September 14, 2024

Bhavana Tv

Its Your Channel

ಸಹೋದರಿಯ ಮಗಳ ನಿಶ್ಚಿತಾರ್ಥ ಸಮಾರಂಭಕ್ಕೆ ಬರುತ್ತಿದ್ದ ಕೊಡಗಿನ ಕುಟುಂಬ ಶೋಕ ಸಾಗರದಲ್ಲಿ

ಕೊಡಗು :ಸಹೋದರಿಯ ಮಗಳ ನಿಶ್ಚಿತಾರ್ಥ ಸಮಾರಂಭಕ್ಕೆ ಬರುತ್ತಿದ್ದ ಕೊಡಗಿನ ಕುಟುಂಬ ಶೋಕ ಸಾಗರದಲ್ಲಿ ಇದೆ. ಭಾನುವಾವಾರದಂದು ಮಡಿಕೇರಿಯ ಖಾಸಗಿ ಹೊಟೇಲಿನಲ್ಲಿ ನಡೆಯಬೇಕಿದ್ದ ಸಮಾರಂಭದಲ್ಲಿ ಸೂತಕದ ವಾತಾವರಣ ಉಂಟುಮಾಡಿದೆ.


ಬೆಂಗಳೂರಿನಲ್ಲಿ ವಾಸವಿದ್ದ ರಶ್ಮಿ, ಕಾವೇರಮ್ಮ, ರಾಮಕೃಷ್ಣ, ನಿಶ್ಚಿತ ಮತ್ತೊಬ್ಬ ಪುತ್ರ ಕೊಡಗಿನ ಮರಗೋಡು ನಿವಾಸಿಗಳು . ಬೆಂಗಳೂರಿನಲ್ಲಿ ಖಾಸಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ರಾಮಕೃಷ್ಣ ತಮ್ಮ ಸ್ವಂತ ಕಾರಿನಲ್ಲಿ ಮಡಿಕೇರಿ ಕಡೆ ಸಮಾರಂಭಕ್ಕೆ ಹೊರಟ ಸಂದರ್ಭ ನೆಲಮಂಗಲ ಬಳಿ ಎದುರಿಗೆ ಬಂದ ಶ್ವಿಫ್ಟ್ ಕಾರು ಇವರು ಪ್ರಯಾಣಿಸುತ್ತಿದ್ದ ಇಕೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿ ರಾಮಕೃಷ್ಣ ಪತ್ನಿ ರಶ್ಮಿ, ತಾಯಿ ಕಾವೇರಮ್ಮ ಸ್ಥಳದಲ್ಲೇ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿ ಪ್ರಾಣಬಿಟ್ಟರೆ, ರಾಮಕೃಷ್ಣ ಎರಡು ಕಾಲನ್ನೂ ಕಳೆದುಕೊಂಡಿದ್ದು, ಪರಿಚಯಸ್ತ ಚಾಲಕ ನಾಗರಾಜ್ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಅದೃಷ್ಟವಶಾತ್ ನಿಶ್ಚಿತ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಪೋಲಿಸರು ಪ್ರಕರಣ ದಾಖಲು ಮಾಡಿದ್ದು, ಇತ್ತ ರಶ್ಮಿ ಸಹೋದರಿ ಮನೆ ಮರಗೋಡಿನಲ್ಲಲಿ ಶೋಕ ಮಡುಗಟ್ಟಿದೆ.

error: