March 29, 2024

Bhavana Tv

Its Your Channel

ಒಳಚರಂಡಿ ಅವ್ಯವಸ್ಥೆಯಿಂದ ಬೇಸತ್ತು ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ

ಒಳಚರಂಡಿ ಅವ್ಯವಸ್ಥೆಯಿಂದ ಬೇಸತ್ತು ಹೊನ್ನಾವರ ಪಟ್ಟಣದ ಕೆ.ಎಚ್.ಬಿ ಕಾಲೋನಿ ನಿವಾಸಿಗಳು ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ ಘಟಣೆ ಶನಿವಾರ ನಡೆಯಿತು.

ಹೊನ್ನಾವರ ಕೆ.ಎಚ್.ಬಿ ಕಾಲೋನಿ ನಿವಾಸಿಗಳು ಕರ್ನಾಟಕ ಗೃಹ ಮಂಡಳಿ ನಿವಾಸಿಗಳ ಅಭಿವೃದ್ದಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಈ ಹಿಂದೆಯೆ ಹಲವು ಬಾರಿ ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗೆ ಮನವಿ ನೀಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಬೆಸತ್ತು ಕಡೆಯ ಎಚ್ಚರಿಕೆ ಎನ್ನುವಂತೆ ಕೆ. ಎಚ್.ಬಿ ಕಾಲೂನಿಯಿಂದ ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ಮೂಲಕ ಆಗಮಿಸಿದರು. ಈಗಾಗಲೇ ೩ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಸಮರ್ಪಕವಾಗಿ ಎಲ್ಲಿಯೂ ಕಾರ್ಯ ಮಾಡುತ್ತಿಲ್ಲ ಪ್ರಾರಂಭದಲ್ಲಿ ಕೆಲಸ ಆರಂಭಿಸಿದ ಸ್ಥಳ ನಮ್ಮದಾದರೂ ಇದುವರೆಗೂ ಬೇಸಿಗೆ ಯಲ್ಲಿ ಧೂಳು, ಮಳೆಗಾಲದಲ್ಲಿ ಮಳೆ ನೀರಿನಿಂದ ಸಮಸ್ಯೆಯನ್ನು ಕಳೆದ ೩ ವರ್ಷದಿಂದ ಎದುರಿಸುತ್ತಿದ್ದೇವೆ. ರಸ್ತೆ ದುರಸ್ತಿ ಪಡಿಸಿ ಸಮಸ್ಯೆ ಬಗೆಹರಿಸುವಂತೆ ೪ ಬಾರಿ ಮನವಿ ನೀಡಿದರೂ ಕಿಂಚಿತ್ತು ಪ್ರಯೋಜನವಾಗಿಲ್ಲ. ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಕೊನೆಯ ಅಸ್ತçವೆನ್ನುವಂತೆ ಮೇ ಅಂತ್ಯದೊಳಗೆ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು. ಸಮಸ್ಯೆ ಇಂದು ಬಗೆಹರಿಯಲಿದೆ ನಾಳೆ ಬಗೆಹರಿಯಲಿದೆ ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತು ಸಾಕಾಗಿದ್ದೇವೆ. ಆದರೆ ಇದುವರೆಗೂ ನಿರಿಕ್ಷೆ ನಿರಿಕ್ಷೆಯಾಗಿಯೇ ಉಳಿದಿದೆ. ಈ ಮನವಿಗೆ ಸ್ಪಂದಿಸಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಸಮಸ್ಯೆ ಬಗ್ಗೆ ಸ್ಥಳಿಯ ನಿವಾಸಿಗಳಾದ ಜಿ.ಜಿ. ಭಟ್ ಮಾತನಾಡಿ ಕಳೆದ ೩ ವರ್ಷದಿಂದ ನಮ್ಮ ಕಾಲೂನಿಯವರು ಅನುಭವಿಸಿದ ಧೂಳು ಮತ್ತು ರಸ್ತೆ ಹೊಂಡದ ಸಮಸ್ಯೆಗೆ ಇತಿಶ್ರೀ ಹಾಡಲು ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಪಟ್ಟಣದಾದ್ಯಂತ ಒಳಚರಂಡಿ ಅವ್ಯವಸ್ಥೆಯ ಆಗರವಾಗಿದೆ ನಮ್ಮ ಕಾಲೋನಿಯ ರಸ್ತೆಯ ತುಂಬೆಲ್ಲ ಹೊಂಡಮಯವಾಗಿದ್ದು ಸಾರ್ವಜನಿಕರು ಶಾಲಾ ಮಕ್ಕಳು ಓಡಾಡಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಇಂದು ನಡೆಸಿದ ಪ್ರತಿಭಟನೆ ಕೊನೆಯದಾಗಿದ್ದು ಸರ್ಕಾರದ ಕಣ್ಣು ತೆರೆಸಲು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಕೋಡಲೇ ಸಮಸ್ಯೆ ಬಗೆಹರಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.

ಅಧ್ಯಕ್ಷರಾದ ಜಾಕಿ ಡಿಸೋಜಾ ಮಾತನಾಡಿ ಈ ಹಿಂದಿನ ಮನವಿಗೆ ಸ್ಪಂದನೆ ಸಿಕ್ಕಿಲ್ಲವಾದರೂ ಇದು ಕೊನೆಯ ಎಚ್ಚರಿಕೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಮೇ ಅಂತ್ಯದೊಳಗೆ ಸಮಸ್ಯೆ ಬಗೆಹರಿಸಲಿ ಇಲ್ಲದೇ ಹೋದಲ್ಲಿ ಮುಂದಿನ ದಿನದಲ್ಲಿ ಕಾಲೋನಿ ನಿವಾಸಿಗಳೆಲ್ಲ ಒಟ್ಟಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್.ಹೆಗಡೆ, ಎಲ್.ಆರ್.ನಾಯ್ಕ, ಕೃಷ್ಣ ಗೌಡ, ವಿ.ಡಿ. ಗಾವಡಿ, ಲಕ್ಷö್ಮಣ ತೇಲಂಗ, ಜಗದೀಶ ನಾಯ್ಕ, ಮೇಧಾ ಭಟ್, ಮಂಗಲಾ ಭಟ್, ಕಮಲಾ ನಾಯ್ಕ ಅನಿತಾ ನಾಯ್ಕ, ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.

error: