October 5, 2024

Bhavana Tv

Its Your Channel

ದಿವಂಗತ ದುರ್ಗಾದಾಸ ಗಂಗೊಳ್ಳಿ ಜನ್ಮದಿನದ ಅಂಗವಾಗಿ ಕುಮಟಾದ ತಾಲೂಕಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಯಕ್ಷಗಾನ ಕಲೆ ಸೇರಿದಂತೆ ಇತರೆ ಕಲೆ ಹಾಗೂ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಸಂಯೋಜಿಸಿ ಜೊತೆಗೆ ಅಶಕ್ತ ಕಲಾವಿದರುಗಳಿಗೆ ನೆರವಾಗುವ ಮೂಲಕ ಗುರುತಿಸಿಕೊಂಡಿದ್ದರು.ಅವರು ಮರಣದ ನಂತರ ಶ್ರೀಧರ್ ನಾಯ್ಕ ವಕ್ನಳ್ಳಿಯವರ ನೇತೃತ್ವದಲ್ಲಿ ಇಂದಿಗೂ ಸಮಾಜಿಮುಖಿ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುತ್ತ ಬಂದಿದ್ದಾರೆ.ಈ ನಿಟ್ಟಿನಲ್ಲಿ ಇಂದು ದಿ.ದುರ್ಗಾದಾಸ ಗಂಗೊಳ್ಳಿಯವರ ಜನ್ಮದಿನದ ಪ್ರಯುಕ್ತ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಶ್ರೀನಿವಾಸ ನಾಯಕ ಮಾತನಾಡಿ ದಿ.ಗುರ್ಗಾದಾಸ ಗಂಗೊಳ್ಳಿಯವರ ನೆನಪಿಗಾಗಿ ಪ್ರತಿವರ್ಷ ಸರ್ಕಾರಿ ಆಸ್ಪತ್ರೆಗೆ ಬಂದು ಹಣ್ಣು ಹಂಪಲು ವಿತರಿಸಿ ಆಸ್ಪತ್ರೆಯ ರೋಗಿಗಳ ಯೋಗಕ್ಷೇಮ ವಿಚಾರಿಸುವ ಇವರ ಕಾರ್ಯ ಅಭಿನಂದನಾರ್ಹ.ಇವರ ಈ ಸಮಾಜಮುಖಿ ಕಾರ್ಯ ಹೀಗೆಯೇ ಮುಂದುವರೆದು ಅನೇಕರಿಗೆ ನೆರವಾಗಲಿ ಎಂದು ಸಂತಸ ವ್ಯಕ್ತಪಡಿಸಿದ ಅವರು, ಜನರು ತಮ್ಮ ವಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು.ಕೊರೊನಾದಂತಹ ಅಪಾಯಕಾರಿ ಸಾಂಕ್ರಾಮಿಕ ರೋಗದಿಂದ ತಪ್ಪಿಸಿಕೊಳ್ಳಲು ಸಾದ್ಯವಿದೆ ಎಂದು ಆರೋಗ್ಯದ ಕುರಿತು ಬರೆದ ಸಾರ್ವಜನಿಕರಿಗಾಗಿ ಮಾಹಿತಿ ನೀಡಿದರು.
ನಂತರ ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಮಾತನಾಡಿ ಕಲೆಯ ಆರಾಧಕರಾಗಿರುವ ದಿ.ದುರ್ಗಾದಾಸ ಗಂಗೊಳ್ಳಿಯವರ ಜನ್ಮದಿನದ ಅಂಗವಾಗಿ ಇಂತಹ ಸೇವಾಕಾರ್ಯ ಹಮ್ಮಿಕೊಂಡಿರುವುದು ಬಹಳ ಸಂತಸ. ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಬಡ ಕಲಾವಿದರ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಅನೇಕರಿಗೆ ಕಲಾಗಂಗೋತ್ರಿ ತಂಡ ನೆರವಾಗಿದೆ ನೆರವಾಗುತ್ತಿದೆ. ಇವರ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದರು.
ಈ ಸಂದರ್ಭದಲ್ಲಿ ದುರ್ಗಾದಾಸ, ಗಂಗೊಳ್ಳಿಯವರ ಅಣ್ಣ ರವಿ ಗಂಗೊಳ್ಳಿ, ಕಲಾಗಂಗೋತ್ರಿ ಅಧ್ಯಕ್ಷ ಶ್ರೀಧರ ನಾಯ್ಕ,ಗಣೇಶ ಭಟ್ಟ,ಎಮ್.ಟಿ.ನಾಯ್ಕ,ರವಿ ನಾಯ್ಕ,ಅಶೋಕ ಗೌಡ,ವಿ.ಎಸ್ ನಾವುಡ, ಆಸ್ಪತ್ರೆ ವೈದ್ಯಾಧಿಕಾರಿ ಗಣೇಶ ಟಿ.ಎಚ್ ಮುಂತಾದವರು ಇದ್ದರು.

error: