ಜೀವನದಲ್ಲಿ ಆಗುವ ತುಂಬಾ ಆಗು-ಹೋಗುಗಳಿಗೆ ನಮ್ಮ ಮನಸ್ಸನ್ನು ಸರಿಯಾಗಿ ತರಬೇತಿಗೊಳಿಸದಿರುವುದೇ ಕಾರಣವಾಗಿರುತ್ತದೆ. ಇದನ್ನು ಹೇಗೆ ತರಬೇತಿಗೊಳಿಸಬಹುದು? ಎಂದು ವಿಶ್ವಖ್ಯಾತಿಯ ಆಧ್ಯಾತ್ಮಿಕ ಗುರುಗಳು, ಜೀವನ
ತರಬೇತುದಾರರೂ, ಆತ್ಮಸಮ್ಮೋಹನ ಶಾಸ್ತ್ರಜ್ಞರೂ ಆದ ಶ್ರೀವಿಶ್ವನಾಥ ಗುರೂಜಿಯವರು ಕೆಲವು ಪ್ರಾತ್ಯಕ್ಷಿಕೆಗಳೊಂದಿಗೆ ಸುಪ್ತಮನಸ್ಸಿನ ಶಕ್ತಿಯನ್ನು ತೋರಿಸಿಕೊಟ್ಟರು. ನಮ್ಮ ಸುಪ್ತ ಮನಸ್ಸನ್ನು ಸಕಾರಾತ್ಮಕವಾಗಿ ತರಬೇತಿಗೊಳಿಸಿದರೆ ನಾವು ಆರೋಗ್ಯಯುತ, ಸಂತೋಷಭರಿತ ಹಾಗೂ ಸಮೃದ್ಧ ಜೀವನವನ್ನು ನಡೆಸಬಹುದು ಎಂದು ತಿಳಿಸಿಕೊಟ್ಟರು.
ಈ ಕಾರ್ಯಕ್ರಮವನ್ನು ICYH (International Conference on Yoga and Integrated Holistic Health) ಗಾಗಿ ನಡೆಸುವ ಪೂರ್ವ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಮುರ್ಡೇಶ್ವರದ ಆರ್. ಎನ್. ಎಸ್. ಟ್ರಷ್ಟನ ಅಂಗಸoಸ್ಥೆಗಳಾದ ಆರ್. ಎನ್. ಎಸ್. ರೂರಲ್ ಪಾಲಿಟೆಕ್ನಿಕ್, ಆರ್. ಎನ್. ಎಸ್. ವಿದ್ಯಾನಿಕೇತನ ಹಾಗೂ ಜನತಾವಿದ್ಯಾಲಯಗಳಲ್ಲಿ ದಿನಾಂಕ ೩ ಮಾರ್ಚ ೨೦೨೦ ರಿಂದ ೫ ಮಾರ್ಚ ೨೦೨೦ರವರೆಗೆ ಹಮ್ಮಿಕೊಳ್ಳಲಾಯಿತು. ವಿವಿದೆಡೆ ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ೯೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಇತರರು ಪ್ರತ್ಯಕ್ಷ ನುಭವವನ್ನು ಪಡೆದುಕೊಂಡರು. ಈ ಕಾರ್ಯಕ್ರಮವನ್ನು ಶ್ರೀಮತಿ ನವ್ಯಾ ನಾಯಕ ಮತ್ತು ಶ್ರೀ ಪ್ರದ್ಯುಮ್ನ ಪಡುಕೋಣೆಯವರು ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ಮತ್ತು ಲಯನ್ಸ್ ಕ್ಲಬ್ ಮುರ್ಡೇಶ್ವರದ ಸಹಯೋಗದೊಂದಿಗೆ ಆಯೋಜಿಸಿದ್ದರು. ಶ್ರೀ ಸಂತೋಷ ಆರ್. ಎ. ಪ್ರಾಂಶುಪಾಲರು ಆರ್. ಎನ್. ಎಸ್. ರೂರಲ್ ಪಾಲಿಟೆಕ್ನಿಕ್, ಲಯನ್ಸ್ ಎಮ್. ವಿ. ಹೆಗಡೆ, ಲಯನ್ಸ ತಿಲಕ್ ರಾವ್ ಹಾಗೂ ಇತರ ಪ್ರಮುಖರು ಸಹಕರಿಸಿದರು.
Wonderfully explaining and spreading spiritual science to society by simplistic way….. great masters great job…..