October 5, 2024

Bhavana Tv

Its Your Channel

ಕೊಡಗಿನ ಸುಳುಗೋಡುವಿನಲ್ಲಿ-ಗಂಡು-ಹುಲಿ-ಸೆರೆ..!

ಕೊಡಗು: ಗೋಣಿಕೊಪ್ಪಲು ಸಮೀಪದ ಬಾಳೆಲೆ ಹೋಬಳಿ ಸುಳುಗೋಡುವಿನಲ್ಲಿ ಹುಲಿ ಸೆರೆಯಾಗಿದ್ದು ಸತತ ಆರು ಗಂಟೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಹುಲಿಯು ಗಂಡಾಗಿದ್ದು ಸುಮಾರು 8 ರಿಂದ 9 ವಯಸ್ಸಿನ ಪ್ರಾಯವಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಶನಿವಾರ ಬೆಳಿಗ್ಗೆ 10 ಗಂಟೆಯ ವೇಳೆಯಲ್ಲಿ ಸುಳುಗೋಡು ಗ್ರಾಮದ ಪಾಸುರ ಕಾಶಿ ಕಾರ್ಯಪ್ಪ ಎಂಬವರು ತಮ್ಮ ಹಸುವನ್ನು ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ತೆರಳಿದಾಗ ಭಾರಿ ಗಾತ್ರದ ಹುಲಿಯೊಂದು ಕೆರೆಯಲ್ಲಿ ನೀರು ಕುಡಿಯುತ್ತಿತ್ತು. ಇದನ್ನು ಕಂಡ ಕಾಶಿಯವರು ಗಾಬರಿಗೊಂಡು ತಮ್ಮ ಹಸುವನ್ನು ಕೆರೆಯ ಏರಿಯಿಂದಲೇ  ಕರೆದುಕೊಂಡು ವಾಪಾಸಾಗಿದ್ದಾರೆ.ದೂರದಿಂದ ನಿಂತು ನೀರು ಕುಡಿಯುತ್ತಿದ್ದ ಹುಲಿಯನ್ನು ಗಮನಿಸಿದಾಗ ಹುಲಿಯು ಘರ್ಜಿಸಿ ಮುಂದೆ ಹೋಗುವ ಪ್ರಯತ್ನ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಹುಲಿಯ ಸೊಂಟದ ಭಾಗಕ್ಕೆ ತೀವ್ರ ಸ್ವರೂಪದ ನೋವು ಉಂಟಾಗಿದ್ದ ಕಾರಣ ಕೆರೆಯಲ್ಲಿ ವಿಶ್ರಾಂತಿ ಪಡೆಯತಿತ್ತು.ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಸ್ಥಳಕ್ಕೆ ತೆರಳಿ ಕಾಶಿ ಕಾರ್ಯಪ್ಪ ಅವರ,  ಗ್ರಾಮಸ್ಥರ, ಮಾಹಿತಿಯಂತೆ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ಶ್ರೀಪತಿ, ಅರ್.ಎಫ್.ಒ. ಅಶೋಕ್ ಹುನಗುಂದ ಅವರ ಗಮನಕ್ಕೆ ತರುವ ಮೂಲಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸು ವವರೆಗೂ ಹುಲಿಯ ಚಲನವಲನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹುಲಿಯ ಚಲನವಲನ ಬಗ್ಗೆ ಮಾಹಿತಿ ಪಡೆದು ಅರವಳಿಕೆ ಮದ್ದಿನ ಸಹಾಯದಿಂದ ಹುಲಿಯನ್ನು ಪ್ರಜ್ಞೆ ತಪ್ಪಿಸಿ ನಂತರ ಸೆರೆ ಹಿಡಿದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.
ಎರಡು ಬಾರಿ ಅರವಳಿಕೆ ಮದ್ದನ್ನು ಪ್ರಯೋಗ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಗಾಬರಿಗೊಂಡ ಹುಲಿಯು ಭಾರಿ ಘರ್ಜನೆಯೊಂದಿಗೆ ಸಮೀಪದ ಕಾಫಿ ತೋಟವನ್ನು ಪ್ರವೇಶ ಮಾಡಿತ್ತು. ಅಂತಿಮವಾಗಿ ನುರಿತ ತಜ್ಞರು ಮೂರನೆಯ ಪ್ರಯೋಗದಲ್ಲಿ ಯಶಸ್ವಿಯಾದರು. ಗ್ರಾಮದ ಜನರು ಹುಲಿಯನ್ನು ವೀಕ್ಷಿಸಲು ಮುಗಿಬಿದ್ದರು.

error: