September 14, 2024

Bhavana Tv

Its Your Channel

ಕ.ವಿ.ವಿ. ಬಿ.ಎಸ್ಸಿ. ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಯರು

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವಿಜ್ಞಾನ ವಿಭಾಗದ ೨೦೧೮-೧೯ ನೇ ಶೈಕ್ಷಣಿಕ ಸಾಲಿನ ರ‍್ಯಾಂಕ್ ಘೋಷಣೆಯಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಹೊನ್ನಾವರದ ವಿದ್ಯರ್ಥಿಗಳು ರ‍್ಯಾಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಹೊನ್ನಾವರದ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ತೇರ್ಗಡೆಯಾದ ಕುಮಾರಿ ಸುಧಾ ಸುಬ್ರಾಯ ಭಟ್ಟ, ಪ್ರಥಮ ರ‍್ಯಾಂಕ್, ಕುಮಾರಿ ಸಹನಾ ನಾಗೇಶ ಶೇಟ್, ದ್ವಿತೀಯ ರ‍್ಯಾಂಕ್, ಹಾಗೂ ಕುಮಾರಿ ತೇಜಸ್ವಿನಿ ಗೌಡ, ಹತ್ತನೆ ರ‍್ಯಾಂಕ್ ಪಡೆದು ಕಾಲೇಜಿಗೆ ಹಾಗೂ ಹೊನ್ನಾವರಕ್ಕೆ ಕೀರ್ತಿ ತಂದಿರುತ್ತಾರೆ.
ಈ ವಿದ್ಯಾರ್ಥಿನಿಯರು ಎಂ.ಎಸ್ಸಿ. ಉನ್ನತ ಶಿಕ್ಷಣ ಪಡೆಯುತ್ತಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಹೊಂದಿರುತ್ತಾರೆ.
ಕಾಲೇಜಿನ ಅಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದದವರು ಇವರನ್ನು ಹಾರ್ದಿಕವಾಗಿ ಅಭಿನಂದಿಸುತ್ತಾರೆ.

error: