
ಕುಮಟಾದಿಂದ ಹೆಗಡೆ ಹೋಗುವ ಸಾರಿಗೆ ಸಂಸ್ಥೆ ಬಸ್ ನ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಖಂಡಿಸಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ನೇತ್ರತ್ವದಲ್ಲಿ ಹೆಗಡೆ ಗ್ರಾಮಸ್ಥರು ಕುಮಟಾದ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸೂರಜ್ ನಾಯ್ಕ ಸೋನಿ ಮಾತನಾಡಿ ಕೆಲ ದಿನಗಳ ಹಿಂದೆ ಕುಮಟಾದಿಂದ ಹೆಗಡೆ ಸಂಚರಿಸುವ ಬಸ್ ನ ದರ ೯ ರೂಪಾಯಿ ಆಗಿದ್ದು ಇದೀಗ ೧೪ ರೂಪಾಯಿ ಗೆ ಹೆಚ್ಚಿಸಲಾಗಿದೆ.ರಾಜ್ಯ ಸರ್ಕಾರದಿಂದ ಬಸ್ ನ ದರ ೧೨% ಹೆಚ್ಚಿಸಲಾಗಿದೆಯಾದರೂ ೯ ರೂಪಾಯಿಯಿಂದ ೧೪ ರೂಪಾಯಿಗೆ ಹೆಚ್ಚಿಸಿರುವುದು ಸಮಂಜಸವಲ್ಲ.ಸಾರಿಗೆ ಇಲಾಖೆ ಈ ರೀತಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಸುಲಿಗೆ ನಡೆಸುತ್ತಿದೆ.೧೨% ಎಂದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲು ಸಾದ್ಯವಿಲ್ಲ ಹೀಗಾಗಿ ಇದನ್ನು ಇನ್ನೊಮ್ಮೆ ಪರಿಷ್ಕರಿಸಿ ಪ್ರಯಾಣದ ದರ ಕಡಿಮೆ ಮಾಡಬೇಕು,ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಡಿಪೊ ಮ್ಯಾನೇಜರ್ ಸೌಮ್ಯ ನಾಯಕ ಜೊತೆ ಮಾತುಕಥೆ ನಡೆಸಿ ಪ್ರಯಾಣದ ದರವನ್ನು ಕಡಿತಗೊಳಿಸುವ ಕುರಿತು ಸರ್ಕಾರಕ್ಕೆ ಜನರ ಬೇಡಿಕೆ ಸಲ್ಲಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ರವಿ ನಾಯ್ಕ,ಶೇಖರ ಬೀರಾ ಮುಕ್ರಿ, ಗಣೇಶ ಮುಕ್ರಿ, ಈಶ್ವರ ಪಟಗಾರ, ವತ್ಸಲ ನಾಯ್ಕ, ಶಿಲ್ಪ ನಾಯ್ಕ, ಕಾರ್ತಿಕ ನಾಯ್ಕ,ದಿನೇಶ್ ನಾಯ್ಕ ರವಿ ನಾಯ್ಕ ,ಗಜಾನನ ನಾಯ್ಕ ,ಉದಯ ಲಕ್ಮಿಕಾಂತ ನಾಯ್ಕ ಮುಂತಾದವರು ಇದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.