December 6, 2024

Bhavana Tv

Its Your Channel

ಇದ್ದಕ್ಕಿದ್ದಂತೆ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಬೆಂಕಿ

ಕಾರವಾರ ;ಮೀನು ಮಾರುಕಟ್ಟೆಗೆ ಮೀನು ಖರೀದಿಸಲು ತೆರಳಿದ್ದ ಸಾಯಿಕಟ್ಟಾದ ರೂಪೇಶ್ ಆಚಾರಿ ಎನ್ನುವವರು, ಬೈಕ್ ಅನ್ನು ಬಿಸಿಲಿನಲ್ಲಿ ನಿಲ್ಲಿಸಿ ತೆರಳಿದ್ದರು ಮೀನು ಖರೀದಿ. ಬಳಿಕ ವಾಪಸ್ ತೆರಳುತ್ತಿದ್ದಂತೆ ಸ್ವಲ್ಪ ದೂರದವರೆಗೆ ಚಲಿಸಿದ ಬೈಕ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಕೆಳಗಿಳಿದು ಬೈಕ್ ಪರಿಶೀಲಿಸಿದಾಗ ಬೈಕ್ ನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗುತ್ತಿತ್ತು. ಈ ವೇಳೆ ಸ್ಥಳೀಯರೆಲ್ಲ ಸೇರಿ ಮರಳು ಹಾಕಿ ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಫಲಕಾರಿಯಾಗಲಿಲ್ಲ. ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಸುತ್ತಲಿದ್ದವರೂ ಭಯಭೀತಗೊಂಡು ದೂರ ಸರಿದರು. ಸ್ಥಳದಲ್ಲೇ ಇದ್ದ ಸಂಚಾರ ಪೊಲೀಸರು ಬಳಿಕ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯ ಮಾಡಿದರು. ಅಷ್ಟರಲ್ಲಿ ಬೈಕ್ ಸುಟ್ಟು ಕರಕಲಾಗಿತ್ತು.

error: