
ಶಿರಸಿ: ಶರಾವತಿ ಅಭಯಾರಣ್ಯಕ್ಕೆ ಶಿರಸಿ ತಾಲೂಕಿನ ರಾಗಿಹೊಸಳ್ಳಿಯ ಹೆಬ್ರೆ, ಬುಗುಡಿ, ಹೊಸೂರು ಹೀಗೆ ೩ ಗ್ರಾಮಗಳ ಸುಮಾರು ೫೪೯.೯೭ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸೇರ್ಪಡೆಗೊಳಿಸಿದ ಕುರಿತು ಅಭಯಾರಣ್ಯ ಜಾಗೃತ ಕಾರ್ಯಕ್ರಮವನ್ನು ಶಾಂಭವಿ ಸಭಾಭವನ, ರಾಗಿಹೊಸಳ್ಳಿಯಲ್ಲಿ ಫೆ. ೯ ರವಿವಾರ ಮುಂಜಾನೆ ೧೦.೦೦ ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಂಡಲ ಗ್ರಾಮ ಪಂಚಾಯತ ಅಧ್ಯಕ್ಷ ದೇವರಾಜ ಮರಾಠಿ ವಹಿಸಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಬೇಕೆಂದು ತಾಲೂಕಾ ಸಂಚಾಲಕ ಬಾಬು ಮರಾಠಿ ಮುಂಡಗಾರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.