November 14, 2024

Bhavana Tv

Its Your Channel

ಕುನ್ನೂರ ಗ್ರಾಮ ಪಂಚಾಯತಿಯ ಕಟ್ಟಡ ಉದ್ಘಾಟಣೆ

ಕುನ್ನೂರ; ನಿಪ್ಪಾಣಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುನ್ನೂರ ಗ್ರಾಮದಲ್ಲಿ ಮಂಜೂರಾದ ಸುಮಾರು 48 ಲಕ್ಷ. ರೂಗಳ ಮೊತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯತಿಯ ಕಟ್ಟಡವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸಭೆ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಶ್ರೀಮತಿ ಸುಮಿತ್ರಾ ಉಗಳೆ, ತಾ.ಪಂ ಸದಸ್ಯರಾದ ಶ್ರೀಮತಿ ಸುನಿತಾ ಕಣಗಲೆ, ಶ್ರೀ ವೀರೇಂದ್ರ ಮಾನೆ, ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ, ಕುನ್ನೂರ ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ರೇಖಾ ಉಪಾಧ್ಯೆ, ಉಪಾಧ್ಯಕ್ಷರಾದ ಶ್ರೀ ತಾನಾಜಿ ಬಾಮನೆ, ಗ್ರಾಮ ಪಂಚಾಯತಿಯ ಪಿಡಿಓ ಶ್ರೀಮತಿ ಪದ್ಮಶ್ರೀ ಜಾಧವ, ಎ.ಓ ಶ್ರೀ ಕೆ‌.ಎಸ್.ಪಾಟೀಲ ಶ್ರೀ ದತ್ತಾ ಶಿಂಧೆ, ಶ್ರೀ ಮನೋಹರ ಉಪಾಧ್ಯೆ, ಶ್ರೀ ಆನಂದ ಕಣಗಲೆ, ಶ್ರೀ ರಾಮಚಂದ್ರ ಚಂಡಕೆ, ಶ್ರೀ ವಿಜಯ ಜಾಧವ, ಶ್ರೀ ಸುಧಾಕರ , ಶ್ರೀ ಶ್ರೀಕಾಂತ ಕಣಗಲೆ ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

error: