April 26, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾದಲ್ಲಿ ನಿಮಾಣವಾಗಲಿರುವ ೫೦ ಲೊಕ್ಷ ರೂಪಾಯಿ ಅನುದಾನದ ರಸ್ತೆಗೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಗುದ್ದಲಿ ಪೂಜೆ ನೇರವೇರಿಸಿದರು..

ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ಪ್ರತಿ ಮಳೆಗಾಲದಲ್ಲಿಯೂ ಸುದ್ದಿಯಾಗುತ್ತಲ್ಲೆ ಇದೆ. ಇಲ್ಲಿನ ರಸ್ತೆ ಅವ್ಯವಸ್ಥೆ ಹೇಗಿತ್ತು ಎಂದರೆ ಬೇಸಿಗೆಯಲ್ಲಿ ಧೂಳು ಹಾಗೂ ಹೊಂಡ ಮಳೆಗಾಲದಲ್ಲಿ ಮಳೆ ನೀರಿನಿಂದಾಗಿ ರಸ್ತೆ ಕೆಸರಿನ ಗದ್ದೆಯಾಗಿತ್ತು. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದೀಗ ಈ ಭಾಗದ ಸಮಸ್ಯೆಗೆ ಬಗೆಹರಿಯಲ್ಲಿದ್ದು ಪ್ರವಾಸೊದ್ಯಮ ಇಲಾಖೆಯಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಇದರಂತೆ ಪಾವಿನಕುರ್ವಾ ಬೀಚ್ ರಸ್ತೆ ೬೫೦ಮಿ ಉದ್ದ ೩ಮೀಟರ್ ಅಗಲದ ಕಾಂಕ್ರೀಟ್ ರಸ್ತೆಗೆ ಶನಿವಾರ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಶನಿವಾರ ಗುದ್ದಲಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿ ಪ್ರವಾಸೊದ್ಯಮ ಇಲಾಖೆಯಡಿ ೧ಕೋಟಿ ಕುಮುಟಾ ಹೊನ್ನಾವರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದು ೫೦ ಲಕ್ಷದ ಕಾಮಗಾರಿಯಲ್ಲಿ ಇಲ್ಲಿಯ ರಸ್ತೆ ಸುಧಾರಣೆಗೆ ಅನುದಾನ ಬಿಡುಗಡೆಯಾಗಿದೆ. ಲೊಕೋಪಯೋಗಿ ಇಲಾಖೆಯಡಿ ಈ ಕಾಮಗಾರಿ ಅನುಷ್ಟಾನವಾಗಲಿದೆ. ಮಳೆಗಾಲದಲ್ಲಿ ಈ ಗ್ರಾಮದವರು ಅನುಭವಿಸುವ ಸಮಸ್ಯೆ ಮುಂದಿನ ದಿನದಲ್ಲಿ ಬಗೆಹರಿಯಲಿದೆ. ಅಲ್ಲದೇ ಹಳದೀಪುರ ತಾರಿಬಾಗಿಲು ರಸ್ತೆಗೆ ೧ ಕೋಟಿ ವೆಚ್ಚದಲ್ಲಿ ಈಗಾಗಲೇ ನಿರ್ಮಣವಾಗಿದ್ದು ಅದರ ಪ್ರಯೋಜನವನ್ನು ಈ ಭಾಗದ ಸಾರ್ವಜನಿಕರು ಅನುಭವಿಸುತ್ತಿದ್ದು ಸಂತಸಗೊAಡಿದ್ದಾರೆ. ಇಂದು ಚಾಲನೆ ನೀಡಿದ ಕಾಮಗಾರಿ ಆದಷ್ಟು ಶಿಘ್ರ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷ ಶ್ರೀಕಾಂತ ಮೋಗೇರ, ತಾಲೂಕ ಪಂಚಾಯತ ಸದಸ್ಯ ತುಕಾರಾಂ ನಾಯ್ಕ, ಬಿಜೆಪಿ ತಾಲೂಕ ಅಧ್ಯಕ್ಷ ರಾಜು ಭಂಡಾರಿ, ಪಪ.ಪಂ ಸದಸ್ಯವಿಜು ಕಾಮತ್, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಯೋಗಾನಂದ ಎ. ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು

error: