December 6, 2024

Bhavana Tv

Its Your Channel

ಓರ್ವ ಬ್ಯಾಂಕ್ ಜವಾನ ಸೇರಿದಂತೆ ಮೂವರ ಬಂಧನ

ಕೊಡಗು : ಕೊಡಗು ಹಾಗೂ ಹಾಸನ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲೂ ದುಷ್ಕೃತ್ಯಗಳನ್ನು ಎಸಗಿರುವ ಸಂಬಂಧ ಶನಿವಾರಸಂತೆ ಪೋಲೀಸರು ಓರ್ವ ಬ್ಯಾಂಕ್ ಜವಾನ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಈ ಮೂವರು ಇದುವರೆಗೆ 34 ಕೃತ್ಯಗಳನ್ನು ನಡೆಸಿದ್ದು, 13 ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದರು ಎನ್ನಲಾಗಿದೆ. ಬಂದಿತರಿಂದ 1.80 ಲಕ್ಷ ದ ಚಿನ್ನಾಭರಣ 3 ಸಾವಿರದ ಬೆಳ್ಳಿ ಆಭರಣ, ಒಂದು ಮೊಬೈಲ್, ಸ್ಕ್ರೂಡ್ರೈವರ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂದಿತರಲ್ಲಿ ಒಬ್ಬಾತ ಸೋಮವಾರಪೇಟೆ ಶಾಖೆಯ ಕಾರ್ಪೋರೇಷನ್ ಬ್ಯಾಂಕು ಜವಾನ ಗಣೇಶ್ ಪ್ರಸಾದ್, ಇಲ್ಲಿನ ರೇಂಜರ್ ಬ್ಲಾಕ್ ನಿವಾಸಿ ಮುರುಗೇಶ್, ಕೊಡ್ಲಿಪೇಟೆಯ ಸಣ್ಣಪ್ಪ ಅಲಿಯಾಸ್ ಡೀಲಾಕ್ಷ ಎಂಬುವರನ್ನು ಬಂಧಿಸಲಾಗಿದೆ. ಪೋಲಿಸ್ ವರಿಷ್ಠಾಧಿಕಾರಿ ಡಾ. ಸುಮನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: