ಮುರ್ಡೇಶ್ವರ : ಲಯನ್ಸ್ಕ್ಲಬ್ ಮುರ್ಡೇಶ್ವರವು ಹಲವಾರು ವಿಭಾಗಗಳಲ್ಲಿ ಸಮಾಜಕ್ಕೆ ಸೇವೆ ನೀಡುತ್ತಿದ್ದು ಲಯನ್‌ಜಿಲ್ಲೆಯಲ್ಲಿಯೇ ಮಾದರಿಯಕ್ಲಬ್ ಎನಿಸಿಕೊಂಡಿದೆ ಎಂದು ಲಯನ್ ೩೧೭ಬಿ ಜಿಲ್ಲೆಯಗವರ್ನರ್ ಕೆ.ಶಶಿಂದ್ರನ್ ನಾಯರ್ ಹೇಳಿದರು.
.
ಅವರು ಮುರ್ಡೇಶ್ವರಕ್ಕೆ ಭೇಟಿ ನೀಡಿ ಲಯನ್ಸ್ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.ಇತ್ತೀಚೆಗೆ ನೆರೆಪೀಡಿತ ಪ್ರದೇಶಗಳಿಗೆ ಹೋಗಿ ಮನೆಮನೆ ಭೇಟಿ ನೀಡಿಅವರಿಗೆಆವಶ್ಯಕ ವಸ್ತುಗಳನ್ನು ನೀಡಿ ಸಹಾಯ ಮಾಡುವ ಮೂಲಕ ಮುರ್ಡೇಶ್ವರಕ್ಲಬ್ ಲಯನ್ಸ್ ಉದ್ದೇಶಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ.ಇವರು ಶೈಕ್ಷಣಿಕವಾಗಿ ನಡೆಸಿರುವ ಚಟುವಟಿಕೆಗಳು, ಯುವಜನತೆಯಲ್ಲಿ ಮೂಡಿಸುತ್ತಿರುವಜಾಗೃತಿ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆಎಂದು ಹೇಳಿದರು.
ಮುರ್ಡೇಶ್ವರಕ್ಕೆ ಆಗಮಿಸಿದ ಗವರ್ನರ್ ಮೊದಲು ಬಸ್ತಿಮಕ್ಕಿಯಲ್ಲಿ ನಿರ್ಮಿಸಿದ “ಲಯನ್ಸ್ ಸ್ವಾಗತ ಫಲಕ”ವನ್ನು ಅನಾವರಣಗೊಳಿಸಿ ಮುರ್ಡೇಶ್ವರ ಪ್ರಾಥಮಿಕಆರೋಗ್ಯಕೇಂದ್ರದ “ಉಚಿತಕಣ್ಣಿನತಪಾಸಣೆ ಹಾಗೂ ಕಣ್ಣಿನ ಪೊರೆಯ ಶಸ್ತçಚಿಕಿತ್ಸಾ ಶಿಬಿರ”ವನ್ನು ಉದ್ಘಾಟಿಸಿದರು.ಶಿಬಿರದಲ್ಲಿ ೧೨೫ಜನರು ಕಣ್ಣಿನತಪಾಸಣೆಗೆ ಒಳಗಾಗಿ ಅದರಲ್ಲಿ ೨೫ಜನರು ಶಸ್ತçಚಿಕಿತ್ಸೆಗೆಆಯ್ಕೆಯಗಿದ್ದು ೨೬ಜನರಿಗೆ ಕನ್ನಡಕವನ್ನು ವಿತರಿಸಲಾಯಿತು.ನಂತರ ನಡೆದ ಸಾರ್ವಜನಿಕ ಸಭೆಯಲ್ಲಿಕೆರೆಕಟ್ಟೆ ಸರಕಾರಿ ಶಾಲೆಗೆ ೨೫ಕುರ್ಚಿಗಳನ್ನು ಹಾಗೂ ಆ ಶಾಲೆಯ ಮಗುವಿಗೆ ಕ್ಯಾನ್ಸರ್ ನಿವಾರಣೆಯಅಡಿಯಲ್ಲಿ ೧೦,೦೦೦ರೂಪಾಯಿಗಳನ್ನು ವಿತರಿಸಲಾಯಿತು.ಸಮಾಜ ಸೇವಕರಾದ ವಸಂತಚAದಾವರ್ಕರ್, ರಯೀಶ್‌ಅಹ್ಮದ್, ದೇಹಧಾರ್ಢ್ಯಪಟು ವೈಭವ ನಾಯ್ಕರವರನ್ನು ಗೌರವಿಸಿ ಸನ್ಮಾನಿಸಲಾಯಿತು.ಭಟ್ಕಳ ತಾಲೂಕಿನ ಪ್ರಾಥಮಿಕ ಶಾಲಾ ವಿಭಾಗದಿಂದಉತ್ತಮ ಶಿಕ್ಷಕರಾದ ಮನೋಜ್ ಶೆಟ್ಟಿಯವರಿಗೆ “ವಾಜಂತ್ರಿ” ಪ್ರಶಸ್ತಿಯನ್ನು ಹಾಗೂ ಭಟ್ಕಳ ತಾಲೂಕಿನ ಪ್ರೌಢಶಾಲಾ ವಿಭಾಗದಿಂದಉತ್ತಮ ಶಿಕ್ಷಕರಾದಚೆನ್ನವೀರ ಹೊಸ್ಮನಿಯವರಿಗೆ “ಉಡುಪ’ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು.ಇದೇ ವೇಳೆ ಜೀವನ ನಿರ್ವಹಣೆಗಾಗಿ ಮಹಿಳೆಗೆ ಹೊಲಿಗೆ ಯಂತ್ರವನ್ನುಜಿಲ್ಲಾ ಲಯನ್ಸ್ಕ್ಲಬ್ ವತಿಯಿಂದ ನೀಡಲಾಯಿತು.
ವೇದಿಕೆಯ ಮೇಲೆ ಲಯನ್‌ಜಿಲ್ಲಾ ಕಾರ್ಯದರ್ಶಿ ಜೈಅಮೋಲ್ ನಾಯ್ಕ, ಜೋನ್‌ಚೇರ್‌ಪರ್ಸನ್‌ಎಮ್.ವಿ ಹೆಗಡೆ, ಗೌರೀಶ ನಾಯ್ಕ ಉಪಸ್ಥಿತರಿದ್ದರು. ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳರವರು ಲಯನ್ ಸೇವಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು.ಲಯನ್‌ಅಧ್ಯಕ್ಷರಾದರಾಮದಾಸ ಶೇಟ್‌ರವರು ಸ್ವಾಗತಿಸಿದರು.ಡಾ.ಸುನೀಲ್‌ಜತ್ತನ್ ವಂದಿಸಿದರು.ಲಯನ್ ಸದಸ್ಯರದ ಕೃಷ್ಣ ಹೆಗಡೆ, ಜ್ಞಾನೇಶ ಮಾನಕಾಮೆ ಹಾಗೂ ಪೂರ್ಣಿಮಾಕರ್ಕಿಕರಕಾರ್ಯಕ್ರಮ ನಿರ್ವಹಿಸಿದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.