
ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತವಾಡಿ ಬಳಿ ರಾಷ್ಟಿçÃಯ ಹೆದ್ದಾರಿ ೬೬ ಪಕ್ಕದಲ್ಲಿ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ರಾತ್ರಿ ೧೦ ಗಂಟೆ ಸುಮಾರಿಗೆ ರಸ್ತೆ ಪಕ್ಕದಲ್ಲಿ ಶವ ಇರುವುದನ್ನು ಸ್ಥಳೀಯರು ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪಿ.ಎಸ್.ಐ ಪರಮಾನಂದ ಕೊಣ್ಣೂರ್ ಅವರು ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ದಾವಿಸಿ ಶವವನ್ನು ಪರೀಕ್ಷಿಸಿ ಅಲ್ಲಿಂದ ತಂದು ಮಂಕಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾರೆ. ಅಂದಾಜು ಸರಿಸುಮಾರು ೪೦ ವರ್ಷದವನಾಗಿರಬಹುದಾದ ವ್ಯಕ್ತಿ ಎರಡುದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆಯಿದ್ದು, ನೀಲಿ ಬಣ್ಣದ ನೈಟ್‌ಪ್ಯಾಂಟ್ ಮತ್ತು ಹಳದಿ ನೀಲಿ ಬಣ್ಣದ ಗೆರೆಗಳಿರುವ ಶರ್ಟ ತೊಟ್ಟಿದ್ದು ಅದರಮೇಲೆ ಜಾಕಿಟ್ ಧರಿಸಿದ್ದಾನೆ. ಕುಡಿಯುವ ನೀರಿನ ಬಾಟಲ್, ಸ್ಲಿಪ್ಪರ್ ಚಪ್ಪಲಿ ಹಾಗೂ ಖಾಲಿ ಬ್ಯಾಗ್ ಬಿಟ್ಟರೆ ಮತ್ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ