September 14, 2024

Bhavana Tv

Its Your Channel

ಕೇವಲ ರಾಜಕೀಯ ವಿರೋಧಕ್ಕಾಗಿ ಬಜೆಟ್ ವಿಶ್ಲೇಷಣೆ ಸಲ್ಲ, -ಶಾಸಕ ದಿನಕರ ಶೆಟ್ಟಿ

ಕುಮಟಾ: ಬಜೆಟ್ ಎನ್ನುವುದು ಸರ್ಕಾರದ ಆರ್ಥಿಕ ಸ್ಥಿತಿಗತಿಯ ನಿಜವಾದ ಬಣ್ಣವನ್ನು ತೋರಿಸುತ್ತದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಬಜೆಟ್ ವಿಶ್ಲೇಷಣೆ ಸಲ್ಲ, ಉತ್ತಮ ಅಂಶಗಳ ಪ್ರಾಮಾಣಿಕ ಪ್ರಶಂಸೆ ಮಾಡುವ ಅಭಿವೃದ್ಧಿಪರ ಚಿತ್ತವಿಶಾಲತೆ ಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇರುವ ಆರ್ಥಿಕ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಪುಕ್ಕಟೆ ಭಾಗ್ಯಗಳಿಗಿಂತ ರೈತರು ಯಾರ ಮುಂದೆಯೂ ಕೈಚಾಚುವ ಸ್ಥಿತಿ ಬರಬಾರದೆಂದು ದೂರಾಲೋಚನೆಯಿಂದ ಯೋಜನೆಗಳ ಘೋಷಣೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಮುದ್ರ ತಡೆಗೋಡೆ, ಯಾಣ ಅಭಿವೃದ್ಧಿ, ಗೋಕರ್ಣದಲ್ಲಿ ಅಗ್ನಿಶಾಮಕ ಮುಂತಾದ ಇನ್ನಷ್ಟು ಅಗತ್ಯತೆಗಳ ಕುರಿತು ಸಿಎಂ ಗಮನಸೆಳೆದಿದ್ದೇನೆ ಎಂದರು.-ಪರೇಶ ಮೇಸ್ತಾ ಪ್ರಕರಣದ ನಂತರದ ಗಲಭೆಯಲ್ಲಿ ಅಮಾಯಕ ಹಿಂದು ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವ ನಿರ್ಣಯ ಕೈಗೊಂಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಮಾ. ೯ ರಂದು ಬೆಂಗಳೂರು ಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ಇತ್ತು. ಈ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸಚಿವರು ಕೂಡಲೇ ಇಲಾಖೆಯ ಉನ್ನತಾ?ಕಾರಿಗಳ ತುರ್ತು ಸಭೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಮಾಯಕ ಹಿಂದು ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಡುವ ಬಗ್ಗೆ ನಿರ್ಣಯಿಸಿ ಸೂಕ್ತ ಆದೇಶ ಹೊರಡಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ದೂರು ದಾಖಲಿಸಲ್ಪಟ್ಟವರು ಪ್ರತಿ ಬಾರಿ ಕೋರ್ಟಿಗೆ ಬೆಂಗಳೂರಿಗೆ ಅಲೆಯಬೇಕಾದ ಸಮಸ್ಯೆಯಿಂದ ನಿರಾಳವಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.-

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ವಿಕಾಸ ಪುತ್ತೂರು ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಿನ ಆಡಳಿತ ಕಾಲದ ಸರ್ಕಾರದ ಆರ್ಥಿಕ ದುಸ್ಥಿತಿಯನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಪ್ರಧಾನಿ ಮೋದಿ ನೃತೃತ್ವದ ಬಿಜೆಪಿ ಸರ್ಕಾರ ಅತ್ಯಂತ ವೇಗವಾಗಿ ಮಾಡುತ್ತಿದೆ. ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ, ದೇಶದ ಕಟ್ಟಕಡೆಯ ವ್ಯಕ್ತಿಯ ಪ್ರಗತಿಯೆಡೆಗೆ ಸ್ಪಷ್ಟ ಗುರಿ ಹೊಂದಿ. ಪಂ. ದೀನದಯಾಳ ಉಪಾಧ್ಯಾಯ ಅವರ ಕನಸಿನ ಪ್ರೇರಣೆ ಹೊತ್ತು ಅಂತ್ಯೋದಯದ ಸಾಕಾರಕ್ಕೆ ವೇಗವಾಗಿ ಕೆಲಸ ಮಾಡುತ್ತಿರುವ ದೇಶಾಭಿಮಾನಿ ನೆಲೆಯಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಧನಾತ್ಮಕ ಅಂಶಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬೇಕಿದೆ. ಎಲ್ಲರಿಗೂ ಬಜೆಟ್?ನ ಉಪಯುಕ್ತತೆಯ ವಿಷಯವನ್ನು ತಿಳಿಸಬೇಕಿದೆ. ಅದಕ್ಕಾಗಿ ಕಾರ್ಯಾಗಾರ ಎಂದರು.
ಬಿಜೆಪಿ ಮಾಧ್ಯಮ ಪ್ರಮುಖ ಪ್ರಮೋದ ಹೆಗಡೆ ಯಲ್ಲಾಪುರ, ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಭಟ್ಕಳ, ಎನ್. ಎಸ್.ಹೆಗಡೆ, ಗುರುಪ್ರಸಾದ ಹೆಗಡೆ, ರೋಟರಿ ಅಧ್ಯಕ್ಷ ಸುರೇಶ ಭಟ್ ಇದ್ದರು. ಎಸ್.ಎಸ್.ಹೆಗಡೆ ಸ್ವಾಗತಿಸಿದರು. ಹೇಮಂತಕುಮಾರ ಗಾಂವಕರ ನಿರೂಪಿಸಿದರು.

error: