May 23, 2024

Bhavana Tv

Its Your Channel

ಅಕ್ರಮ ಮರಳು ಸಾಗಾಟ ಭಾವನ ವಾಹಿನಿ ವರದಿ ಪ್ರಸಾರ ಬಳಿಕ ಎಚ್ಚೆತ್ತ ಅಧಿಕಾರಿಗಳು,

ಹೊನ್ನಾವರ : ತಹಶೀಲ್ಧಾರ್ ಹಾಗೂ ಪಿಡ್ಲಬ್‌ಡಿ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ, ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ಕಾಸರಕೋಡ ಸಮೀಪ ಸಂಗ್ರಹಿಸಿಟ್ಟ ಮರಳು ವಶ, ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಶಕ್ಕೆ.

ಹೊನ್ನಾವರದ ಸೆಂಥ್ ಥಾಮಸ್ ಕ್ರೀಡಾಂಗಣದಲ್ಲಿ ಅಕ್ರಮ ಮರಳು ಶೇಖರಣೆಯಾಗಿದೆ ಎನ್ನುವ ಬಗ್ಗೆ ವಿಸ್ರಿö್ತÃತ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತಕೊಂಡ ತಾಲೂಕ ದಂಡಾಧಿಕಾರಿ ವಿವೇಕ ಶೇಣ್ವೆ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಸಂಗ್ರಹಿಸಿಟ್ಟ ಮರಳು ರಸ್ತೆ ಕಾಮಗಾರಿಗೆ ಬಳಕೆಯಾಗುದಾರರು ಈ ಪ್ರಮಾಣದಲ್ಲಿ ಅಕ್ರಮವಾಗಿ ಸರ್ಕಾರದ ಆದಾಯಕ್ಕೆ ಕತ್ತರಿ ಹಾಕಿ ಬಳಸಿರುವುದು ಅಫರಾಧವಾಗಿರುದರಿಂದ ಪಿಡ್ಲಬ್ ಡಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು, ಸ್ತಳದಲ್ಲಿ ಸಂಗ್ರಹಿಸಿದ ಮರಳಿನ ಬಗ್ಗೆ ಅಧ್ಯಯನ ನಡೆಸಿ ದಂಡ ವಿಧಿಸಿದ್ದು ಹಣ ಪಾವತಿಸಿ ಕೊಂಡ್ಯುಯುವAತೆ ಸೂಚಿಸಿದ್ದಾರೆ. ಇದಲ್ಲದೇ ಕಾಸರಕೋಡ ಸಮೀಪದ ಹೊಸಪಟ್ಟಣ ನದಿ ತೀರದಲ್ಲಿ ಸರಿಸುಮಾರು ೮ ಬರಾಸ್ ಮರಳು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳನ್ನು ಪತ್ತೆಹಚ್ಚುವಲ್ಲಿ ಪೋಲಿಸರು ಯಶ್ವಸಿಯಾಗಿದ್ದಾರೆ. ತಾಲೂಕಿನಲ್ಲಿ ಬಹುದಿನದಿಂದ ಅಕ್ರಮ ಮರಳು ಸಾಗಾಟವಾಗುತ್ತಿದೆ ಎನ್ನುವುದನ್ನು ಮಟ್ಟ ಹಾಕಲು ಕೊನೆಗೂ ಪೋಲಿಸರು ಮುಂದಾಗಿದ್ದು ಹೊಸಪಟ್ಟಣ ಸಮೀಪ ದಾಸ್ತನು ಮಾಡಲಾಗಿದ್ದ ೮ ಬರಾಸ್ ಮರಳನ್ನು ಪತ್ತೆ ಹಚ್ಚಿ ಪಿ.ಡ್ಲಬ್ ಡಿ. ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಲ್ಲದೇ ಕಾಸರಕೋಡ್ ಸಮೀಪ ಸಮೀಪ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಭಟ್ಕಳ ಎಸಿಎಫ್. ಗೌತಮ ಹಾಗೂ ಹೊನ್ನಾವರ ಪೋಲಿಸ್ ವೃತ್ತನಿರಿಕ್ಷಕರಾದ ವಸಂತ ಆಚಾರಿ ಮಾರ್ಗದರ್ಶನದಲ್ಲಿ ಮಂಕಿ ಠಾಣಾ ಪಿಎಸೈ ಪರಮಾನಂದ ಕೊಣ್ಣುರು, ಹಾಗೂ ಸಿಬ್ಬಂದಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಭಾವನ ವಾಹಿನಿ ಅಕ್ರಮ ಮರಳು ದಂದೆಯ ಬಗ್ಗೆ ವರದಿ ಪ್ರಸಾರದ ಬಳಿಕ ಹಲವಡೆ ಪ್ರಶಂಸೆ ವ್ಯಕ್ತವಾಗಿದ್ದು ಅಧಿಕಾರಿಗಳು ಸ್ಪಂದಿಸಿದ್ದಾರೆ. ವರದಿ ಬಳಿಕ ಮಾಹಿತಿ ಪಡೆದ ತಹಶೀಲ್ದಾರ ವಿವೇಕ ಶೇಣ್ವೆ, ಮತ್ತು ಸಿಪಿಐ ವಸಂತ ಆಚಾರಿ ಈ ಬಗ್ಗೆ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಮುಂದಿನ ದಿನದಲ್ಲಿಯೂ ಅಕ್ರಮ ಮರಳು ಸಂಗ್ರಹದ ಮೇಲೆ ನಿಗಾ ಇಡುವುದಾಗಿ ಭರವಸೆ ನೀಡಿದ್ದಾರೆ.

error: