September 14, 2024

Bhavana Tv

Its Your Channel

ಅಕ್ರಮ ಪ್ರವೇಶ ಮಾಡಿ ಕಡವೆಯೊಂದನ್ನು ಭೇಟೆ ಮಾಡಿದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿ

ಕೊಡಗು :ಮೀಸಲು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ ಮಾಡಿ ಕಡವೆಯೊಂದನ್ನು ಭೇಟೆ ಮಾಡಿದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ದುಬಾರೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಭೇಟೆ ಮಾಡಿ ಸ್ಥಳದಲ್ಲೇ ಮಾಂಸ ಮಾಡಿ ಹೊಸಪಟ್ಟಣ ಮೂಲಕ ಬರುತ್ತಿದ್ದ ಸಂದರ್ಭದಲ್ಲಿ ಗಸ್ತಿನಲ್ಲಿ ಇದ್ದ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು 10 ಕೆಜಿ ಕಡವೆ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜರಾಯಪಟ್ಟಣ ಸಮೀಪದ ಹೊಸಪಟ್ಟಣ ನಿವಾಸಿಗಳಾದ ಮಹೇಶ್, ವಿಶ್ವನಾಥ್ ಮತ್ತು ಚಂದ್ರಶೇಖರ ಎಂಬ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ.

error: