December 8, 2022

Bhavana Tv

Its Your Channel

ಬಣಗುಡುತಿದ್ದ ಕೊಡಗಿನ ಪ್ರವಾಸಿ ತಾಣಗಳು

ಜಿಲ್ಲೆಯ ರಾಜಾಸೀಟು, ಮಾಂದಲ್ಪಟ್ಟಿ, ಅಬ್ಬಿ ಜಲಪಾತ, ಕಾವೇರಿ ನಿಸರ್ಗಧಾಮ,ದುಬಾರೆ ಆನೆ ಕ್ಯಾಂಪ್ ಹಾಗು ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ಕ್ಷೇತ್ರದಲ್ಲಿ ಭಕ್ತರು, ಪ್ರವಾಸಿಗರು ಇಲ್ಲದೆ ಬಿಕೋ ಎನ್ನುತ್ತಿದೆ. ಹೊರಜಿಲ್ಲೆಯ ಪ್ರವಾಸಿಗರಿಗೆ ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಮುಖ್ಯ ದ್ವಾರದ ವರೆಗೂ ಬಂದು ವಾಪಸ್ಸಾಗುತ್ತಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯ ನಡೆಸಲಾಗುತ್ತಿದ್ದು ಮಡಿಕೇರಿ ತಾಲೂಕು 32,ವಿರಾಜಪೇಟೆ 23,ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಮಂದಿಯನ್ನು ಪರೀಕ್ಷಿಸ ಲಾಗಿದ್ದು, ಈಗಾಗಲೇ ಸೋಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವರದಿಗಾಗಿ ಕಾಯಲಾಗುತ್ತಿದೆ.

About Post Author

error: