

ಕಾರವಾರ: ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕಲಬುರ್ಗಿಯಲ್ಲಿ ಆಗ್ರಹಿಸಿತು.
ಕಲಬುರ್ಗಿಯಲ್ಲಿ ನಡೆಯುತ್ತಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಉತ್ತರ ಕನ್ನಡ ಜಿಲ್ಲೆಯ ಜನತೆ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ನೇತೃತ್ವದಲ್ಲಿ ಮುಂದಿನ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ನೀಡಲು ಅವಕಾಶ ಉತ್ತರ ಕನ್ನಡ ಜಿಲ್ಲೆಗೆ ನೀಡಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿತು.
೧೯೮೨ ರಲ್ಲಿ ಶಿರಸಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆದ ಮೇಲೆ ಈವರೆಗೂ ಮತ್ತೆ ಅವಕಾಶ ಜಿಲ್ಲೆಗೆ ಅವಕಾಶ ಸಿಗಲಿಲ್ಲ. ಕಳೆದ ಕೆಲವಾರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಅಖಿಲ ಬಾರತ ಸಮ್ಮೇಳನ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ ಕ,ಸಾ.ಪ. ಕಾರ್ಯಕಾರಿ ಸಮಿತಿಯನ್ನು ಆಗ್ರಹಿಸುಗತ್ತ ಬgದಿದೆ. ಆದರೆ ನಮ್ಮ ಆಗ್ರಹ ಆಗ್ರಹವಾಗಿಯೇ ಉಳಿಯುತ್ತದೆಯೇ ವಿನಃ ಸ್ಪಂಮದನೆ ಸಿಗಲಿಲ್ಲ. ಈ ಬಾರಿಯಾದರೂ ಮುಂದಿನ ಸಮ್ಮೇಳನ ನಡೆಸುವ ಅವಕಾಶವನ್ನು ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಕ.ಸಾ.ಪ. ಕಾರ್ತಕ್ರಮ ನೀಡಿಬೇಕು ಎಂದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಆಗ್ರಹಸಿದರು.
ಈ ಸಂದರ್ಭದಲ್ಲಿ ಅರವಿಂದ ಕರ್ಕಿಕೋಡಿ ಅವರೊಂದಿಗೆ ಕ.ಸಾ.ಪ. ತಾಲೂಕು ಅಧ್ಯಕ್ಷರಾದ ಉಪೇಂದ್ರ ಘೋರ್ಪಡೆ ಹಳಿಯಾಳ ಡಾ. ಶ್ರೀಧರ ಉಪ್ಪಿನಗಣಪತಿ ಕುಮಟಾ, ಡಾ. ಪ್ರಕಾಶ ನಾಯಕ ಅಂಕೋಲಾ, ನಾಗರಜ ಹರಪಹಳ್ಳಿ ಕಾರವಾರ, ವೇಣುಗೋಪಾಲ ಮದ್ಗುಣಿ, ಜಿ. ಆರ್. ಹೆಗಡೆ, ಜಗದೀಶ ಭಂಡಾರಿ, ಡಾ. ಶೈ¯ಜಾ ಮಂಗಳೂರಕರ, ಎಚ್. ಗಣೇಶ್, ಮಹೇಶ ನಾಯ್ಕ, ಶಿವರಾಯ ಎನ್. ಕಟ್ಟಿಮನಿ, ಎನ್. ಜಯಚಂದ್ರ, ನಾಗೇಶ ಆರ್. ನಾಯ್ಕ, ನಝೀರ್ ಶೇಖ್, ಫೈರೋನಾ ಬೇಗಂ ಶೇಖ್, ಪ್ರಕಾಶ ಕಡಮೆ, ಶಶಿಧರ ದೇವಾಡಿಗ, ಶಂಕರ ಜಿ. ಗೌಡ, ಎಂ. ಎನ್.ನಾಯ್ಕ, ರಾಜೇಶ್ ಶೇಟ್ಮ ವಿಷ್ಣು ಹರಿಕಾಂತ, ದಾಮೋದರ ಜಿ. ನಾಯ್ಕ, ಗೌರೀಶ ನಾಯಕ, ದಯಾನಂದ ಸಿ. ನಾಯ್ಕ ಮುತಾದವರು ಉತ್ತರ ಕನ್ನಡ ಜಿಲ್ಲೆಗೆ ಮುಂದಿನ ಸಮ್ಮೇಳನ ನಡೆಸಲು ಅವಕಾಶ ನೀಡಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿದರು.
ಫೆ. ೬ ರಂದು ರಾತ್ರಿ ಕಲಬುರ್ಗಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ನಡೆಯಲಿರುವ ಕೇಂದ್ರ ಕ..ಸಾ.ಪ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಸಮ್ಮೇಳನ ಎಲ್ಲ ನಡೆಸುವುದೆಂದು ನಿರ್ಣಯ ಕೈಗೊಳ್ಳಲಾಗುವುದು. ಈಗಾಗಲೇ ಸಮ್ಮೇಳನ ನಡೆಸಲು ಉತ್ತರ ಕನ್ನಡದ ಜೊತೆ ಚಿಕ್ಕಬಳ್ಳಾಪುರ, ಹಾವೇರಿ, ಕೋಲಾರ ಜಿಲ್ಲೆಗಳು ಪ್ರಬಲ ಆಕಾಂಕ್ಷಿಯಾಗಿದ್ದು ತೀವ್ರ ಪ್ರಯತ್ನ ನಡೆಸುತ್ತಿವೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.