
ಭಟ್ಕಳ: ಕೆಲವರು ಭಾರತದೇಶ ಹಿಂದೂ ರಾಷ್ಟçವೆಂಬ ಭ್ರಮೆಯಲ್ಲಿದ್ದಾರೆ ಆದರೆ ನಾನು ಹೇಳುತ್ತಿರುವುದು ಇದು ಹಿಂದೂರಾಷ್ಟçವಾಗಿರದೆ ಹಿಂದೂಮುಸ್ಲಿವiರ ರಾಷ್ಟçವಾಗಿದೆ ಎಂದು ಪ್ರತಿಷ್ಟಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಖ್ಯಾತ ವೈದ್ಯ ಡಾ.ಸುರೇಶ್ ನಾಯಕ ಹೇಳಿದರು.
ಅವರು ನಗರದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆ ಖಲಿಫಾ ಮೊಹಲ್ಲಾದ ಗುರುಗಳ ಪಳ್ಳಿಯಲ್ಲಿ ಆಯೋಜಿಸಿದ್ದ ‘ಬನ್ನಿ ಪರಸ್ಪರ ಅರಿಯೋಣ’ ಸೌಹಾರ್ದ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನನ್ನ ಐವತ್ತು ವರ್ಷಗಳ ವೈದ್ಯ ವೃತ್ತಿಯಲ್ಲಿ ಮುಸ್ಲಿಮರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಾಗಿದ್ದು ಮುಸ್ಲಿಮರ ಮಸೀದಿಯೊಳಗೆ ಪ್ರವೇಶಿಸುವ ಅವಕಾಶ ಈಗ ಒದಗಿಬಂದಿದ್ದು ನಾನೇನು ಮಾತನಾಡಬೇಕೆಂಬು ತೋಚುತ್ತಿಲ್ಲ ಎಂದ ಅವರು ಭಾರತ ಭವ್ಯ ಪರಂಪರೆಯುಳ್ಳ ದೇಶವಾಗಿದ್ದು ಜಗತ್ತಿನ ಬೇರೆ ದೇಶಗಳ ಮುಸ್ಲಿಮರಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮುಸ್ಲಿಮರು ಅತಿಹೆಚ್ಚು ಸಂತೋಷದಿAದ ಜೀವಿಸುತ್ತಿದ್ದಾರೆ ಎಂದರು. ಅಮೇರಿಕಾದಂತಹ ಮುಂದುವರೆದ ರಾಷ್ಟçದಲ್ಲಿ ನಮ್ಮ ದೇಶದ ಹಿಂದೂ ಮುಸ್ಲಿಮರು ಅತಿ ಉನ್ನತ ಸ್ಥಾನದಲ್ಲಿದ್ದಾರೆ. ನಾವೆಲ್ಲರೂ ಸೇರಿ ನಮ್ಮ ರಾಷ್ಟçವನ್ನು ಸೂಪರ್ ಪವರ್ ರಾಷ್ಟçವನ್ನಾಗಿ ಮಾಡಬೇಕು ಎಂದು ಕರೆ ನೀಡಿದ ಅವರು ನಾವು ಯಾರನ್ನೂ ಹೆದರಬೇಕಾಗಿಲ್ಲ ಸತ್ಯಕ್ಕೆ ಮಾತ್ರ ತಲೆಬಾಗಬೇಕು ‘ತೂ ಹಿಂದೂ ಬನೆಗಾ ನ ಮುಸಲ್ಮಾನ್ ಬನೆಗಾ ಇನ್ಸಾನ್ ಕಿ ಔಲಾದ್ ಹೈ ತು ಇನ್ಸಾನ್ ಬನೆಗಾ’ ಎಂಬ ಕವಿವಾಣಿಯನ್ನು ಹಾಡುವುದರ ಮೂಲಕ ನಾವೆಲ್ಲರು ಹಿಂದೂಮುಸ್ಲಿಮರಾಗದೆ ಮನುಷ್ಯರಾಗಿ ಬದುಕೋಣ ಎಂಬ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ನಮ್ಮಲ್ಲಿ ಬಹಳ ವರ್ಷಗಳಿಂದಲೂ ಹಿಂದೂ ಬಾಂಧವರನ್ನೂ ಮಸೀದಿಗೆ ಕರೆಯುವಂತಹ ಪರಂಪರೆಯಿದೆ. ಈ ಮೂಲಕ ನಾವು ಮನುಷ್ಯರೆಲ್ಲರೂ ಓರ್ವ ದೇವನ ಸೃಷ್ಟಿಗಳು ನಮ್ಮಲ್ಲಿರುವ ರಕ್ತದ ಬಣ್ಣ ಒಂದೇ ಆಗಿದ್ದು ಪರಸ್ಪರನ್ನು ಅರಿಯುವಂತಹ ಕಾರ್ಯವಾಗುತ್ತಿದೆ ಎಂದರು. ಇಸ್ಲಾಮ್ ನೈಸರ್ಗಿಕ ಧರ್ಮವಾಗಿದ್ದು ಪವಿತ್ರ ಕುರಾನ್ ಗ್ರಂಥ ಎಲ್ಲ ಮನುಷ್ಯರ ಮಾರ್ಗದರ್ಶನಕ್ಕಾಗಿ ಅವತೀರ್ಣಗೊಂಡಿದೆ ಇದನ್ನು ಅನುಸರಿಸಿ ನಡೆದರೆ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ಮಲ್ಪೆಯ ಸೈಯ್ಯದನಾ ಅಬೂಬಕರ್ ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಅಬ್ದುಸ್ಸಮಿ, ಮಾಜಿ ಶಾಸಕ ಜೆ.ಡಿ.ನಾಯ್ಕ, ಪತ್ರಕರ್ತ ವಸಂತ ದೇವಾಡಿಗ, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಶ್ ನಾಯ್ಕ ಮಾತನಾಡಿದರು.
ಖಲಿಫಾ ಜಮಾಅತ್ ಅಧ್ಯಕ್ಷ ಮೊಹತೆಶಮ್ ಮುಹಮ್ಮದ್ ಜಾಫರ್, ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ, ಪ್ರಧಾನ ಕಾರ್ಯದರ್ಶಿ ಸಾದಾ ಮೀರಾ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಫಿಝ ಅನೀಸ್ ಬುಡ್ಡು ಕುರಾನ್ ಪಠಿಸಿದರು. ಮುಬಶ್ಶಿರ್ ಹಲ್ಲಾರೆ ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನೂ ಸ್ವಾಗತಿಸಿದರು. ತಲ್ಹಾ ಸಿದ್ದಿಬಾಪ ಧನ್ಯವಾದ ಅರ್ಪಿಸಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.