆದರೆ ಈ ಆದಾಯವನ್ನು ತಪ್ಪಿಸಲು ಮರಳು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹಲವು ಬಾರಿ ಸಾರ್ವಜನಿಕರು ಆರೋಪ ಮಾಡಿದರೂ ಸಾಕ್ಷಿ ಸಿಗುತ್ತಿರಲಿಲ್ಲ. ಆದರೆ ಇಂದು ಅಕ್ರಮ ದಾಸ್ತನು ಮಾಡಿರುವ ಸ್ಥಳಕ್ಕೆ ಸಾರ್ವಜನಿಕರು ವಾಹಿನಿಯವರನ್ನು ಕರೆದು ತೋರಿಸಿದ್ದಾರೆ.

ಇದು ಹೊನ್ನಾವರ ಯಾವೋದು ಅರಣ್ಯ ಭಾಗದ ಪ್ರದೇಶವಲ್ಲ ಪಟ್ಟಣದ ಸೆಂಥ್ ಥಾಮಸ್ ಪ್ರೌಡಶಾಲಾ ಮೈದಾನದಲ್ಲಿ ಸರಿಸುಮಾರು ೪೦ರಿಂದ ೫೦ ಟಿಪ್ಪರ್‌ನಷ್ಟು ಅಕ್ರಮ ಮರಳು ಶೇಖರಣೆಯಾಗಿದೆ. ಅದು ಕೇವಲ ಎರಡು ಅಥವಾ ಮೂರು ದಿನದೊಳಗೆ ಎನ್ನುವ ಮಾತು ಸ್ಥಳಿಯರು ಹೇಳುತ್ತಾರೆ. ಪಟ್ಟಣದ ಪ್ರಮುಖ ಎಲ್ಲಾ ಸಿಸಿ. ಕ್ಯಾಮರ್ ಬಂದ್ ಆಗಿರುವುದು ಒಂದು ಲಾಭವಾದರೆ ಯಾವೊಬ್ಬ ಅಧಿಕಾರಿಯೂ ಮರಳು ಮಾಫಿಯಾ ತಡೆಯಲು ಮುಂದಾಗದೇ ಇರುವುದು ಇವರಿಗೆ ಶ್ರೀರಕ್ಷೆಯಾಗಿದೆ. ಕಂದಾಯ, ಗಣಿ, ಪೋಲಿಸ್ ೩ ಇಲಾಖೆಯಲ್ಲಿ ಅಧಿಕಾರಿಗಳಿದ್ದರೂ ಎಲ್ಲರ ಕಣ್ಣು ತಪ್ಪಿಸಿ ಇಷ್ಟು ಪ್ರಮಾಣದಲ್ಲಿ ಸಂಗ್ರಹ ಮಾಡಲು ಸಾಧ್ಯವೇ ಇಲ್ಲ. ೩ ಇಲಾಖೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಅಥವಾ ಕಣ್ಣಮುಚ್ಚಾಲೆ ಆಡುವುದರ ಮೂಲಕ ಇವರ ಬೆಂಗಾವಲಿಗೆ ಇದ್ದಾರೆಯೇ ಎನ್ನುವುದು ತೋರುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು. ವಿವಿಧ ಇಲಾಖೆ ಇದ್ದು ಜನಸಂಚಾರವಿರುವ ಪ್ರದೇಶದಲ್ಲಿಯೆ ಪಟ್ಟಣ ಭಾಗದಲ್ಲಿ ಈ ಮಟ್ಟಿಗೆ ಮರಳು ದಂದೆ ನಡೆಯುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಯಾವ ಮಟ್ಟಿಗೆ ನಡೆಯುತ್ತಿರಬಹುದು. ಸರ್ಕಾರದ ರಸ್ತೆ ಯೋಜನೆಗೆ ತರಲಾಗಿದೆ ಎಂದು ಕೇಳಿಬರುತ್ತಿದ್ದರೂ ಸರ್ಕಾರದ ಕಾರ್ಯ ಮಾಡಲು ಅಕ್ರಮವೆಸಗಬಹುದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಖಾಸಗಿಯಾಗಿ ಮನೆ ಕಟ್ಟಿಕೊಳ್ಳಲು ಬಡವರು ಒಂದೊ ಎರಡು ಬರಾಸ ಮರಳು ತಮದರೆ ಅದನ್ನು ವಸಪಡಿಸಿಕೊಳ್ಳುವ ಇವರು ಲೋಡಗಟ್ಟಳೆ ಮರಳು ಸಂಗ್ರಹಿಸಲು ಪರವಾನಿಗೆ ಹೇಗೆ ಕೊಟ್ಟರು ಎನ್ನುವುದು ಸಾರ್ವಜನಿಕರ ಪ್ರಶ್ನೇ ಆಗಿದೆ, ಸರಕಾರ ಖಾಸಗಿಯವರಿಗೆ ಎಮ್‌ಸ್ಯಾಂಡ ಉಪಯೋಗಿಸಿ ಎಂದು ಹೇಳುವವರು ಸರಕಾರದ ಕೆಲಸಕ್ಕೆ ಯಕೆ ಉಪಯೋಗಿಸುತ್ತಿಲ್ಲ ಎನ್ನುವ ಪ್ರಶ್ನೆ ಉದ್ಬವವಾಗಿದೆ.

ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ಎನ್ನುವಂತೆ ಶರಾವತಿ ನದಿಯಲ್ಲಿ ಮರಳು ಅಕ್ರಮವಾಗಿ ಮುಗಿದ ಮೇಲೆ ಪರವಾನಗಿ ನೀಡುತ್ತಾರೆಯೆ ಎಂದು ಆಕ್ರೋಶದಿಂದ ಹೊಳೆಸಾಲು ತೀರದ ನಿವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ವರ್ಷ ಬೇಸಿಗೆ ಸಮೀಪಿದರೂ ಮರಳು ದಿಬ್ಬಗಳನ್ನು ಪರಿಶೀಲನೆ ಮಾಡಿದ್ದೇವೆ ಎನ್ನುತ್ತಾರೆ ಹೊರತು ಒಂದು ದಿಬ್ಬಕ್ಕು ಅನುಮತಿ ನೀಡಿಲ್ಲ. ಆದರೂ ಪ್ರತಿನಿತ್ಯ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಮರಳು ಸಾಗಾಟವಾಗುತ್ತಿದ್ದರೆ ಈ ವರ್ಷ ಬೆರಳೆಣಿಕೆಯಷ್ಟು ಮಾತ್ರ ಪ್ರಕರಣ ದಾಖಲಿಸಿ ನುಣುಚಿಕೊಳ್ಳುತ್ತಿದ್ದಾರೆ. ಕಾಂಕ್ರೀಟ್ ರಸ್ತೆ, ಸೇತುವೆ, ಮನೆ, ಶೌಚಾಲಯ ನಿರ್ಮಾಣಕ್ಕೆ ಮರಳು ಅವಶ್ಯವಿದೆ. ಪ್ರತಿಬಾರಿಯಂತೆ ಈ ಬಾರಿ ಪಾಸ್ ಕೂಡಾ ನೀಡಿಲ್ಲ. ಆದರೆ ಅಧಿಕಾರಿಗಳ ಮಾಫಿಯಾದಾರರ ನಡುವಿನ ಒಳ ಒಪ್ಪಂದಿAದ ಈ ಬಾರಿ ಅತಿ ಹೆಚ್ಚು ಮರಳು ಸಂಪತ್ತು ಲೂಟಿಯಾಗಿದೆಯೆ ಹೊರತು ಸರ್ಕಾರಕ್ಕೆ ಬೆರಳೆಣಿಕಯಷ್ಟು ಪ್ರಕರಣದಿಂದ ದಂಡದ ಹಣ ವಸೂಲಾಗಿದೆ.
ಈ ಬಗ್ಗೆ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಸುದರ್ಶನ ಭಟ್ ಮಾತನಾಡಿ ನಂಬರ್ ಪ್ಲೇಟ್ ಇಲ್ಲದ ಲಾರಿಗಳ ಮೇಲೆ ರಾತ್ರಿ ೯ರಿಂದ ಬೆಳಗಿನ ಜಾವ ೬ರವರೆಗೆ ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದೆ. ಗಣಿ ಇಲಾಖೆ ಪರವಾನಗಿಗೆ ಇಂದಿನವರೆಗೂ ನೀಡಿಲ್ಲ. ಕಂದಾಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಈ ರೀತಿ ಮರಳು ಸಂಗ್ರಹವಾದ ಬಳಿಕವಾದರೂ ಮುಟ್ಟುಗೋಲು ಹಾಕಿಕೊಳ್ಳಬಹುದು ಆ ಕಾರ್ಯಕ್ಕೂ ಮುಂದಾಗದೇ ಇರುವುದು ಗಮನಿಸಿದರೆ ಇವರು ಇದಕ್ಕೆ ಶಾಮೀಲಾಗಿದ್ದಾರೆ. ಆಡಳಿತ ಯಂತ್ರ ದುರ್ಬಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಮೀನುಗಾರ ಮುಖಂಡರಾದ ಲೊಕೇಶ ಮೇಸ್ತ ಮಾತನಾಡಿ ಸಾಂಪ್ರದಾಯಿಕ ಮರಳು ನಶಿಸಿ ಹೋಗಲು ಅಕ್ರಮ ಮರಳು ಸಾಗಾಟವು ಒಂದು ಕಾರಣ. ಶರಾವತಿ ನದಿಯ ಅಮೂಲ್ಯ ಸಂಪತ್ತು ಅಧಿಕಾರಿಗಳ ಬೇಜವಬ್ದಾರಿಯಿಂದ ಲೂಟಿಯಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಈಗಲಾದರೂ ಮುಂದಾಗಲಿ ಎಂದು ಆಗ್ರಹಿಸಿದರು.
ಈ ಸಂದರ್ಬದಲ್ಲಿ ಪಟ್ಟಣ ಪಂಚಾಯತ ಸದಸ್ಯ ಸುಭಾಷ ಹರಿಜನ, ಶಿವರಾಜ ಮೇಸ್ತ ಸೇರಿದಂತೆ ಮೀನುಗಾರ ಪ್ರಮುಖರು ಸಾರ್ವಜನಿಕರು ಉಪಸ್ಥಿರಿದ್ದರು.

error: