December 6, 2024

Bhavana Tv

Its Your Channel

ಗೊಂಡ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಾಸಕ ಸುನೀಲ್ ನಾಯ್ಕ ಸಭೆ

ಭಟ್ಕಳ : ಗೊಂಡ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಭಟ್ಕಳ ತಹಶೀಲ್ದಾರ್ ಅವರನ್ನು ಸಭೆ ಕರೆದು ಗೊಂಡ ಸಮಾಜಕ್ಕೆ ಕೂಡಲೆ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆAದು ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಆಗ್ರಹಿಸಿದರು.

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಗೊಂಡ ಸಮಾಜದ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರವನ್ನು ನೀಡುವ ಪ್ರಕ್ರಿಯೆಯನ್ನು ಏಕಾಏಕಿಯಾಗಿ ನಿಲ್ಲಿಸಿದ್ದರಿಂದ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಸಮಾಜವು ಆರ್ಥಿಕವಾಗಿ ಬಹಳ ಹಿಂದುಳಿದ ಸಮಾಜವಾಗಿದ್ದು, ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ತಹಶೀಲ್ದಾರ್ ಕಚೇರಿಯಿಂದ ನಿಲ್ಲಿಸಿರುವ ಕಾರಣ ಸಮಾಜದ ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ, ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ತೊಂದರೆ ಉಂಟಾಗಿದೆ.
ಗೊಂಡ ಸಮಾಜದ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭಿಸುವ ಭರವಸೆಯನ್ನು ಸೆಯನ್ನು ಶಾಸಕ ಸುನೀಲ ನಾಯ್ಕ ನೀಡಿದ್ದಾರೆ. ಅಲ್ಲದೆ ಈ ಕಾರ್ಯದಲ್ಲಿ ತಹಶಿಲ್ದಾರರಿಗೆ ಯಾವುದೇ ತೊಂದರೆ ಆದಲ್ಲಿ ಅದಕ್ಕೆ ಶಾಸಕರು ಹೊಣೆಯಾಗಿರುತ್ತಾರೆ ಎಂದು ಮಾದ್ಯಮದ ಮುಂದೆ ತಿಳಿಸಿದ್ದಾರೆ.

error: