March 29, 2024

Bhavana Tv

Its Your Channel

ಕೂಡ್ಲಿಗಿ ಆಡಳಿತ ಕೇಂದ್ರಗಳಲ್ಲಿ ಹೆಂಗಸರ ಹೆಸರಲ್ಲಿ ಗಂಡಸರದ್ದೇ ದಭಾ೯ರು:

ನಿಲ್ಲದ ಶೋಷಣೆ-ಮಹಿಳಾ ಜನಪ್ರತಿನಿಧಿಗಳ ಆಕ್ರೋಶ,ಸೂಕ್ತ ಕ್ರಮಕ್ಕಾಗಿ ಡಿಸಿಗೆ ಮನವಿ<->

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ತಾಲೂಕು ಪಂಚಾಯ್ತಿ.ಪಟ್ಟಣಪಂಚಾಯ್ತಿಗ್ರಾಮಪಂಚಾಯ್ತಿ.ಸೇರಿದಂತೆ ಬಹುತೇಕ ಆಡಳಿತ ಕ್ಷೇತ್ರಗಳಲ್ಲಿ. ಮಹಿಳಾ ಜನಪ್ರತಿನಿಧಿಗಳ ಹೆಸರಲ್ಲಿ ಅವರ ಕುಟುಂಬದ ಗಂಡಸರು ದಭಾ೯ರು ನಡೆಸುತ್ತಿದ್ದಾರೆ.ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಅವರ ತಾಳಕ್ಕೆ ತಕ್ಕಂತೆ ಸ್ಪಂಧಿಸುವ ಮೂಲಕ ಕಾನೂನಿ ನಿಯಮ ಉಲ್ಲಂಘಿಸುತ್ತಿದ್ದಾರೆಂದು ಹೆಸರು ಹೇಳಲು ಬಯಸದ ತಾಲೂಕಿನ ಹಲವು ಮಹಿಳಾ ಜನಪ್ರತಿನಿಧಿಗಳು ಗಂಡಸರ ದಭಾ೯ರಿನ ವಿರುದ್ಧ ತೀವ್ರಆಕ್ರೋಶ ವ್ಯೆಕ್ತಪಡಿಸಿದ್ದಾರೆ.ಸಕಾ೯ರ ಮಹಿಳೆಯರಿಗಾಗಿ ಮೀಸಲಾತಿ ಜಾರಿತಂದಿದೆ ಆದ್ರೆ ಅದು ಅನುಸ್ಟಾನಕ್ಕೆ ಬರುತ್ತಿಲ್ಲ ಎಂದು ಅವರು ದೂರಿದ್ದಾರೆ.ಜಿಲ್ಲಾಪಂಚಾಯ್ತಿ.ತಾಲೂಕುಪಂಚಾಯ್ತಿ.ಗ್ರಾಮಪಂಚಾಯ್ತಿ.ಎಪಿಎಂಸಿ.ಪಟ್ಟಣಪಂಚಾಯ್ತಿ.ಸಹಕಾರಸಂಘ.ಎಸ್.ಡಿ.ಎಮ್.ಸಿ.ಸೇರಿದಂತೆ ಎಲ್ಲಾ ಕಕ್ಷೇತ್ರಗಳಲ್ಲಿಯೂ ಹೆಂಗಸರ ಹೆಸರಲ್ಲಿ ಗಂಡಸರ ದಭಾ೯ರು ನಡೆಸಲಾಗುತ್ತಿದೆ.ಸಕಾ೯ರಿ ಸಭೆ ಸಮಾರಂಭಗಳಲ್ಲಿ.ಅಷ್ಟೇ ಅಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರು. ಸಂಸದರು ಮಹಿಳಾ ಜನಪ್ರತಿನಿಧಿಗಳಿಗೆ ಮಾನ್ಯ ಮಾಡುವುದು ತೀರಾ ವಿರಳವಾಗಿದೆ.ಬದಲಾಗಿ ಅವರ ಕುಟುಂಬದ ಸದಸ್ಯರಿಗೆ ಮನ್ನಣೆ ನೀಡುತ್ತಿದ್ದಾರೆ ಇದು ನಿಜಕ್ಕೂ ಅನಾಗರೀಕ ಲಕ್ಷಣವಾಗಿದೆ.ಈ ಮೂಲಕ ಸಕಾ೯ರ ಒದಗಿಸಿರುವ ಮಹಿಳಾ ಮೀಸಲಾತಿಯ ಧೆಯೋದ್ಧೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ. ಕಾನೂನಿನ ನಿಯಮಗಳನ್ನು ಸಂಪೂಣ೯ವಾಗಿ ಮೀರಿಲಾಗುತ್ತಿದೆ.ಹೆಂಗಸರ ಹೆಸರಲ್ಲಿ ಅವರ ಕುಟುಂಬ ಸದಸ್ಯರು ಸಂಬಂದಪಟ್ಟ ಆಡಳಿತ ಕೇಂದ್ರಗಳಲ್ಲಿ ಅಧಿಕಾರಿಗಳ ಮೇಲೆ ಧಪ೯ತೋರುತ್ತಾರೆ ಮತ್ತು ಸಾವ೯ಜನಿಕ ವಲಯದಲ್ಲಿ ಅಂಧಾಃ ದಭಾ೯ರು ನಡೆಸುವುದು ಅವರ ಹೆಂಗಸರ ಹೆಸರಲ್ಲಿ ಇವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಕಾನೂನು ಉಲ್ಲಂಘನೆ ಹಾಗೂ ಅಕ್ಷಮ್ಯ ಅಪರಾಧವಾಗಿದೆ.ಅಂತಹ ಡೋಂಗೀ ಜನಪ್ರತಿನಿಧಿಗಳಿಗೆ ಮಣೆಹಾಕುವ ಬ್ರಷ್ಠ ಅಧಿಕಾರಿಗಳ ವಿರುದ್ಧ ಸಾವ೯ಜನಿಕರು ಸಾವ೯ಜನಿಕ ಹಿತಾಸಕ್ತಿ ಪ್ರಖರಣ ದಾಖಲು ಮಾಡಬಹುದಾಗಿದೆ.ಅಗತ್ಯ ಸಾಕಕ್ಷಿ ದಾಖಲುಗಳ ಸಮೇತ ಹೆಂಗಸರ ಹೆಸರಿನಲ್ಲಿ ದಭಾ೯ರು ನಡೆಸುವ ಡೋಂಗೀ ಜನಪ್ರತಿನಿಧಿಯ ಗಂಡಸಿನ ಹಿರುದ್ಧ ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಬಹುದು ಮತ್ತು ರಾಜ್ಯಪಾಲರಿಗೆ ಸದಸ್ಯತ್ವ ರದ್ಧತಿಗೆ ಲಿಖಿತ ದೂರುಸಲ್ಲಿಸ ಬಹುದಾಗಿದೆ.ಇದನ್ನು ಸಾವ೯ಜನಿಕರು ಹಾಗೂ ಮಹಿಳಾಸಂಘಗಳು ಸದುಪಯೋಗಪಡೆದುಕೋಳ್ಳಬುದಾಗಿದೆ ಎಂದರು. ಜಿಪಂ.ತಾಪಂ.ಗ್ರಾಪಂ.ಹಾಗೂ ಎಲ್ಲಾ ಕಕ್ಷೇತ್ರಗಳಲ್ಲಿ ಸ್ಥಳೀಯ ಆಡಳಿತಗಳಲ್ಲಿ ಸ್ವತಹಃ ಮಹಿಳೆಯರ ಸಹಭಾಗಿತ್ವಕ್ಕೆ ಮಾನ್ಯತೆ ಕೊಡಬೇಕು.ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಸಕರು.ಸಂಸದರು.ತಹಶೀಲ್ದಾರರು.ತಾಲೂಕುಪಂಚಾಯ್ತಿ ಅಧಿಕಾರಿಗಳು.ಗ್ರಾಮಪಂಚಾಯ್ತಿ ಅಭಿವೃದ್ಧಿಅಧಿಕಾರಿಗಳು ಮಹಿಳಾ ಜನಪ್ರತಿನಿಧಿಗಳ ಪರ ಅವರ ಕುಟುಂಬ ಸದಸ್ಯರಿಗೆ ಅನಗತ್ಯ ಮಾನ್ಯತೆ ನೀಡಬಾರದು ಅಥವಾ ಮನ್ನಣೆ ನೀಡಬಾರದು.ಬದಲಾಗಿ ಖುದ್ದು ಮಹಿಳಾ ಜನಪ್ರತಿನಿಧಿಗೆ ಮಾತ್ರ ಮನ್ನಣೆ ನೀಡಬೇಕು ಇದು ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂದು ಮಹಿಳಾ ಜನಪ್ರತಿನಿಧಿಗಳು ಈ ಮೂಲಕ ಸೂಕ್ತ ಕ್ರಮ ಜರುಗಿಸಬೇಕೆಂದು ಮಹಿಳಾ ಜಿನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ

error: