May 26, 2023

Bhavana Tv

Its Your Channel

ಕರೋನಾ ಬಗ್ಗೆ ಭಯಬೇಡ ಆರೊಗ್ಯ ಇಲಾಖೆಯ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸೈ ಕರೆನೀಡಿದ್ದಾರೆ.

ದೇಶ ವಿದೇಶದಲ್ಲಿ ಕೊರೋನಾ ಹೆಮ್ಮಾರಿಯಾಗಿ ಕಾಡುತ್ತಿದೆ. ಕರ್ನಾಟಕದಲ್ಲಿ ಸರ್ಕಾರ ಅನೇಕ ಕ್ರಮ ಕೈಗೊಳ್ಳುತ್ತಿದೆ ಸಾರ್ವಜನಿಕರಿಗೆ ಗೊಂದಲ ಬೇಡ. ಸುಳ್ಳುಸುದ್ದಿಗಳಿಗೆ ಯಾರು ನಂಬಬೇಡಿ ಅಂತಹ ಸುದ್ದಿ ಹರಡುವವರ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಆರೊಗ್ಯ ಸಚೀವರು ಮತ್ತು ವೈದ್ಯಕೀಯ ಶಿಕ್ಷಣ ಸಚೀವರು ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರ ಕೈಗೊಂಡ ಕ್ರಮ ತಿಳಿಸಿದ್ದು ಮಾಧ್ಯಮದ ಮೂಲಕ ರಾಜ್ಯದ ಜನತೆಗೆ ತಿಳಿದಿದೆ. ವಿದೇಶದಿಂದ ಆಗಮಿಸಿದ ಪ್ರವಾಸಿಗರು ಮತ್ತು ನಮ್ಮ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದವರ ಮೇಲೆ ನಿಗಾವಹಿಸಲಾಗಿದೆ ಅವರಲ್ಲಿ ವಿನಮ್ರವಾಗಿ ಕೇಳಿಕೊಳ್ಳುದನೆಂದರೆ ಆರೊಗ್ಯ ಇಲಾಖೆಯ ಅಧಿಕಾರಿಗಳ ಸಚೀವರ ಸಲಹೆಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದರು. ರಾಜ್ಯದ ಜನತೆ ಗಾಬರಿಯಾಗಬೇಡಿ ಸುರಕ್ಷತಾ ಕ್ರಮ ಆರೊಗ್ಯಧಿಕಾರಿಗಳ ಮಾಹಿತಿ ಪಾಲಿಸಿ ಅನಾರೊಗ್ಯ ಉಂಟಾದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.

About Post Author

error: