April 19, 2024

Bhavana Tv

Its Your Channel

ಹೊನ್ನಾವರದಲ್ಲಿ ಕರೋನಾ ಬಂದಿದೆ – ಸುಳ್ಳು ವದಂತಿ – ಸಾರ್ವಜನಿಕರಿಗೆ ಭಯ ಮೂಡಿಸಲು ಮುಂದಾದವರ ಮೇಲೆ ಕಾನೂನು ಕ್ರಮ ಡಾ.ರಾಜೇಶ ಕಿಣಿ

ಹೊನ್ನಾವರ ; ಜಗತ್ತಿನ ವಿವಿಧಡೆ ಕರೋನಾ ರೋಗದ ಬಗ್ಗೆ ಆತಂಕದ ಮಧ್ಯೆ ರಾಜ್ಯದಲ್ಲಿ ತಿವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೆ ಇದರ ಬಗ್ಗೆ ಹಲವು ಅಪ್ರಪಚಾರ ಮೂಡಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕಾರ್ಯ ಹೊನ್ನಾವರದಲ್ಲೂ ನಡೆಯುತ್ತಿದೆ. ತಾಲೂಕಿನ ಗೇರುಸೊಪ್ಪಾ ಭಾಗದಲ್ಲಿ ಕರೋನಾ ಬಂದಿದೆ ತಾಲೂಕಿನ ಆರೊಗ್ಯಧಿಕಾರಿಗಳೆ ಬಂದಿದ್ದಾರೆ ಎನ್ನುವ ಸಂದೇಶವನ್ನು ಸೊಶಿಯಲ್ ಮೀಡಿಯಾ ಮೂಲಕ ಹರಿಬಿಟ್ಟಿದ್ದು ಇದು ಶುದ್ದ ಸುಳ್ಳು ಎಂದು ಆರೋಗ್ಯಧಿಕಾರಿ ಡಾ. ರಾಜೇಶ ಕಿಣಿಯವರೆ ಸ್ಪಷ್ಟಪಡಿಸಿದ್ದಾರೆ. ಈ ಸಂದೇಶ ಫಾರ್ವಡ್ ಮಾಡಬೇಡಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಆ ಸಂದೇಶ ಹೇಗಿದೆ ಎಂದರೆ

(ಇದು ಶಂಕೆ ಮಾತ್ರ…
ಗೇರುಸೊಪ್ಪ ಎಂದರೆ ಶರಾವತಿ ಆಚೆಗಿನ ಪ್ರದೇಶದಲ್ಲಿ ಎಲ್ಲಿ ಅಂತ ಸ್ಪಷ್ಟವಾಗಿ ಗೊತ್ತಿಲ್ಲವಾದರೂ ಸರ್ಕಾರಿ ದಾಖಲೆಗಳ ಪ್ರಕಾರ ಶರಾವತಿ ಆಚೆಗಿನ ಭಾಗವನ್ನು ಕೂಡ ಗೇರುಸೊಪ್ಪ ವ್ಯಾಪ್ತಿಗೆ ಸೇರಿಸೋ ಹಿನ್ನಲೆಯಲ್ಲಿ ಗೇರುಸೊಪ್ಪ ಎಂದು ಉಲ್ಲೇಖ ಮಾಡಿದೆ… ತಾಲೂಕು ವೈದ್ಯಾಧಿಕಾರಿ ಶ್ರೀ ರಾಜೇಶ್ ಕಿಣಿ ನೇತೃತ್ವದಲ್ಲಿ ಆತನನ್ನ ತಾಲೂಕು ಆ‌ಸ್ಪತ್ರೆಗೆ ಕರೆದೊಯ್ದ ಮಾಹಿತಿ ಇದೆ. ರಾಜೇಶ್ ಕಿಣಿ ಇಂದು ಗೇರುಸೊಪ್ಪಾ ವ್ಯಾಪ್ತಿಗೆ ಬಂದಿದ್ದಂತೂ ನಿಜ… ಬಂದ ಮಾಹಿತಿ ಬಗ್ಗೆ ‌ಸಾಕಷ್ಟು ಪರಾಮರ್ಷೆ ಮಾಡಿದ ಬಳಿಕವೇ ನಾನು ಅದನ್ನ ಇತರರಿಗೆ ತಿಳಿಸ್ತೇನೇ)

ಈ ಮೇಲಿನ ಸಂದೇಶ ಸತ್ಯವಿಲ್ಲ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
ಡಾ. ರಾಜೇಶ ಕಿಣಿ, ತಾಲೂಕು ಆರೊಗ್ಯಧಿಕಾರಿ ಹೊನ್ನಾವರ

error: